ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ: ಅಮೆರಿಕ
ಇಸ್ಲಾಮಾಬಾದ್, 5 ಸೆಪ್ಟೆಂಬರ್ 2008   ( 13:11 IST )
ಅಮೆರಿಕವು ತನ್ನ ಪ್ರದೇಶದಲ್ಲಿ ದಾಳಿ ಮಾಡಿದ ಬಗ್ಗೆ ಪಾಕಿಸ್ತಾನ ಬಲವಾದ ಪ್ರತಿಭಟನೆ ಮಂಡಿಸಿದ ಎರಡು ದಿನಗಳ ಬಳಿಕ, ಉಭಯ ರಾಷ್ಟ್ರಗಳು ಬಲಿಷ್ಠ ಬಾಂಧವ್ಯವನ್ನು ಕಾಯ್ದುಕೊಂಡು ತಾಲಿಬಾನ್ ಮತ್ತು ಅಲ್‌ಕೈದಾ ಶಕ್ತಿಗಳ ವಿರುದ್ಧ ಒಟ್ಟಿಗೆ ಹೋರಾಡಬೇಕೆಂದು ವಾಷಿಂಗ್ಟನ್ ತಿಳಿಸಿದೆ. ಪಾಕ್ ಜತೆ ನಮ್ಮ ಬಾಂಧವ್ಯ ಬಲವಾಗಿದೆ. ಅದು ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪ್ರಮುಖ ಮಿತ್ರದೇಶವಾಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರೆ ರಾಬರ್ಟ್ ವುಡ್ ತಿಳಿಸಿದರು.

ಪಾಕ್ ಸರ್ಕಾರವು ತಾಲಿಬಾನ್ ಮತ್ತು ಅಲ್ ಕೈದಾ ಬೆದರಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಪಾಕಿಸ್ತಾನದಲ್ಲಿ ಮಾತ್ರವಲ್ಲದೇ ಆಪ್ಘಾನಿಸ್ತಾನ ಗಡಿಯಾಚೆ ಕಾರ್ಯನಿರ್ವಹಿಸುತ್ತಿರುವ ತೀವ್ರವಾದಿ ಶಕ್ತಿಗಳನ್ನು ಸೋಲಿಸಲು ಸಹಕಾರ ಹೆಚ್ಚಿಸುವುದಕ್ಕಾಗಿ ನಾವು ದಾರಿಗಳನ್ನು ಹುಡುಕುತ್ತಿದ್ದೇವೆ ಎಂದು ಅವರು ಹೇಳಿದರು.

ಆದರೆ ಪಾಕ್ ಪ್ರದೇಶದ ಮೇಲೆ ದಾಳಿ ಕುರಿತಂತೆ ಅವರು ಯಾವುದೇ ಮಾತನಾಡದೇ ನುಣುಚಿಕೊಂಡರು.ಪಾಕಿಸ್ತಾನದ ಮುಂಚೂಣಿ ಗ್ರಾಮದ ಮೇಲೆ ಆಫ್ಘಾನಿಸ್ತಾನದಿಂದ ಅಮೆರಿಕ ಪಡೆಗಳು ಮುಂಜಾನೆ ದಾಳಿ ನಡೆಸಿದ್ದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸತ್ತಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಲಾಡೆನ್‌ನನ್ನು ಹಿಡಿಯಲು ತಮಗೆ ಮಾತ್ರ ಸಾಧ್ಯ: ಮೆಕೇನ್
ಅಧ್ಯಕ್ಷರ ಅಧಿಕಾರ ಮೊಟಕ ಮಾಡಲು ಜರ್ದಾರಿ ಶಪಥ
ದುಬೈ ಹೆಲಿಕಾಪ್ಟರ್ ಅಪಘಾತಕ್ಕೆ 7 ಮಂದಿ ಬಲಿ
ಬ್ರಿಟ್ನಿಯ ಪೂರ್ವಚರಿತ್ರೆ ಬಿಚ್ಚಿದ ಲಿನ್ನೆಸ್ಪಿಯರ್ಸ್
ಮೆಕ್ಸಿಕೊದಲ್ಲಿ ಹಿಂಸೆ: ಆರ್ಥಿಕತೆ ಮೇಲೆ ಪರಿಣಾಮ
ಹೈಟಿಯಲ್ಲಿ ಚಂಡಮಾರುತಗಳ ಹಾವಳಿ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಸೋನಿಯಾ ಇದ್ದ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ...
ಸರ್ಕಾರಕ್ಕೀಗ ನೂರರ ಸಂಭ್ರಮ
ಸಿಎಂ ವಾಪಸ್: ಇಂದು ಸಚಿವ ಸಂಪುಟ ಸಭೆ
ಮನರಂಜನೆ
ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...