|
| ದಾಖಲೆಯ ಅಂಶಗಳನ್ನು ಬಚ್ಚಿಟ್ಟಿಲ್ಲ: ಅಮೆರಿಕ |
| ವಾಷಿಂಗ್ಟನ್, ಶುಕ್ರವಾರ, 5 ಸೆಪ್ಟೆಂಬರ್ 2008 ( 19:52 IST ) | |
ಭಾರತ-ಅಮೆರಿಕ ಅಣುಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕವು ಒಪ್ಪಂದದ ದಾಖಲೆಯಲ್ಲಿ ನಮೂದಾಗಿರುವ ಅಂಶಗಳನ್ನು ಮುಚ್ಚಿಟ್ಟಿದೆ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಅಮೆರಿಕ, ಅಣ್ವಸ್ತ್ರ ಪರೀಕ್ಷೆಯ ಸ್ಥಗಿತಕ್ಕೆ ಭಾರತದ ಬದ್ಧತೆಯು ಒಪ್ಪಂದದಲ್ಲಿ ಸುಸ್ಪಷ್ಟವಾಗಿದೆ ಎಂದು ಹೇಳಿದೆ.
123 ಒಪ್ಪಂದದಲ್ಲಿ ಭಾರತದ ಜವಾಬ್ದಾರಿಗಳು ಅತ್ಯಂತ ಸ್ಪಷ್ಟವಾಗಿದೆ ಮತ್ತು ಭಾರತೀಯರು ಅಣುಪರೀಕ್ಷೆಯ ಸ್ಥಗಿತಕ್ಕೆ ಒಪ್ಪಿದ್ದಾರೆ ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ವಕ್ತಾರ ರಾಬರ್ಟ್ ವುಡ್ ಹೇಳಿದ್ದಾರೆ.
ಭಾರತವು ಅಣ್ವಸ್ತ್ರಗಳ ಪರೀಕ್ಷೆ ನಡೆಸಿದಲ್ಲಿ ಅಮೆರಿಕ ಪರಮಾಣು ಸಾಮಗ್ರಿ ಪೂರೈಕೆ ಮಾಡದು ಎಂಬುದಾಗಿ ಅಮೆರಿಕ ಆಡಳಿತೆಯು ಅಮೆರಿಕ ಕಾಂಗ್ರೆಸ್‌ಗೆ ಬರೆದಿರುವ ಪತ್ರ ಬುಧವಾರ ಬಹಿರಂಗಗೊಂಡಿದೆ.
ಒಂಭತ್ತು ತಿಂಗಳಿನಿಂದ ರಹಸ್ಯವಾಗಿದ್ದ ಈ ವಿಶೇಷ ಪತ್ರವನ್ನು ಬುಧವಾರ ಅಮೆರಿಕ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಹೋವರ್ಡ್ ಎಲ್ ಬರ್ಮನ್ ಬಹಿರಂಗ ಪಡಿಸಿದ್ದು, ಪತ್ರವು ಅಮೆರಿಕದ ಪ್ರಮುಖ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು.
ಏತನ್ಮಧ್ಯೆ, ಈ ಹೊಸ ವಿವಾದವನ್ನು ನಿರಾಕರಿಸಿರುವ ಕಾಂಗ್ರೆಸ್, ಭಾರತವು ತನ್ನ ಪರಮಾಣು ಪರೀಕ್ಷೆಯ ಹಕ್ಕನ್ನು ಕಳೆದುಕೊಂಡಿಲ್ಲ, 123 ಒಪ್ಪಂದದ ಪ್ರಕಾರ ರಾಷ್ಟ್ರವು ಪರಮಾಣು ಪರೀಕ್ಷೆಯ ಹಕ್ಕನ್ನು ಹೊಂದಿಗೆ ಎಂದು ಸಮರ್ಥಿಸಿಕೊಂಡಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ. |
| |
|
|
|
|
|
|
|