ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಜಪಾನ್‌ನಲ್ಲಿ ಪ್ರಬಲ ಭೂಕಂಪ: 76 ಜನರಿಗೆ ಗಾಯ
ಟೋಕಿಯೊ, ಗುರುವಾರ, 24 ಜುಲೈ 2008   ( 11:46 IST )
ಉತ್ತರ ಜಪಾನ್‌ನಲ್ಲಿ ಗುರುವಾರ ನಸುಕಿನಲ್ಲಿ ಭಾರೀ ಭೂಕಂಪ ಅಪ್ಪಳಿಸಿ, ಕನಿಷ್ಠ 76 ಜನರು ಗಾಯಗೊಂಡಿದ್ದಾರೆ. ಸಂಚಾರ ಸ್ಥಗಿತಗೊಳಿಸಿದ ರೈಲುಗಳಲ್ಲಿ ನೂರಾರು ಜನರು ಸಿಕ್ಕಿಬಿದ್ದಿದ್ದಾರೆ ಹಾಗೂ ಸಾವಿರಾರು ಮನೆಗಳಿಗೆ ವಿದ್ಯುತ್ ಪೂರೈಕೆ ಕಡಿತಗೊಂಡಿದೆ.

ಭೂಕಂಪದಿಂದ ಸುನಾಮಿ ಅಲೆಗಳು ಏಳುವ ಭೀತಿಯಿಲ್ಲ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಭೂಕಂಪದ ಆರಂಭಿಕ ತೀವ್ರತೆ 6.8ರಷ್ಟಿದ್ದು, ಟೋಕಿಯೊವರೆಗೆ ಕಂಪನದ ಅನುಭವವಾಗಿದೆ. ಸುಮಾರು 76 ಜನರಿಗೆ ಗಾಯವಾಗಿರುವುದು ಖಚಿತವಾಗಿದೆ ಎಂದು ರಾಷ್ಟ್ರೀಯ ಪೊಲೀಸ್ ಏಜೆನ್ಸಿ ಅಧಿಕಾರಿ ತಿಳಿಸಿದ್ದು, ಅವರಲ್ಲಿ 9 ಮಂದಿಗೆ ತೀವ್ರ ಗಾಯಗಳಾಗಿವೆ. ಅನೇಕ ಮಂದಿ ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ.

ಪರ್ವತಮಯ, ಜನಸಂಖ್ಯೆ ವಿರಳವಾದ ಇವಾಟೆಯ 108 ಕಿಮೀ ಆಳದ ಭೂಗರ್ಭದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು. ಭೂಕಂಪವಾದ ಕೂಡಲೇ ತನಗೆ ಎಚ್ಚರವಾಯಿತು. ದೀರ್ಘಕಾಲದವರೆಗೆ ಕಂಪನದ ಅನುಭವವಾಯಿತು. ಎಲ್ಲ ಬಾಗಿಲುಗಳು ತೆರೆದುಕೊಂಡಿತು ಮತ್ತು ವಸ್ತುಗಳು ಚೆಲ್ಲಾಪಿಲ್ಲಿಯಾದವು ಎಂದು ಹಾಚಿನೋಹೆ ಅಧಿಕಾರಿ ಶೋ ಕೊಸೆಕಿ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಇರಾನ್‌ಗೆ ಎಚ್ಚರಿಕೆ ನೀಡಿದ ಬ್ರಿಟನ್ ಪ್ರಧಾನಿ
ಸಾರ್ಕ್ ಶೃಂಗಸಭೆ: ಎಲ್‌ಟಿಟಿಇ ಯುದ್ಧವಿರಾಮ
ಪಾಕ್ ಸಮ್ಮಿಶ್ರ ಕೂಟದ ನಾಯಕರ ಸಭೆ
ರಿಪಬ್ಲಿಕನ್ ಉಪಾಧ್ಯಕ್ಷ ಸ್ಥಾನಕ್ಕೆ ಜಿಂಡಾಲ್?
ಅಣು ಒಪ್ಪಂದದಲ್ಲಿ ಮುಂದಿನ ಹೆಜ್ಜೆ-ಅಮೆರಿಕ ಪ್ರತಿಜ್ಞೆ
ಡಾ.ಡೆತ್ ಜಯಂತ್ ಪಟೇಲ್‌ಗೆ ಷರತ್ತಿನ ಜಾಮೀನು
ಗ್ರಹ ಗತಿ
ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
pti
 
ಸಿಪಿಎಂನಿಂದ ಸೋಮನಾಥ್ ಚಟರ್ಜಿ ಉಚ್ಚಾಟನೆ
ಸಂಸತ್ತಿನಲ್ಲಿ ವಿಶ್ವಾಸಮತ ಗೊತ್ತುವಳಿಯಲ್ಲಿ ಪಕ್ಷದ ಆದೇಶವನ್ನು....
ವಿಶ್ವಾಸಮತ-ಇಬ್ಬರು ಎನ್‌ಡಿಎ ಸಂಸದರು ನಾಪತ್ತೆ
ಬಿಜೆಪಿ ವಿಪ್ ಉಲ್ಲಂಘನೆ: 8 ಸದಸ್ಯರ ಉಚ್ಚಾಟನೆ
ಮನರಂಜನೆ
ಚಿತ್ರ ಸುದ್ದಿ - ಆಕೆ ರಿಯಲ್ ಲೈಫ್‌ನಲ್ಲಿ ತುಂಬಾ ಮಾಡರ್ನ್ ಹುಡುಗಿ. ಆದರೆ ರೀಲಿನಲ್ಲಿ ಮಾತ್ರ ಲಂಗಧಾವಣಿ ಹಾಕುವಂತಹ ಬೆಡಗಿ. ಈ ಹಿಂದೆ ಯಾವತ್ತೂ ಲಂಗಧಾವಣಿ ಹಾಕದ ರಮ್ಯಾ ಬಾರ್ನಾ 'ನನ್ನೆದಯ ಹಾಡು' ಚಿತ್ರಕ್ಕಾಗಿ ಲಂಗಧಾವಣಿ ತೊಟ್ಟಿದ್ದಾರೆ.
ಮುಂದೆ ಓದಿ|ಮತ್ತಷ್ಟು...