ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಅಧ್ಯಕ್ಷರ ಅಧಿಕಾರ ಮೊಟಕು ಮಾಡಲು ಜರ್ದಾರಿ ಶಪಥ
ಇಸ್ಲಾಮಾಬಾದ್, 5 ಸೆಪ್ಟೆಂಬರ್ 2008   ( 12:29 IST )
ap
ಪಾಕಿಸ್ತಾನದ ಆಡಳಿತಾರೂಢ ಪಿಪಿಪಿ ಮುಖ್ಯಸ್ಥ ಮತ್ತು ಅಧ್ಯಕ್ಷ ಹುದ್ದೆಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಅಸೀಫ್ ಅಲಿ ಜರ್ದಾರಿ ಅವರು ಸಂಸತ್ತನ್ನು ವಿಸರ್ಜಿಸುವ ಮತ್ತು ಪ್ರಧಾನಮಂತ್ರಿಯನ್ನು ವಜಾ ಮಾಡುವ ಅಧ್ಯಕ್ಷರ ಅಧಿಕಾರವನ್ನು ಮೊಟಕುಮಾಡುವುದಾಗಿ ಗುರುವಾರ ಶಪಥ ತೊಟ್ಟಿದ್ದಾರೆ.

ತಾವು ಅಧ್ಯಕ್ಷರಾಗಿ ಆಯ್ಕೆಯಾದರೆ, ಅಧ್ಯಕ್ಷೀಯ ಅಧಿಕಾರದಲ್ಲಿ ಸಮತೋಲನ ತಂದು ಪ್ರಜಾಪ್ರಭುತ್ವ ಆಡಳಿತವನ್ನು ಕುಂದಿಸುವ ಅದರ ಸಾಮರ್ಥ್ಯವನ್ನು ತಗ್ಗಿಸುವುದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಲು ಪ್ರಧಾನಿ, ರಾಷ್ಟ್ರೀಯ ಅಸೆಂಬ್ಲಿ ಮತ್ತು ಸೆನೆಟ್‌ಗೆ ಬೆಂಬಲಿಸಲು ತಾವು ಅತ್ಯಧಿಕ ಆದ್ಯತೆ ನೀಡುವುದಾಗಿ ಜರ್ದಾರಿ ಹೇಳಿದರು.

ಸೆ.6ರ ಜರ್ದಾರಿ, ಪಿಎಂಎಲ್ ಅಭ್ಯರ್ಥಿ ಸಯೀದ್ ಉಲ್ ಜಮಾನ್ ಸಿದ್ಧಿಖಿ ಮತ್ತು ಪಿಎಂಎಲ್-ಕ್ಯುನ ಮುಶಾಹಿದ್ ಹುಸೇನ್ ಸಯೀದ್ ನಡುವೆ ತ್ರಿಪಕ್ಷೀಯ ಸ್ಪರ್ಧೆಯಿರುವ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಅವರ ಪ್ರತಿಕ್ರಿಯೆ ಹೊರಬಿದ್ದಿದೆ.

ಇಬ್ಬರು ಮಿಲಿಟರಿ ಸರ್ವಾಧಿಕಾರಿಗಳಾದ ಮೊಹಮದ್ ಜಿಯಾ ಉಲ್ ಹಕ್ ಮತ್ತು ಮುಷರಫ್ ಅಧಿಕಾರವನ್ನು ಭದ್ರಪಡಿಸಲು ಸಂವಿಧಾನವನ್ನು ವಿರೂಪಗೊಳಿಸಿದರು. ಪ್ರಜಾಪ್ರಭುತ್ವವಾಗಿ ಆಯ್ಕೆಯಾದ ಸರ್ಕಾರವನ್ನು ವಜಾ ಮಾಡುವ ಅಧಿಕಾರ ಸೇರಿದಂತೆ ಅಧ್ಯಕ್ಷರ ಜವಾಬ್ದಾರಿಯನ್ನು ಅವರು ವಿಸ್ತರಿಸಿದರು ಎಂದು ಜರ್ದಾರಿ ಹೇಳಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಲಾಡೆನ್‌ನನ್ನು ಹಿಡಿಯಲು ತಮಗೆ ಮಾತ್ರ ಸಾಧ್ಯ: ಮೆಕೈನ್
ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ: ಅಮೆರಿಕ
ದುಬೈ ಹೆಲಿಕಾಪ್ಟರ್ ಅಪಘಾತಕ್ಕೆ 7 ಮಂದಿ ಬಲಿ
ಬ್ರಿಟ್ನಿಯ ಪೂರ್ವಚರಿತ್ರೆ ಬಿಚ್ಚಿದ ಲಿನ್ನೆಸ್ಪಿಯರ್ಸ್
ಮೆಕ್ಸಿಕೊದಲ್ಲಿ ಹಿಂಸೆ: ಆರ್ಥಿಕತೆ ಮೇಲೆ ಪರಿಣಾಮ
ಹೈಟಿಯಲ್ಲಿ ಚಂಡಮಾರುತಗಳ ಹಾವಳಿ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಸೋನಿಯಾ ಇದ್ದ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ...
ಸರ್ಕಾರಕ್ಕೀಗ ನೂರರ ಸಂಭ್ರಮ
ಸಿಎಂ ವಾಪಸ್: ಇಂದು ಸಚಿವ ಸಂಪುಟ ಸಭೆ
ಮನರಂಜನೆ
ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...