|
| ದ್ವೀಪಗಳ ಮೇಲೆ ಜಪಾನ್ ಹಕ್ಕಿಗೆ ಕೊರಿಯ ಖಂಡನೆ |
| ಸೋಲ್, ಶುಕ್ರವಾರ, 5 ಸೆಪ್ಟೆಂಬರ್ 2008 ( 17:41 IST ) | |
ಟೋಕಿಯೊ ಹೊಸ ರಕ್ಷಣಾ ನೀತಿಯ ಕರಡಿನಲ್ಲಿ ವಿವಾದಿತ ದ್ವೀಪಗಳ ಬಗ್ಗೆ ತನ್ನ ಹಕ್ಕನ್ನು ನವೀಕರಿಸಿದ್ದರಿಂದ ದಕ್ಷಿಣ ಕೊರಿಯ ಮತ್ತು ಜಪಾನ್ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಶುಕ್ರವಾರ ಭುಗಿಲೆದ್ದಿದೆ. ಉಭಯ ರಾಷ್ಟ್ರಗಳ ನಡುವಿನ ದ್ವೀಪಗಳಾದ ಕೊರಿಯದ ಡೋಕ್ಡಾ ಮತ್ತು ಜಪಾನಿನ ಟಕೇಶಿಮಾ ದಶಕಗಳ ಕಾಲದಿಂದಲೂ ಅವುಗಳ ನಡುವಿನ ಬಾಂಧವ್ಯಕ್ಕೆ ಮುಳ್ಳಾಗಿ ಪರಿಣಮಿಸಿದೆ.
ರಕ್ಷಣಾ ಶ್ವೇತ ಪತ್ರದಲ್ಲಿ ಡೋಕ್ಡೊ ತನಗೆ ಸೇರಿದ ಪ್ರದೇಶವೆಂಬ ಜಪಾನ್ ವಿವರಣೆಯನ್ನು ತಾವು ಬಲವಾಗಿ ಪ್ರತಿಭಟಿಸುವುದಾಗಿ ವಿದೇಶಾಂಗಸಚಿವಾಲಯದ ವಕ್ತಾರ ಮೂನ್ ಟಾಯಿ ಯಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕಳೆದ ಜುಲೈನಲ್ಲಿ ಜಪಾನ್ ತನ್ನ ನೂತನ ಶಿಕ್ಷಣ ಮಾರ್ಗದರ್ಶಕಗಳನ್ನು ಪ್ರಕಟಿಸಿ, ದ್ವೀಪಗಳ ಮೇಲೆ ತನ್ನ ಹಕ್ಕನ್ನು ಪುನರುಚ್ಚರಿಸಿದ್ದರಿಂದ ದಕ್ಷಿಣ ಕೊರಿಯನ್ನರ ಕೋಪವನ್ನು ಕೆರಳಿಸಿದೆ.
ಸೋಲ್ ದ್ವೀಪಗಳ ಮೇಲೆ ತನ್ನ ಹಕ್ಕನ್ನು ಗಟ್ಟಿ ಮಾಡಲು ಕ್ರಮಗಳನ್ನು ಕೈಗೊಂಡಿದ್ದು, ಮಿಲಿಟರಿ ಕವಾಯತು ಮತ್ತು ದಕ್ಷಿಣ ಕೊರಿಯ ಪ್ರಧಾನಮಂತ್ರಿಯಿಂದ ದ್ವೀಪಗಳಿಗೆ ಮೊಟ್ಟಮೊದಲ ಭೇಟಿ ಸಹ ನಡೆದಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ. |
| |
|
|
|
|
|
|
|