ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಪಾಕ್‌ನಲ್ಲಿ ಕ್ಷಿಪಣಿ ದಾಳಿಗೆ ಮ‌ೂವರು ಮಕ್ಕಳು ಬಲಿ
ಇಸ್ಲಾಮಾಬಾದ್, ಶುಕ್ರವಾರ, 5 ಸೆಪ್ಟೆಂಬರ್ 2008   ( 17:39 IST )
ಪಾಕಿಸ್ತಾನದ ಪ್ರಕ್ಷುಬ್ದ ಉತ್ತರ ವಾಜಿರಿಸ್ತಾನ್ ಬುಡಕಟ್ಟು ಪ್ರದೇಶದಲ್ಲಿ ಗಡಿಯಾಚೆಯಿಂದ ಕ್ಷಿಪಣಿ ದಾಳಿಯಲ್ಲಿ ಮ‌ೂವರು ಮಕ್ಕಳು ಅಸುನೀಗಿದ್ದಾರೆ ಮತ್ತು ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಉತ್ತರವಾಜಿರಿಸ್ತಾನದ ಗೋರ್ವಾಕ್‌ನಲ್ಲಿರುವ ಮನೆಯೊಂದರ ಮೇಲೆ ಮ‌ೂರು ಕ್ಷಿಪಣಿಗಳು ಅಪ್ಪಳಿಸಿದವು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇವಲ ಒಂದು ವಾರದಲ್ಲೇ ಉತ್ತರವಾಜಿರಿಸ್ತಾನದಲ್ಲಿ ಸಂಭವಿಸಿದ ನಾಲ್ಕು ಕ್ಷಿಪಣಿ ದಾಳಿಗಳಲ್ಲಿ ಒಟ್ಟು 18 ಜನರು ಸತ್ತಿದ್ದಾರೆ ಮತ್ತು 15 ಮಂದಿ ಗಾಯಗೊಂಡಿದ್ದಾರೆ.ಅಮೆರಿಕ ನೇತೃತ್ವದ ಗನ್‌ಶಿಪ್ ಹೆಲಿಕಾಪ್ಟರ್‌ಗಳು ಮತ್ತು ಕಮಾಂಡೊಗಳು ದಕ್ಷಿಣ ವಾಜಿರಿಸ್ತಾನದ ಮೇಲೆ ನಡೆಸಿದ ದಾಳಿಯಲ್ಲಿ ಬಹುತೇಕ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 20 ಜನರು ಹತರಾಗಿದ್ದರು.

ಅಮೆರಿಕ ನೇತೃತ್ವದ ಕಾಲ್ದಳವು ಆಪ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಅತಿಕ್ರಮಿಸಿದ ಮೊದಲ ಪ್ರಕರಣ ಇದಾಗಿದೆ. ದಕ್ಷಿಣ ವಾಜಿರಿಸ್ತಾನದಲ್ಲಿ ನಡೆದ ದಾಳಿಯನ್ನು ಪಾಕಿಸ್ತಾನ ಸಂಸತ್ತು ಗುರುವಾರ ಖಂಡಿಸಿ, ರಾಷ್ಟ್ರದ ಪ್ರದೇಶದೊಳಕ್ಕೆ ವಿದೇಶಿ ಪಡೆಗಳು ದಾಳಿ ಮಾಡಿದ ಉಲ್ಲಂಘನೆಯು ಸಮ್ಮತವಲ್ಲ ಎಂದು ಹೇಳಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಂಡೋಲೀಜಾ ರೈಸ್ ಲಿಬ್ಯಾಗೆ ಐತಿಹಾಸಿಕ ಭೇಟಿ
ಲಾಡೆನ್‌ನನ್ನು ಹಿಡಿಯಲು ತಮಗೆ ಮಾತ್ರ ಸಾಧ್ಯ: ಮೆಕೈನ್
ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ: ಅಮೆರಿಕ
ಅಧ್ಯಕ್ಷರ ಅಧಿಕಾರ ಮೊಟಕು ಮಾಡಲು ಜರ್ದಾರಿ ಶಪಥ
ದುಬೈ ಹೆಲಿಕಾಪ್ಟರ್ ಅಪಘಾತಕ್ಕೆ 7 ಮಂದಿ ಬಲಿ
ಬ್ರಿಟ್ನಿಯ ಪೂರ್ವಚರಿತ್ರೆ ಬಿಚ್ಚಿದ ಲಿನ್ನೆಸ್ಪಿಯರ್ಸ್
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಸೋನಿಯಾ ಇದ್ದ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ...
ಸರ್ಕಾರಕ್ಕೀಗ ನೂರರ ಸಂಭ್ರಮ
ಸಿಎಂ ವಾಪಸ್: ಇಂದು ಸಚಿವ ಸಂಪುಟ ಸಭೆ
ಮನರಂಜನೆ
ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...