ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಅಣುಬಂಧ: ಪ್ರಣವ್ ಹೇಳಿಕೆಗೆ ಎನ್‌ಎಸ್‌ಜಿ ಸ್ವಾಗತ
ವಾಷಿಂಗ್ಟನ್, ಶುಕ್ರವಾರ, 5 ಸೆಪ್ಟೆಂಬರ್ 2008   ( 18:55 IST )
ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಸಮ್ಮತಿ ಪಡೆಯುವ ನಿಟ್ಟಿನಲ್ಲಿ, ಭಾರತದ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅವರು ಶುಕ್ರವಾರ ನೀಡಿರುವ ಹೇಳಿಕೆಯನ್ನು ಸ್ವಾಗತಿಸುವುದಾಗಿ ಎನ್‌ಎಸ್‌ಜಿ ತಿಳಿಸಿದೆ.

ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಅಣು ಪರೀಕ್ಷೆಯ ಕುರಿತ ತನ್ನ ಏಕಪಕ್ಷೀಯ ಪ್ರಸರಣ ನಿಷೇಧಕ್ಕೆ ಬದ್ಧವಾಗಿದೆ ಮತ್ತು ಭಾರತವು ಎಂದಿಗೂ ಪ್ರಥಮವಾಗಿ ಅಣ್ವಸ್ತ್ರಗಳನ್ನು ಬಳಸದು ಎಂಬ ತನ್ನ ನೀತಿಗೆ ಬದ್ಧವಾಗಿದೆ ಎಂದು ಪ್ರಣಬ್ ಹೇಳಿಕೆ ನೀಡಿದ್ದರು.

ಅಲ್ಲದೇ ವಿದಳನ ಸಾಮಗ್ರಿ ನಿಯಂತ್ರಣ ಒಪ್ಪಂದಕ್ಕೂ (ಫಿಸೈಲ್ ಮೆಟಿರಿಯಲ್ಸ್ ಕಟ್ ಒಫ್ ಟ್ರೀಟಿ) ಬದ್ಧವಾಗಿರುವುದಾಗಿ ಪ್ರಣಬ್ ಅಣು ಒಪ್ಪಂದಕ್ಕೆ ಪೂರಕವಾದ ಹೇಳಿಕೆ ನೀಡಿದ್ದಾರೆ.

ಇದೀಗ ವಿಯೆನ್ನಾದಲ್ಲಿ ನಡೆಯುತ್ತಿರುವ 2ನೇ ದಿನದ ಎನ್ಎಸ್‌ಜಿ ಸಭೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಅಣು ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ದೊರೆಯುವ ನಿರೀಕ್ಷೆ ಇರುವುದಾಗಿ ಭಾರತ ಭರವಸೆ ವ್ಯಕ್ತಪಡಿಸಿದೆ.

ಅದಕ್ಕೆ ಪೂರಕ ಎಂಬಂತೆ ಜಪಾನ್ ಮತ್ತು ಚೀನಾ ದೇಶಗಳೆರಡೂ ಈ ಮೊದಲು ವಿರೋಧ ವ್ಯಕ್ತಪಡಿಸಿದ್ದರೂ ಕೂಡ,ಇಂದಿನ ಸಭೆಯಲ್ಲಿ ತಮ್ಮ ಸಮ್ಮತಿ ಇರುವುದಾಗಿ ಹೇಳಿವೆ.

ಆಸ್ಟ್ರಿಯಾಕ್ಕೆ ಅಮೆರಿಕ ಒತ್ತಡ: ಅಣು ಒಪ್ಪಂದದ ಪರಿಷ್ಕೃತ ಕರಡಿಗೆ ಆಸ್ಟ್ರಿಯಾ ತನ್ನ ವಿರೋಧವನ್ನು ಮುಂದುವರಿಸಿರುವ ಕಾರಣ,ಒಪ್ಪಂದಕ್ಕೆ ಬೆಂಬಲ ನೀಡುವಂತೆ ಅಮೆರಿಕ ಆಸ್ಟ್ರಿಯಾದ ಮೇಲೆ ಒತ್ತಡ ಹೇರಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದ್ವೀಪಗಳ ಮೇಲೆ ಜಪಾನ್ ಹಕ್ಕಿಗೆ ಕೊರಿಯ ಖಂಡನೆ
ಪಾಕ್‌ನಲ್ಲಿ ಕ್ಷಿಪಣಿ ದಾಳಿಗೆ ಮ‌ೂವರು ಮಕ್ಕಳು ಬಲಿ
ಕಂಡೋಲೀಜಾ ರೈಸ್ ಲಿಬ್ಯಾಗೆ ಐತಿಹಾಸಿಕ ಭೇಟಿ
ಲಾಡೆನ್‌ನನ್ನು ಹಿಡಿಯಲು ತಮಗೆ ಮಾತ್ರ ಸಾಧ್ಯ: ಮೆಕೈನ್
ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ: ಅಮೆರಿಕ
ಅಧ್ಯಕ್ಷರ ಅಧಿಕಾರ ಮೊಟಕು ಮಾಡಲು ಜರ್ದಾರಿ ಶಪಥ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಸೋನಿಯಾ ಇದ್ದ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ...
ಸರ್ಕಾರಕ್ಕೀಗ ನೂರರ ಸಂಭ್ರಮ
ಸಿಎಂ ವಾಪಸ್: ಇಂದು ಸಚಿವ ಸಂಪುಟ ಸಭೆ
ಮನರಂಜನೆ
ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...