|
| ಇರಾಕ್ ಸೇನಾ ತೆರವಿಗೆ ಬ್ರಿಟನ್ ಚಿಂತನೆ |
| ಲಂಡನ್, ಭಾನುವಾರ, 20 ಜುಲೈ 2008 ( 12:51 IST ) | |
ಮುಂದಿನ ವರ್ಷದ ಆರಂಭದ ವೇಳೆಗೆ ಇರಾನ್‌ನಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಚಿಂತನೆ ನಡೆಸಲಾಗುವುದು ಎನ್ನುವ ಮುನ್ಸೂಚನೆಯನ್ನು ಬ್ರಿಟನ್ ಪ್ರಧಾನಿ ಗೋರ್ಡನ್ ಬ್ರೌನ್ ನೀಡಿದ್ದಾರೆ. ಶನಿವಾರ ಒಂದು ದಿನದ ಭೇಟಿಗಾಗಿ ಇರಾಕ್‌ಗಾಗಿ ಬಂದಿದ್ದ ಬ್ರೌನ್ ಅವರು, "ಇರಾಕಿ ಪಡೆಗಳು ಶೀಘ್ರದಲ್ಲಿಯೇ, ಬ್ರಿಟನ್‌ನ ಮುಖ್ಯ ಕೇಂದ್ರ ಕಚೇರಿಗಳಿರುವ ಬಸ್ರಾ ವಿಮಾನ ನಿಲ್ದಾಣದ ಉಸ್ತುವಾರಿಯನ್ನು ತೆಗೆದುಕೊಳ್ಳಲಿವೆ" ಎಂದು ತಿಳಿಸಿದರು. ಇರಾಕಿ ಪಡೆಗಳಿಗೆ ತರಬೇತಿ ಮತ್ತು ಅದನ್ನು ಬಲಿಷ್ಠಗೊಳಿಸಿದ ನಂತರ ಅಲ್ಲಿರುವ ಬ್ರಿಟನ್ ಸೇನಾ ಪಡೆಯನ್ನು ವಾಪಸ್ ಸ್ವದೇಶಕ್ಕೆ ಕರೆಸಿಕೊಳ್ಳಲಾಗುವುದು. ಇದು ನಿಗದಿಗೊಂಡಿರುವ 2010ರ ಚುನಾವಣೆಗೆ ಮುನ್ನ ಆಗಲಿದೆ ಎಂದು ತಿಳಿಸಿದರು.
ಕಳೆದ ಅಕ್ಟೋಬರ್‌ನಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಬ್ರೌನ್, ಬ್ರಿಟನ್ ಪಡೆಯು ಅಂತಿಮ ಹಂತದ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಮುಂದಿನ ವಸಂತದ ವೇಳೆಗೆ 2,500 ತಂಡಗಳನ್ನು ಕಡಿತಗೊಳಿಸಲಾಗುವುದು ಎಂದು ತಿಳಿಸಿದ್ದರು. ಆದರೆ ಇಲ್ಲಿ ಇನ್ನೂ 4100 ಪಡೆಗಳು ಕಾರ್ಯನಿರತವಾಗಿವೆ.
ವರದಿಯೊಂದು ತಿಳಿಸುವ ಪ್ರಕಾರ, ಬ್ರೌನ್ ಇನ್ನೂ ಯಾವುದೇ ರೀತಿಯ ಖಚಿತ ಟೈಂ ಟೇಬಲ್ ಅನ್ನು ಇದಕ್ಕಾಗಿ ನಿಗದಿಗೊಳಿಸಿಲ್ಲ ಎಂದಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|