|
| ಇರಾಕ್ ಪ್ರಧಾನಿ ವಿರುದ್ಧ ಅಮೆರಿಕ ಬೇಹುಗಾರಿಕೆ |
| ವಾಷಿಂಗ್ಟನ್, ಶುಕ್ರವಾರ, 5 ಸೆಪ್ಟೆಂಬರ್ 2008 ( 19:37 IST ) | |
ಇರಾಕ್ ಜತೆ ಸದೃಢ ಬಾಂಧವ್ಯ ಇಟ್ಟುಕೊಳ್ಳುವ ಭರವಸೆ ನಡುವೆಯೂ ಅಮೆರಿಕವು ಇರಾಕಿನ ಪ್ರಧಾನಂತ್ರಿ ನೌರಿ ಅಲ್ ಮಲಿಕಿ ಮತ್ತು ಅವರ ಸರ್ಕಾರದ ವಿರುದ್ಧ ಬೇಹುಗಾರಿಕೆ ನಡೆಸಿತು ಎಂದು ಹೊಸ ಪುಸ್ತಕವೊಂದರಲ್ಲಿ ತಿಳಿಸಲಾಗಿದೆ. ವಾಷಿಂಗ್ಟನ್ ಪೋಸ್ಟ್ ತನಿಖಾ ವರದಿಗಾರ ಬಾಬ್ ವುಡ್‌ವಾರ್ಡ್ ಬರೆದಿರುವ ಈ ಪುಸ್ತಕವು ಈ ಬೇಹುಗಾರಿಕೆಯು ಹಿರಿಯ ಅಮೆರಿಕದ ಅಧಿಕಾರಿಗಳನ್ನು ಕೂಡ ಚಿಂತಿತರನ್ನಾಗಿ ಮಾಡಿತು ಎಂದು ವಾಷಿಂಗ್ಟನ್ ಪೋಸ್ಟ್ ಬರೆದಿದೆ.
ಬುಷ್ ಆಡಳಿತದಲ್ಲಿ ಭಿನ್ನಮತವು ಉದ್ಭವಿಸಿದ ಬಗ್ಗೆ ವುಡ್ವಾರ್ಡ್ ಬಿಂಬಿಸಿದ್ದು, 2006ರ ಕೊನೆಯಲ್ಲಿ ಇರಾಕ್‌ಗೆ ಹೆಚ್ಚು ಪಡೆಗಳನ್ನು ನಿಯೋಜಿಸುವ ಅಧ್ಯಕ್ಷರ ಯೋಜನೆ ಬಗ್ಗೆ ಉನ್ನತ ಸೇನಾಧಿಕಾರಿಗಳು ಬಂಡಾಯವೇಳುವುದಕ್ಕೆ ಹತ್ತಿರದಲ್ಲಿದ್ದರು ಎಂದು ಬರೆದಿದ್ದಾರೆ.
ತಮ್ಮ ಸಲಹೆಯು ಅಧ್ಯಕ್ಷರನ್ನು ಮುಟ್ಟುತ್ತಿಲ್ಲ ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥರು ನಂಬಿದ್ದರು. ಆಗಿನ ಅಡ್ಮೈರಲ್ ಮೈಕಲ್ ಮುಲ್ಲೆನ್ ಇರಾಕ್ ವೈಫಲ್ಯಕ್ಕೆ ಅಮೆರಿಕ ಮಿಲಿಟರಿ ತಿರಸ್ಕಾರಕ್ಕೆ ಗುರಿಯಾಗಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆಂದು ಪುಸ್ತಕದಲ್ಲಿ ತಿಳಿಸಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ. |
| |
|
|
|
|
|
|
|