ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಖಾನ್‌ರಿಂದ ಬಂಧುಗಳ ಭೇಟಿಗೆ ಕೋರ್ಟ್ ಅನುಮತಿ
ಇಸ್ಲಾಮಾಬಾದ್, ಸೋಮವಾರ, 21 ಜುಲೈ 2008   ( 18:20 IST )
ಕಳೆದ ನಾಲ್ಕುವರ್ಷಗಳಿಂದ ಗೃಹಬಂಧನದಲ್ಲಿರುವ ಅಣು ವಿಜ್ಞಾನಿ ಎ.ಕ್ಯೂ ಖಾನ್ ಅವರು ತಮ್ಮ ಬಂಧುಗಳು ಮತ್ತು ಸ್ನೇಹಿತರ ಭೇಟಿಗೆ ಪಾಕಿಸ್ತಾನ ಕೋರ್ಟ್ ಭದ್ರತಾ ಅನುಮತಿಯ ಅನ್ವಯ ಅವಕಾಶ ನೀಡಿದೆ. ಆದರೆ ಪರಮಾಣು ಪ್ರಸರಣದ ಹಗರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಸಂದರ್ಶನಗಳನ್ನು ನೀಡುವುದರಿಂದ ನಿಷೇಧಿಸಲಾಗಿದೆ.

ಖಾನ್ ಪರವಾಗಿ ವಕೀಲ ಜಾವೇದ್ ಇಕ್ಬಾಲ್ ಜಫೇರಿ ಸಲ್ಲಿಸಿದ ಅರ್ಜಿಯನ್ನು ವಿಲೇವಾರಿ ಮಾಡಿದ ಇಸ್ಲಾಮಾಬಾದ್ ಹೈಕೋರ್ಟ್ ಮುಖ್ಯನ್ಯಾಯಮ‌ೂರ್ತಿ ಸರ್ದಾರ್ ಮುಹಮದ್ ಅಸ್ಲಾಂ ಪಾಕಿಸ್ತಾನದ ವ್ಯಾಪ್ತಿಯಲ್ಲಿ ಖಾನ್ ತಮ್ಮ ಬಂಧುಗಳು, ಸ್ನೇಹಿತರ ಭೇಟಿಗೆ ಯಾವುದೇ ನಿರ್ಬಂಧವಿಲ್ಲ ಎಂದು ತಿಳಿಸಿದೆ. ಆದಾಗ್ಯೂ, ಖಾನ್ ಪರಮಾಣು ಪ್ರಸರಣದ ಬಗ್ಗೆ ಖಾನ್ ಬಂಧುಗಳಿಗೆ ಮತ್ತು ಸ್ನೇಹಿತರಿಗೆ ಯಾವುದೇ ರೀತಿಯ ಮಾಹಿತಿ ನೀಡಬಾರದೆಂದು ಕೋರ್ಟ್ ಹೇಳಿದೆ.

ವಿಜ್ಞಾನಿ ತಾನು ಇಷ್ಟಪಟ್ಟ ವೈದ್ಯರಿಂದ ಆರೋಗ್ಯಸೇವೆಯನ್ನು ಒದಗಿಸಬೇಕು ಎಂದು ಕೋರ್ಟ್ ತಿಳಿಸಿದೆ. ಕಠಿಣ ಭದ್ರತಾ ವ್ಯವಸ್ಥೆಯಡಿ ವಿಜ್ಞಾನ ಪ್ರತಿಷ್ಠಾನಕ್ಕೆ ಖಾನ್ ಭೇಟಿ ನೀಡುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದೂ ಕೋರ್ಟ್ ತಿಳಿಸಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅಲ್ ಖೈದಾ ನೆಲೆಗಳ ಮೇಲೆ ಅಮೆರಿಕ ದಾಳಿ: ಒಬಾಮಾ
ಗಡುವು ಉಲ್ಲಂಘಿಸಿದರೆ ಇನ್ನಷ್ಟು ದಿಗ್ಬಂಧನ: ರೈಸ್
ತಾಲಿಬಾನ್ ವಿರುದ್ಧ ಪ್ರತಿದಾಳಿ: ಜಾಲ್ಮೆ ರಸೌಲ್ ಇಂಗಿತ
ಚೀನಾದಲ್ಲಿ ಬಸ್ ಸ್ಫೋಟಗಳಿಗೆ ಇಬ್ಬರು ಬಲಿ
ಬಲಿಷ್ಟಗೊಂಡ ಫಾಸ್ಟೋ ಚಂಡಮಾರುತ
ಇರಾಕ್‌ ಸೇನಾ ತೆರವಿಗೆ ಬ್ರಿಟನ್ ಚಿಂತನೆ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...