|
| ಅಮೆರಿಕ ನೌಕಾದಳದ ಮೇಲೆ ದಾಳಿ : ಇರಾನ್ ಎಚ್ಚರಿಕೆ |
| ಟೆಹರಾನ್, ಮಂಗಳವಾರ, 8 ಜುಲೈ 2008 ( 18:04 IST ) | |
ತನ್ನ ಪರಮಾಣು ಕಾರ್ಯಕ್ರಮದ ಮೇಲೆ ಅಮೆರಿಕದ ದಾಳಿ ನಡೆದರೆ ಇರಾನ್ ಇಸ್ರೇಲ್ ಮತ್ತು ಕೊಲ್ಲಿಯಲ್ಲಿರುವ ಅಮೆರಿಕದ ನೌಕಾದಳದ ಮೇಲೆ ದಾಳಿ ನಡೆಸಲಿದೆ ಎಂದು ಪ್ರಮುಖ ವರಿಷ್ಠ ಅಯಾತೊಲ್ಲಾ ಖೊಮೇನಿಯ ಸಹಚರ ತಿಳಿಸಿದ್ದಾರೆ.
ಇರಾನ್ ವಿರುದ್ಧ ಮೊದಲ ದಾಳಿ ನಡೆದರೆ ವಿಶ್ವದಲ್ಲಿ ಅಮೆರಿಕದ ಮುಖ್ಯಹಿತಾಸಕ್ತಿಗಳು ಬೆಂಕಿಗೆ ಆಹುತಿಯಾಗಲಿವೆ ಎಂದು ಖೊಮೇನಿ ಪ್ರತಿನಿಧಿಯಾಗಿರುವ ಮಧ್ಯಮ ದರ್ಜೆಯ ಧರ್ಮಗುರು ಅಲಿ ಶಿರಾಜಿ ಎಚ್ಚರಿಸಿದ್ದಾರೆ.ಟೆಲ್ ಅವೀವ್ ಮತ್ತು ಪರ್ಶಿಯದ ಕೊಲ್ಲಿಯಲ್ಲಿರುವ ಅಮೆರಿಕದ ನೌಕಾಬಲವನ್ನು ಗುರಿಯಾಗಿಸಿ ಬೆಂಕಿಗೆ ಆಹುತಿಮಾಡುವ ಮೂಲಕ ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತದೆ ಎಂದು ಅವರು ಹೇಳಿದ್ದಾರೆ
.ಅಮೆರಿಕ ಮತ್ತು ಇಸ್ರೇಲ್ ಇರಾನ್ ಪರಮಾಣು ಕಾರ್ಯಕ್ರಮದ ವಿರುದ್ಧ ದಾಳಿಯನ್ನು ತಳ್ಳಿಹಾಕಿಲ್ಲ. ಇಸ್ರೇಲ್ ಗ್ರೀಸ್‌ನಲ್ಲಿ ಸಮರಾಭ್ಯಾಸ ನಡೆಸಿದೆಯೆಂಬ ವರದಿಗಳಿಂದ ಇರಾನ್ ಪರಮಾಣು ನೆಲೆಗಳ ಮೇಲೆ ದಾಳಿಗೆ ಸಜ್ಜಾಗುತ್ತಿದೆಯೆಂಬ ವದಂತಿ ದಟ್ಟವಾಗಿ ಹರಡಿತ್ತು.
ಜಿಯೋನಿಸ್ಟ್ ಆಡಳಿತವು ಶ್ವೇತಭವನದ ನಾಯಕರ ಮೇಲೆ ಇರಾನ್ ವಿರುದ್ಧ ಮಿಲಿಟರಿ ದಾಳಿ ನಡೆಸುವಂತೆ ಒತ್ತಡ ಹೇರುತ್ತಿದೆ. ಇಂತಹ ನಿರ್ಧಾರ ಕೈಗೊಂಡರೆ ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಲಿದೆ ಎಂದು ಅವರು ನುಡಿದಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು. |
| |
|
|
|
|
|
|
|