ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಟ್ರಕ್ ಚಕ್ರಕ್ಕೆ ಸಿಕ್ಕಿ ಭಾರತೀಯ ಅಕ್ರಮ ವಲಸಿಗನ ಸಾವು
ಲಂಡನ್, ಶನಿವಾರ, 6 ಸೆಪ್ಟೆಂಬರ್ 2008   ( 11:02 IST )
ಬೆಲ್ಜಿಯಂನಿಂದ ಬರುತ್ತಿದ್ದ ಟ್ರಕ್‌ನಲ್ಲಿ ತುಂಬಿದ ಟೈರ್‌ಗಳ ನಡುವೆ ಅಡಗಿಗೊಂಡು ಬ್ರಿಟನ್‌ಗೆ ಪ್ರವೇಶಿಸಲು ಯತ್ನಿಸಿದ ಭಾರತೀಯ ಅಕ್ರಮ ವಲಸೆಗಾರನೊಬ್ಬ ಟ್ರಕ್ಕಿನ ಚಕ್ರದಡಿ ಸಿಕ್ಕಿ ಸಾವಪ್ಪಿದ ಘಟನೆ ನಡೆದಿದೆ. 33 ವರ್ಷ ವಯಸ್ಸಿನ ಬಾಜ್ ಸಿಂಗ್ ಪಂಜಾಬಿನ ಮ‌ೂಲದವನಾಗಿದ್ದು, ಸ್ಟಾಫರ್ಡ್‌ಶೈರ್‌ನ ಟ್ರೆಂಟ್‌ವಿಲೆ ಬಳಿ ಟೈರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ಕಿನಿಂದ ಹಾರಲು ಯತ್ನಿಸಿದಾಗ ಟ್ರಕ್ ಚಕ್ರಕ್ಕೆ ಸಿಕ್ಕಿ ಸತ್ತಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಯುರೋಪ್‌ನಿಂದ ಬ್ರಿಟನ್‌ಗೆ ಅಕ್ರಮ ಪ್ರವೇಶಕ್ಕೆ ಟ್ರಕ್‌ನ ಸಣ್ಣ ಸ್ಥಳಗಳಲ್ಲಿ ಅಡಗಿ ಪ್ರಯಾಣಿಸುವುದು ಸಾಮಾನ್ಯ ಮಾರ್ಗಗಳಲ್ಲಿ ಒಂದಾಗಿದೆ. ಇಂತಹ ಅಕ್ರಮ ಪ್ರವೇಶ ತಡೆಯಲು ಬ್ರಿಟನ್ ಸರ್ಕಾರ ಫ್ರಾನ್ಸ್ ಜತೆ ಪ್ರಯತ್ನಿಸುತ್ತಿದೆ. ಟ್ರಕ್‌ನಲ್ಲಿದ್ದ ಟೈರ್‌ಗಳನ್ನು ಜರ್ಮನಿಯಲ್ಲಿ ತುಂಬಿ ಬೆಲ್ಜಿಯಂನಲ್ಲಿ ನಿಲ್ಲಿಸಲಾಗಿತ್ತು.

ಮೃತ ಮತ್ತು ಇನ್ನೊಬ್ಬ ವ್ಯಕ್ತಿ ಟ್ರಕ್‌ ಟ್ರೈಲರ್‌ನೊಳಗೆ ಯಾವ ಸಂದರ್ಭದಲ್ಲಿ ಪ್ರವೇಶಿಸಿದರೆಂದು ತಿಳಿದುಬಂದಿಲ್ಲ. ಟ್ರಕ್ ಚಾಲಕ ರಾಬರ್ಟ್ ಕಿಡ್ನಿ ಕ್ಯಾಬ್‌ನಿಂದ ಹೊರಗೆ ಬರುತ್ತಿದ್ದಂತೆ, ರಸ್ತೆಯಲ್ಲಿ ದೇಹ ಬಿದ್ದಿರುವುದು ಪತ್ತೆಯಾಯಿತು. ಮೃತನ ತಲೆಯು 40 ಟನ್ ಲಾರಿಯ ಚಕ್ರಕ್ಕೆ ಸಿಕ್ಕಿ ನಜ್ಜುಗುಜ್ಜಾಗಿತ್ತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದಾಖಲೆಯ ಅಂಶಗಳನ್ನು ಬಚ್ಚಿಟ್ಟಿಲ್ಲ: ಅಮೆರಿಕ
ಇರಾಕ್ ಪ್ರಧಾನಿ ವಿರುದ್ಧ ಅಮೆರಿಕ ಬೇಹುಗಾರಿಕೆ
ಅಣುಬಂಧ: ಪ್ರಣವ್ ಹೇಳಿಕೆಗೆ ಎನ್‌ಎಸ್‌ಜಿ ಸ್ವಾಗತ
ದ್ವೀಪಗಳ ಮೇಲೆ ಜಪಾನ್ ಹಕ್ಕಿಗೆ ಕೊರಿಯ ಖಂಡನೆ
ಪಾಕ್‌ನಲ್ಲಿ ಕ್ಷಿಪಣಿ ದಾಳಿಗೆ ಮ‌ೂವರು ಮಕ್ಕಳು ಬಲಿ
ಕಂಡೋಲೀಜಾ ರೈಸ್ ಲಿಬ್ಯಾಗೆ ಐತಿಹಾಸಿಕ ಭೇಟಿ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್‌ಗೆ ಸರ್ಕಾರ ಬದ್ಧ: ಯಡಿಯ‌ೂರಪ್ಪ
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ...
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಮುಂದೆ ಓದಿ|ಮತ್ತಷ್ಟು...