|
| ಜಪಾನ್‌ನಲ್ಲಿ ಡಾ.ಸಿಂಗ್, ಬುಷ್ ಭೇಟಿ |
| ಟೊಕಿಯೊ, ಬುಧವಾರ, 9 ಜುಲೈ 2008 ( 11:20 IST ) | |
ಭಾರತ-ಅಮೆರಿಕ ಪರಮಾಣು ಒಪ್ಪಂದದ ವಿಷಯದ ಬಗ್ಗೆ ಸ್ವದೇಶದಲ್ಲಿ ರಾಜಕೀಯ ಕ್ಷೋಭೆ ಆವರಿಸಿರುವ ನಡುವೆ, ಜಪಾನ್‌ನಲ್ಲಿ ಜಿ-8 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಬುಧವಾರ ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರನ್ನು ಭೇಟಿ ನೀಡಿದರು. ಉಭಯ ನಾಯಕರು ಅಣು ಒಪ್ಪಂದದ ಬಗ್ಗೆ ಮಾತನಾಡಿ, ಭಾರತ ಮತ್ತು ಅಮೆರಿಕಕ್ಕೆ ಒಪ್ಪಂದ ಮುಖ್ಯವಾಗಿದೆ ಎಂದು ಬುಷ್ ಹೇಳಿದರು.
ಮೌಂಟ್ ಪರಾಮಾಯ್ ಹೊಟೆಲ್ ವಿಂಡ್ಸರ್‌ನಲ್ಲಿ 50 ನಿಮಿಷಗಳ ಸಭೆಯಲ್ಲಿ ಡಾ.ಸಿಂಗ್ ಮತ್ತು ಬುಷ್ ಇಬ್ಬರು ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಉಭಯ ರಾಷ್ಟ್ರಗಳ ನಡುವೆ ಸುಮಧುರ ಬಾಂಧವ್ಯದ ಅಗತ್ಯವನ್ನು ಒತ್ತಿಹೇಳಿದರು. ಸಭೆಯ ಬಳಿಕ ಉಭಯ ನಾಯಕರು ಹಗುರ ಮನಸ್ಥಿತಿಯಲ್ಲಿ ಮಾಧ್ಯಮದ ಜತೆ ಮಾತನಾಡಿದರು ಮತ್ತು ಸ್ನೇಹಪೂರ್ಣ ಭಾವನೆ ತೋರಿಸಿದರು.
ಆದಾಗ್ಯೂ, ಪ್ರಧಾನಮಂತ್ರಿ ಸ್ವದೇಶದಲ್ಲಿ ಕ್ಷೋಭೆಯ ರಾಜಕೀಯ ಬೆಳವಣಿಗೆಗಳ ಬಗ್ಗೆ ತಲೆಕೆಡಿಸಿಕೊಂಡಂತೆ ಕಂಡುಬರಲಿಲ್ಲ. ನೈಜ ವ್ಯೂಹಾತ್ಮಕ ಪಾಲುದಾರಿಕೆಯ ಲಕ್ಷಣಗಳನ್ನು ಹೊಂದಿರುವ ದ್ವಿಪಕ್ಷೀಯ ಬಾಂಧವ್ಯದ ಸ್ಥಿತಿಗತಿ ಬಗ್ಗೆ ತಮಗೆ ತೃಪ್ತಿಯಾಗಿದೆ ಎಂದು ಸಿಂಗ್ ಹೇಳಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಾ.ಸಿಂಗ್ ಒಪ್ಪಂದವನ್ನು ಉಲ್ಲೇಖಿಸದೇ ಪರಮಾಣು, ರಕ್ಷಣಾ, ಬಾಹ್ಯಾಕಾಶ ಸಹಕಾರ ಮತ್ತು ಶಿಕ್ಷಣ ವಿನಿಮಯಗಳಲ್ಲಿ ಉಭಯ ರಾಷ್ಟ್ರಗಳು ಪ್ರಗತಿ ಸಾಧಿಸಿವೆ ಎಂದು ನುಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು. |
| |
|
|
|
|
|
|
|