|
| ಸಾರ್ಕ್ ಶೃಂಗಸಭೆ: ಎಲ್‌ಟಿಟಿಇ ಯುದ್ಧವಿರಾಮ |
| ಜಾಫ್ನಾ, ಬುಧವಾರ, 23 ಜುಲೈ 2008 ( 15:31 IST ) | |
ಎಲ್‌ಟಿಟಿಇ ರಾಜಕೀಯ ಮುಖ್ಯಸ್ಥ ಬಿ.ನಾದೇಶನ್ ಜು.26ರಿಂದ ಆಗಸ್ಟ್ 4ರವರೆಗೆ ಶ್ರೀಲಂಕಾ ಮಿಲಿಟರಿ ಜತೆ ಏಕಪಕ್ಷೀಯ ಯುದ್ಧವಿರಾಮ ಘೋಷಿಸಿದ್ದಾರೆ. ಕೊಲಂಬೊನಲ್ಲಿ ಜು.27ರಿಂದ 15ನೇ ಸಾರ್ಕ್ ಶೃಂಗಸಭೆ ನಡೆಯುತ್ತಿರುವುದರಿಂದ ಆ ಸಂದರ್ಭದಲ್ಲಿ ಯಾವುದೇ ದಾಳಿ ನಡೆಸುವುದಿಲ್ಲವೆಂದು ನಾದೇಶನ್ ಹೇಳಿದ್ದಾರೆ.
ನಮ್ಮ ಆಂದೋಲನವು ಸಾರ್ಕ್ ಸಮಾವೇಶದ ಸಂದರ್ಭದಲ್ಲಿ ಏಕಪಕ್ಷೀಯ ಯುದ್ಧವಿರಾಮ ಘೋಷಿಸುತ್ತದೆ ಮತ್ತು ಸಮಾವೇಶದ ಯಶಸ್ಸಿಗೆ ಸಹಕಾರ ನೀಡುತ್ತದೆ ಎಂದು ಎಲ್‌ಟಿಟಿಇ ಸೋಮವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ಎಲ್‌ಟಿಟಿಇಗೆ ಯಾರ ಜತೆಯೂ ದ್ವೇಷವಿಲ್ಲ ಎಂದು ಹೇಳಿಕೆ ನೀಡಿದ್ದು, ಸಾರ್ಕ್ ಸಭೆಗೆ ಎಲ್ಲ ಯಶಸ್ಸು ಬಯಸುವುದಾಗಿ ತಿಳಿಸಿದೆ.
ಭಾರತ, ಪಾಕ್, ಅಫ್ಘಾನಿಸ್ತಾನ, ಬಾಂಗ್ಲಾದೇಶ,ಭೂತಾನ್, ಮಾಲ್ಡೀವ್ಸ್ ಮತ್ತು ನೇಪಾಳ ಹಾಗೂ ಶ್ರೀಲಂಕಾ ಸಮೂಹದ 15ನೇ ಸಾರ್ಕ್ ಶೃಂಗಸಭೆಯ ಆತಿಥ್ಯವನ್ನು ಶ್ರೀಲಂಕಾ ವಹಿಸಿಕೊಂಡಿದೆ.ಕಳೆದ ವಾರ ಶ್ರೀಲಂಕಾ ಸರ್ಕಾರ ಕೊಲಂಬೊ ಸುತ್ತಮುತ್ತ ಉನ್ನತ ಭದ್ರತಾವಲಯಗಳನ್ನು ಸ್ಥಾಪಿಸಿ, ಶೃಂಗಸಭೆಯಲ್ಲಿ ಭಾಗವಹಿಸುವ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಸೇರಿದ ನಾಯಕರಿಗೆ ಪೂರ್ಣ ಸ್ವರೂಪದ ಭದ್ರತೆ ಒದಗಿಸಲಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|