ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಚೀನಾದಲ್ಲಿ ಬಸ್ ಸ್ಫೋಟಗಳಿಗೆ ಇಬ್ಬರು ಬಲಿ
ಬೀಜಿಂಗ್, ಸೋಮವಾರ, 21 ಜುಲೈ 2008   ( 14:09 IST )
ನೈರುತ್ಯಚೀನಾದಲ್ಲಿ ಸೋಮವಾರ ಸಾರ್ವಜನಿಕ ಬಸ್‌ಗಳಲ್ಲಿ ಎರಡು ಪ್ರತ್ಯೇಕ ಸ್ಫೋಟ ಸಂಭವಿಸಿ, ಇಬ್ಬರು ಸತ್ತಿದ್ದಾರೆ ಮತ್ತು 14 ಜನರು ಗಾಯಗೊಂಡಿದ್ದಾರೆ. ಈ ಘಟನೆಯಿಂದಾಗಿ ಒಲಿಂಪಿಕ್ ಕೂಟ ನಡೆಯುವಾಗ ಭದ್ರತಾ ಆತಂಕಗಳು ಉಲ್ಬಣಿಸಿವೆ. ಯುನಾನ್ ಪ್ರಾಂತ್ಯದ ಕುನ್‌ಮಿಂಗ್‌ನಲ್ಲಿ ವಾಹನದಟ್ಟಣೆಯ ಸಂದರ್ಭದಲ್ಲಿ ಒಂದು ಗಂಟೆ ಅಂತರದಲ್ಲಿ ಎರಡು ಸ್ಫೋಟಗಳು ಉಂಟಾಗಿವೆ ಎಂದು ಸಾರ್ವಜನಿಕ ಭದ್ರತಾ ಬ್ಯುರೋದ ಹೇಳಿಕೆ ತಿಳಿಸಿದೆ.

ಸ್ಫೋಟಗಳಿಗೆ ಕಾರಣ ತಿಳಿದುಬಂದಿಲ್ಲ ಮತ್ತು ಪೊಲೀಸರು ಪ್ರತಿಕ್ರಿಯಿಸಲು ನಿರ್ಧರಿಸಿದ್ದಾರೆ.ಆದರೆ ಮುಂದಿನ ತಿಂಗಳು ಬೀಜಿಂಗ್ ಒಲಿಂಪಿಕ್ಸ್‌ಗೆ ಚೀನಾ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾಕೂಟಕ್ಕೆ ಭಯೋತ್ಪಾದನೆ ಬೆದರಿಕೆ ಬಗ್ಗೆ ಪುನರಾವರ್ತಿತ ಎಚ್ಚರಿಕೆಗಳನ್ನು ಸರ್ಕಾರ ನೀಡುತ್ತಿರುವ ನಡುವೆ ಈ ಘಟನೆಗಳು ಉದ್ವಿಗ್ನತೆ ಮ‌ೂಡಿಸಿವೆ.

ಸರ್ಕಾರವನ್ನು ಒಲಿಂಪಿಕ್ಸ್‌ಗೆ ಮುನ್ನಾ, ಸೌಹಾರ್ದ ಮತ್ತು ಸ್ಥಿರ ಎಂದು ಬಿಂಬಿಸುವ ಪ್ರಯತ್ನಗಳಿಗೆ ಸಾಮಾಜಿಕ ಅಶಾಂತಿ ಅಡ್ಡಿಯಾಗಿರುವುದು ಅದನ್ನು ಚಿಂತೆಗೀಡುಮಾಡಿದೆ.ವಾಹನವೊಂದು ಬಸ್‌ನಿಲ್ದಾಣದಲ್ಲಿ ನಿಂತಿದ್ದಾಗ, ಮೊದಲ ಸ್ಫೋಟ ಬೆಳಿಗ್ಗೆ 7 ಗಂಟೆಗೆ ಸಂಭವಿಸಿ ಒಬ್ಬ ವ್ಯಕ್ತಿ ಸತ್ತಿದ್ದಾರೆ ಮತ್ತು ಇನ್ನೂ 7 ಜನರು ಗಾಯಗೊಂಡರು ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.

ಒಂದು ಗಂಟೆಯ ಬಳಿಕ ಅದೇ ರಸ್ತೆಯಲ್ಲಿ ಎರಡನೇ ಸ್ಫೋಟ ಸಂಭವಿಸಿ ಒಬ್ಬ ವ್ಯಕ್ತಿ ಅಸುನೀಗಿದ್ದಾರೆ ಮತ್ತು ನಾಲ್ವರು ಗಾಯಗೊಂಡರು ಎಂದು ಹೇಳಿಕೆ ತಿಳಿಸಿದೆ. ಸ್ಫೋಟಗಳಿಗೆ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಲಿಷ್ಟಗೊಂಡ ಫಾಸ್ಟೋ ಚಂಡಮಾರುತ
ಇರಾಕ್‌ ಸೇನಾ ತೆರವಿಗೆ ಬ್ರಿಟನ್ ಚಿಂತನೆ
ಮ‌ೂವರು ಅಮೆರಿಕದ ಮಾಹಿತಿದಾರರ ಹತ್ಯೆ
ಬಾಸ್‌‍‌ನಿಂದ ಥಳಿತ: ಐಸಿಯು ಸೇರಿದ ಭಾರತೀಯ
ಸೌದಿ ಯುವತಿಯರ ಏರಿದ ವಧುದಕ್ಷಿಣೆ
ಆಸಿಯನ್ ನೇಪಥ್ಯದಲ್ಲಿ ರೈಸ್, ಪಾಕ್ ಯು-ಚಿನ್ ಭೇಟಿ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...