|
| ಅಲ್ ಖೈದಾ ನೆಲೆಗಳ ಮೇಲೆ ಅಮೆರಿಕ ದಾಳಿ: ಒಬಾಮಾ |
| ವಾಷಿಂಗ್ಟನ್, ಸೋಮವಾರ, 21 ಜುಲೈ 2008 ( 17:53 IST ) | |
ಭಯೋತ್ಪಾದನೆ ಗುಂಪುಗಳ ಉಪಸ್ಥಿತಿ ಬಗ್ಗೆ ವಾಷಿಂಗ್ಟನ್ನಿಗೆ ಕ್ರಮ ಕೈಗೊಳ್ಳಬಹುದಾದ ಗುಪ್ತಚರ ವರದಿಗಳು ತಲುಪಿದರೆ, ಅಮೆರಿಕ ಆಡಳಿತವು ಅಲ್ ಖೈದಾ ನೆಲೆಗಳ ಮೇಲೆ ದಾಳಿ ನಡೆಸುತ್ತದೆ ಎಂದು ಡೆಮಾಕ್ರಾಟ್ ಅಧ್ಯಕ್ಷೀಯ ಅಭ್ಯರ್ಥಿ ಬಾರಕ್ ಒಬಾಮಾ ಪಾಕಿಸ್ತಾನಕ್ಕೆ ಎಚ್ಚರಿಸಿದ್ದಾರೆ.
ಉನ್ನತ ಮಟ್ಟದ ಅಲ್ ಖೈದಾ ನೆಲೆಗಳ ವಿರುದ್ಧ ನಮಗೆ ಗುಪ್ತಚರ ಮಾಹಿತಿ ಸಿಕ್ಕಿದರೆ ಮತ್ತು ಪಾಕಿಸ್ತಾನ ಸರ್ಕಾರ ಆ ನೆಲೆಗಳ ಬೆನ್ನುಹತ್ತಲು ನಿರಾಕರಿಸಿದ ಪಕ್ಷದಲ್ಲಿ ನಾವು ದಾಳಿ ನಡೆಸುತ್ತೇವೆ ಎಂದು ಆಫ್ಘಾನಿಸ್ತಾನ ಮತ್ತು ಇರಾನ್‌ಗೆ ಪ್ರಸಕ್ತ ಪ್ರವಾಸದಲ್ಲಿರುವ ಒಬಾಮಾ ಹೇಳಿದ್ದಾರೆ.
ಹಾಗೆ ಆಗುತ್ತದೆಂದು ತಾವು ಆಶಿಸುವುದಿಲ್ಲ ಎಂದು ಹೇಳಿದ ಅವರು, ಒಸಾಮಾ ಬಿನ್ ಲಾಡೆನ್ ನಮ್ಮ ದೃಷ್ಟಿಯಲ್ಲಿದ್ದರೆ ನಾವು ಅವನ ಮೇಲೆ ಗುಂಡಿನ ದಾಳಿ ನಡೆಸುತ್ತೇವೆ ಅಥವಾ ಸೆರೆಹಿಡಿಯುತ್ತೇವೆ ಎನ್ನುವುದನ್ನು ಪಾಕ್ ಸರ್ಕಾರ ಗುರುತಿಸಬೇಕು ಎಂದು 47 ವರ್ಷದ ಇಲ್ಲಿನಾಯ್ಸ್ ಸೆನೆಟರ್ ಸಿಬಿಎಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿಯನ್ನು ಸ್ಥಿರಗೊಳಿಸಲು ಇನ್ನೂ ಹೆಚ್ಚು ಕೆಲಸ ಮಾಡಬೇಕೆನ್ನುವುದು ಸ್ಪಷ್ಟವಾಗಿದೆ ಎಂದು ರೈಸ್ ಹೇಳಿಕೆಯನ್ನು ಸಿಎನ್‌ಎನ್ ಪ್ರಸಾರ ಮಾಡಿದ ಬಳಿಕ ಒಬಾಮಾ ಪ್ರತಿಕ್ರಿಯೆ ಹೊರಬಿದ್ದಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|