|
| ಮೆಕ್ಸಿಕೊದಲ್ಲಿ ಹಿಂಸೆ: ಆರ್ಥಿಕತೆ ಮೇಲೆ ಪರಿಣಾಮ |
| ಮೆಕ್ಸಿಕೊ, ಗುರುವಾರ, 4 ಸೆಪ್ಟೆಂಬರ್ 2008 ( 14:16 IST ) | |
ಮೆಕ್ಸಿಕೊದಲ್ಲಿ ಅಪರಾಧ ಚಟುವಟಿಕೆಗಳು ಮತ್ತು ಹಿಂಸಾಚಾರವು ರಾಷ್ಟ್ರದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಉಂಟುಮಾಡಿದ್ದು ಬೆಳವಣಿಗೆಯನ್ನು ಶೇ.1ರಷ್ಟು ತಗ್ಗಿಸಿದೆ ಎಂದು ಮೆಕ್ಸಿಕೊ ವಿತ್ತಸಚಿವ ತಿಳಿಸಿದ್ದಾರೆ. ರಾಷ್ಟ್ರದ ಅಭದ್ರತೆಯಿಂದಾಗಿ ಕಂಪೆನಿಗಳು ಇಲ್ಲಿ ಹೂಡಿಕೆಯನ್ನು ನಿಲ್ಲಿಸಿದ್ದು, ಕೆಲವೇ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದು ಮೆಕ್ಸಿಕೊ ವಿತ್ತಸಚಿವ ಆಗುಸ್ಟಿನ್ ಕಾರ್ಸ್ಟನ್ಸ್ ತಿಳಿಸಿದರು.
ಈ ವರ್ಷ ಬಹುತೇಕ ಮಾದಕವಸ್ತು ಸಂಬಂಧಿತ ಹಿಂಸಾಚಾರದಲ್ಲಿ 2700 ಜನರು ಸತ್ತಿದ್ದಾರೆ ಮತ್ತು 300 ಜನರನ್ನು ಅಪಹರಣ ಮಾಡಲಾಗಿದೆ. ಅಪರಾಧ ಚಟುವಟಿಕೆಗಳ ವಿರುದ್ಧ ಪ್ರತಿಭಟನೆ ಸಲುವಾಗಿ ಸಾವಿರಾರು ಜನರು ಶನಿವಾರ ಮೆರವಣಿಗೆಯಲ್ಲಿ ಸಾಗಿದರು. ಅಪರಾಧ ನಿಯಂತ್ರಿಸುವ ಸಲುವಾಗಿ ಹೆಚ್ಚಿನ ಭದ್ರತೆ ಒದಗಿಸುವುದರಿಂದ ಉದ್ಯಮ ವೆಚ್ಚವು ಶೇ.10ರಷ್ಟು ಏರಿಕೆಯಾಗಿದ್ದು, ಉದ್ಯೋಗಸೃಷ್ಟಿ, ಮಾರಾಟ ಮತ್ತು ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಾರ್ಸ್‌ಟನ್ಸ್ ತಿಳಿಸಿದರು.
ಮಾದಕವಸ್ತು ಸಾಗಣೆ ಮತ್ತು ಸಂಬಂಧಿತ ಹಿಂಸಾಚಾರವನ್ನು ನಿಭಾಯಿಸಲು 30,000ಕ್ಕೂ ಹೆಚ್ಚು ಪಡೆಗಳನ್ನು ಮೆಕ್ಸಿಕೊದಲ್ಲಿ ನಿಯೋಜಿಸಲಾಗಿದೆ. ಅಪರಾಧಗಳ ವಿರುದ್ಧ ಸಾರ್ವಜನಿಕರ ಆಕ್ರೋಶದ ನಡುವೆಯೂ ಮಾದಕವಸ್ತು ಸಾಗಾಣಿಕೆದಾರರು ಮತ್ತು ಅಪಹರಣಕಾರರು ಅತ್ಯಂತ ಸಂಘಟಿತರಾಗಿದ್ದು, ಭ್ರಷ್ಟ ಪೊಲೀಸ್ ಅಧಿಕಾರಿಗಳ ಸಖ್ಯವನ್ನೂ ಹೊಂದಿದ್ದಾರೆಂದು ವರದಿಗಾರರು ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ರಘು ದೀಕ್ಷಿತ್ ಅವರ ಸಂಗೀತಕ್ಕೆ ನಟ ಸುದೀಪ್ ಕೂಡಾ ತಲೆದೂಗಿದ್ದಾರೆ. ಸುದೀಪ್ ತಮ್ಮ ಸ್ವಂತ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಚಿತ್ರವೊಂದಕ್ಕೆ ರಘು ದೀಕ್ಷಿತ್ ಅವರನ್ನು ಆಯ್ಕೆ ಮಾಡಿದ್ದಾರೆ. ಅವರು ಒಬ್ಬ ಉತ್ತಮ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಸಂದೇಹವಿಲ್ಲವೆನ್ನುತ್ತಾರೆ ಸುದೀಪ್. |
| |
|
|
|
|
|
|
|