|
| ಬ್ರಿಟ್ನಿಯ ಪೂರ್ವಚರಿತ್ರೆ ಬಿಚ್ಚಿದ ಲಿನ್ನೆಸ್ಪಿಯರ್ಸ್ |
| ಲಂಡನ್, ಗುರುವಾರ, 4 ಸೆಪ್ಟೆಂಬರ್ 2008 ( 16:26 IST ) | |
ಖ್ಯಾತ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ 13ವರ್ಷ ವಯಸ್ಸಿನಲ್ಲೇ ಕುಡಿತವನ್ನು ಆರಂಭಿಸಿ, 14ವರ್ಷದಲ್ಲಿ ಕನ್ಯತ್ವ ಕಳೆದುಕೊಂಡಳು ಮತ್ತು 15ರ ಪ್ರಾಯದಲ್ಲೇ ಮಾದಕಪದಾರ್ಥ ಸೇವನೆ ಆರಂಭಿಸಿದಳು ಎಂದು ಆಕೆಯ ತಾಯಿ ಲಿನ್ನೆ ಸ್ಪಿಯರ್ಸ್ ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ.
ಸೆ.16ರಂದು ಬಿಡುಗಡೆಯಾಗಲಿರುವ ಪುಸ್ತಕದಲ್ಲಿ ಲಿನ್ನೆ ಕೆಲವು ರೋಚಕ ಸಂಗತಿಗಳನ್ನು ಬಹಿರಂಗಗೊಳಿಸಿದ್ದಾರೆ. ತಮ್ಮ "ಥ್ರೂದ ಸ್ಟಾರ್ಮ್" ಪುಸ್ತಕದಲ್ಲಿ ಲಿನ್ನೆ ತಮ್ಮ 26 ವರ್ಷದ ಪುತ್ರಿಯ ಚರಿತ್ರೆಯನ್ನು ಬರೆದಿದ್ದು, ಡಿಸ್ನಿಯ ಮಿಕಿ ಮೌಸ್ ಕ್ಲಬ್ ಸೇರಿದ ಬಳಿಕ ಬ್ರಿಟ್ನಿ ಮೊದಲ ಬಾರಿ ಮದ್ಯಸೇವನೆ ಮಾಡಿದಳೆಂದು ಹೇಳಿದ್ದಾರೆ.ಬ್ರಿಟ್ನಿ 14 ವರ್ಷದವಳಾಗಿದ್ದಾಗ ತನ್ನ ತವರುಪಟ್ಟಣವಾದ ಕೆಂಟ್‌ವುಡ್‌ನಲ್ಲಿ 18 ವರ್ಷ ವಯಸ್ಸಿನ ಹೈಸ್ಕೂಲ್ ಹಿರಿಯ ವಿದ್ಯಾರ್ಥಿಯ ಜತೆ ಲೈಂಗಿಕ ಸಂಪರ್ಕವಿಟ್ಟುಕೊಂಡಿದ್ದನ್ನು ಲಿನ್ನೆ ಬಹಿರಂಗಪಡಿಸಿದ್ದಾರೆ.
ಬ್ರಿಟ್ನಿ ವೃತ್ತಿಜೀವನವನ್ನು ಮ್ಯಾನೇಜರ್‌ಗಳ ನಿಯಂತ್ರಣಕ್ಕೆ ಒಪ್ಪಿಸಿದ್ದಕ್ಕಾಗಿ ತಾವು ವಿಷಾದಿಸುವುದಾಗಿ ಅವರು ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ಇಂತಹ ಸಣ್ಣ ಪ್ರಾಯದಲ್ಲೇ ವಿಡಿಯೋಗಳಲ್ಲಿ ತಮ್ಮ ಪುತ್ರಿಯನ್ನು ಲೈಂಗಿಕ ವಸ್ತುವಾಗಿ ಪ್ರವರ್ತನೆ ಮಾಡಿದ್ದಕ್ಕಾಗಿ ಅವರು ಪಶ್ಚಾತ್ತಾಪ ಪಟ್ಟಿದ್ದಾರೆ.
ಬ್ರಿಟ್ನಿ 16ವರ್ಷದವಳಾಗಿದ್ದಾಗ ಕೊಕೇನ್ ಮತ್ತು ಗಾಂಜಾ ಮಾದಕವಸ್ತು ಸೇವನೆ ಮಾಡಿ ಸಿಕ್ಕಿಬಿದ್ದಿದ್ದಳು. ಲಿನ್ನೆ ಬರೆದ ಈ ಪುಸ್ತಕದಿಂದ ತಾಯಿ, ಮಗಳ ನಡುವೆ ಬಿರುಕು ಇನ್ನಷ್ಟು ಹೆಚ್ಚಬಹುದೆಂದು ನಿರೀಕ್ಷಿಸಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ರಘು ದೀಕ್ಷಿತ್ ಅವರ ಸಂಗೀತಕ್ಕೆ ನಟ ಸುದೀಪ್ ಕೂಡಾ ತಲೆದೂಗಿದ್ದಾರೆ. ಸುದೀಪ್ ತಮ್ಮ ಸ್ವಂತ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಚಿತ್ರವೊಂದಕ್ಕೆ ರಘು ದೀಕ್ಷಿತ್ ಅವರನ್ನು ಆಯ್ಕೆ ಮಾಡಿದ್ದಾರೆ. ಅವರು ಒಬ್ಬ ಉತ್ತಮ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಸಂದೇಹವಿಲ್ಲವೆನ್ನುತ್ತಾರೆ ಸುದೀಪ್. |
| |
|
|
|
|
|
|
|