ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಹೈಟಿಯಲ್ಲಿ ಚಂಡಮಾರುತಗಳ ಹಾವಳಿ
ಹೈಟಿ, 4 ಸೆಪ್ಟೆಂಬರ್ 2008   ( 13:43 IST )
ಹೈಟಿಯನ್ನು ಇತ್ತೀಚಿನ ವಾರದಲ್ಲಿ ಅಪ್ಪಳಿಸಿದ ಸರಣಿ ಚಂಡಮಾರುತಗಳು ವಿನಾಶವನ್ನೇ ಸೃಷ್ಟಿಸಿದೆ ಎಂದು ಅಧ್ಯಕ್ಷ ರೇನೆ ಪ್ರೆವಾಲ್ ತಿಳಿಸಿದ್ದಾರೆ. 21 ದಿನಗಳಿಗಿಂತ ಕಡಿಮೆ ಕಾಲಾವಧಿಯಲ್ಲಿ ಅಪ್ಪಳಿಸಿದ ಮ‌ೂರು ಚಂಡಮಾರುತಗಳಿಂದ ಸಾವಿರಾರು ಜನರು ಮನೆಗಳನ್ನು ತೊರೆದಿದ್ದಾರೆಂದು ಅಧಿಕಾರಿಗಳು ತಿಳಿಸಿದರು.

2004ರಲ್ಲಿ ಅಪ್ಪಳಿಸಿದ ಚಂಡಮಾರುತಕ್ಕಿಂತ ಈ ಬಾರಿ ಅಪ್ಪಳಿಸುವ ಹನ್ನಾ ಚಂಡಮಾರುತ ಮಾರಕವಾಗಲಿದೆ ಎಂದು ಪ್ರೆವಾಲ್ ಎಚ್ಚರಿಸಿದ್ದಾರೆ.ಹನ್ನಾ ಚಂಡಮಾರುತ ಈಗ ಬಹಾಮಾಸ್ ಸಮೀಪಿಸುತ್ತಿದ್ದು, ಅಲ್ಲಿ ಚಂಡಮಾರುತದ ಮುನ್ಸೂಚನೆ ನೀಡಲಾಗಿದೆ. ಗುರುವಾರ 12.30 ಜಿಎಂಟಿಯ ವೇಳೆ ಹನ್ನಾ ನಾಸಾದ ಆಗ್ನೇಯಕ್ಕೆ 355 ಕಿಮೀ ದೂರದಲ್ಲಿದ್ದ ವಾಯವ್ಯದತ್ತ ಸಮೀಪಿಸುತ್ತಿದೆ ಎಂದು ರಾಷ್ಟ್ರೀಯ ಚಂಡಮಾರುತ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ.

ಜೀನೆಯನ್ನು ಹೋಲಿಸಿದರೆ ಹೆನ್ನಾ ಮತ್ತಷ್ಟು ಹಾನಿಯನ್ನು ಮಾಡಬಹುದು ಎಂದು ಪ್ರೆವಾಲ್ ಹೇಳಿದರು. 2004ರಲ್ಲಿ ಅಪ್ಪಳಿಸಿದ ಜೀನೆ ಚಂಡಮಾರುತವನ್ನು ಉಲ್ಲೇಖಿಸಿ ಹೈಟಿ ನಾಯಕರು ಹೇಳಿದರು. ಹನ್ನಾ ಮಂಗಳವಾರ ಅಪ್ಪಳಿಸಿದ್ದರಿಂದ 61 ಜನರು ಬಲಿಯಾಗಿದ್ದು, ಸತ್ತವರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಶಂಕೆ ಆವರಿಸಿದೆ.

ಗೊನ್ನೈವೆಸ್ ಉತ್ತರ ನಗರದಲ್ಲಿ ಹನ್ನಾ ಪ್ರಕೋಪದ ಗರಿಷ್ಠ ಹಾನಿ ಸಂಭವಿಸಿದ್ದು, ಗಂಟೆಗೆ 100ಕಿಮೀಗಿಂತ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಸುಮಾರು 2 ಮೀಟರ್‌ಗಿಂತ ಎತ್ತರದ ಪ್ರವಾಹ ಉಕ್ಕೇರಿ ಮನೆಯ ಮೇಲ್ಛಾವಣಿ ಮೇಲೆ ಕುಳಿತ ಜನರ ಸಹಾಯಕ್ಕಾಗಿ ಆಕ್ರಂದನ ಮುಗಿಲುಮುಟ್ಟಿತ್ತು. ಸಿಕ್ಕಿಬಿದ್ದ ಸಂತ್ರಸ್ತರನ್ನು ರಕ್ಷಿಸಲು ವಿಶ್ವಸಂಸ್ಥೆ ಶಾಂತಿಪಾಲನಾಪಡೆ ಮತ್ತು ನೆರವು ಕಾರ್ಯಕರ್ತರು ಪ್ರಯತ್ನಿಸುತ್ತಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದುಬೈ ಹೆಲಿಕಾಪ್ಟರ್ ಅಪಘಾತಕ್ಕೆ 7 ಮಂದಿ ಬಲಿ
ಬ್ರಿಟ್ನಿಯ ಪೂರ್ವಚರಿತ್ರೆ ಬಿಚ್ಚಿದ ಲಿನ್ನೆಸ್ಪಿಯರ್ಸ್
ಮೆಕ್ಸಿಕೊದಲ್ಲಿ ಹಿಂಸೆ: ಆರ್ಥಿಕತೆ ಮೇಲೆ ಪರಿಣಾಮ
ಒಬಾಮಾ ವಿರುದ್ಧ ಸಾರಾ ಪಾಲಿನ್ ವಾಗ್ದಾಳಿ
ರಾಜೀನಾಮೆ ನೀಡಲು ಥಾಯ್ ಪ್ರಧಾನಿ ನಕಾರ
ಹತ್ಯೆ ಯತ್ನದಿಂದ ಪಾಕ್ ಪಿಎಂ ಗಿಲಾನಿ ಪಾರು
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ನೂರು ದಿನದಲ್ಲಿ ಸಾವಿರ ತಪ್ಪು: ಖರ್ಗೆ ಕಿಡಿ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನದ ಆಡಳಿತದಲ್ಲಿ ಸಾವಿರ ತಪ್ಪುಗಳನ್ನು ಎಸಗಿದೆ...
ಮುಂದುವರಿದ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ
ಆರೋಪಿ ಅತುಲ್‌ಗೆ ಹೈಕೋರ್ಟ್ ಜಾಮೀನು
ಮನರಂಜನೆ
ಚಿತ್ರ ಸುದ್ದಿ - ರಘು ದೀಕ್ಷಿತ್ ಅವರ ಸಂಗೀತಕ್ಕೆ ನಟ ಸುದೀಪ್ ಕೂಡಾ ತಲೆದೂಗಿದ್ದಾರೆ. ಸುದೀಪ್ ತಮ್ಮ ಸ್ವಂತ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಚಿತ್ರವೊಂದಕ್ಕೆ ರಘು ದೀಕ್ಷಿತ್ ಅವರನ್ನು ಆಯ್ಕೆ ಮಾಡಿದ್ದಾರೆ. ಅವರು ಒಬ್ಬ ಉತ್ತಮ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಸಂದೇಹವಿಲ್ಲವೆನ್ನುತ್ತಾರೆ ಸುದೀಪ್.
ಮುಂದೆ ಓದಿ|ಮತ್ತಷ್ಟು...