|
| ಇಂಗಾಲದ ಹೊಮ್ಮುವಿಕೆ ಶೇ.50 ಕಡಿತಕ್ಕೆ ಒಪ್ಪಿಗೆ |
| ಹೊಕೈಡೊ, ಮಂಗಳವಾರ, 8 ಜುಲೈ 2008 ( 19:09 IST ) | |
ಜಾಗತಿಕ ತಾಪಮಾನವನ್ನು ನಿಭಾಯಿಸುವ ಪ್ರಯತ್ನವಾಗಿ ಇಂಗಾಲದ ಹೊರಸೂಸುವಿಕೆಯನ್ನು ಶೇ.50ರಷ್ಟು ಕಡಿತ ಮಾಡುವ ಜಾಗತಿಕ ಗುರಿಯನ್ನು ಇಟ್ಟುಕೊಳ್ಳಲು ವಿಶ್ವನಾಯಕರು ಒಪ್ಪಿಗೆ ಸೂಚಿಸಿದ್ದಾರೆ. 8 ಕೈಗಾರಿಕಾ ರಾಷ್ಟ್ರಗಳ ಸಮೂಹದ ಶೃಂಗಸಭೆಯ ಆತಿಥ್ಯ ವಹಿಸಿರುವ ಜಪಾನ್ ಪ್ರಧಾನಮಂತ್ರಿ ಯಾಸುವೊ ಫಾಕುಡಾ ಇಡೀ ರಾತ್ರಿ ನಡೆದ ಮಾತುಕತೆ ಬಳಿಕ ಒಪ್ಪಂದವನ್ನು ಪ್ರಕಟಿಸಿದರು.
ಕಳೆದ ವರ್ಷ ನಡೆದ ಜಿ-8 ಶೃಂಗಸಭೆಯಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿತಮಾಡುವ ಬಗ್ಗೆ ಗಂಭೀರವಾಗಿ ಪರಿಗಣಿಸಲು ಶಪಥ ತೊಟ್ಟಿದ್ದವು. ತೈಲಬೆಲೆಗಳು ಗಗನಮುಖಿಯಾಗಿರುವ ಹಿನ್ನೆಲೆಯಲ್ಲಿ ಜಾಗತಿಕ ತಾಪಮಾನಕ್ಕೆ ಬೆದರಿಕೆಯಾಗಿರುವ ಬಗ್ಗೆ ಗಂಭೀರ ಆತಂಕವನ್ನು ನಾಯಕರು ವ್ಯಕ್ತಪಡಿಸಿದ್ದಾರೆ.
ಶೃಂಗಸಭೆಯು ಹೊಕ್ಕೈಡೊನ ಜಪಾನಿ ದ್ವೀಪ ಟೊಯಾಕೊನಲ್ಲಿ ನಡೆಯುತ್ತಿದ್ದು, ಜಿ-8 ರಾಷ್ಟ್ರಗಳಾದ ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ರಷ್ಯಾ ಮತ್ತು ಅಮೆರಿಕದ ಧುರೀಣರು ಪಾಲ್ಗೊಂಡಿದ್ದು, ಇನ್ನೂ 15 ರಾಷ್ಟ್ರಗಳ ಸಹೋದ್ಯೋಗಿಗಳು ಸೇರಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು. |
| |
|
|
|
|
|
|
|