|
| ಕಾಬುಲ್ ದಾಳಿಯಲ್ಲಿ ಐಎಸ್‌ಐ ಕೈವಾಡ ಶಂಕೆ |
| ಕಾಬುಲ್, ಸೋಮವಾರ, 7 ಜುಲೈ 2008 ( 19:03 IST ) | |
ಕಾಬುಲ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಮೇಲೆ ನಡೆದ ದಾಳಿಯಲ್ಲಿ ಐಎಸ್‌ಐ ಕೈವಾಡವನ್ನು ಶಂಕಿಸಿರುವುದಾಗಿ ಭಾರತದ ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ಗುಪ್ತಚರ ಸಂಸ್ಥೆಯ ಜತೆ ಸಮನ್ವಯತೆ ಮತ್ತು ಸಮಾಲೋಚನೆ ಬಳಿಕ ದಾಳಿಯನ್ನು ನಡೆಸಲಾಗಿದೆ ಎಂದು ಅಫ್ಘಾನಿಸ್ತಾನದ ಮೂಲಗಳು ತಿಳಿಸಿವೆ.
ಈ ವಾರ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಯುವುದೆಂದು ನಿರ್ದಿಷ್ಟ ಗುಪ್ತಚರ ವರದಿಗಳಿದ್ದರೂ, ದಾಳಿ ನಡೆದಿರುವುದು ಪ್ರಮುಖ ಭದ್ರತಾ ದೋಷವಾಗಿದೆ ಎಂದು ವರದಿಗಳು ತಿಳಿಸಿವೆ.
ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಪರಿಸ್ಥಿತಿ ಅಧ್ಯಯನಕ್ಕೆ ಉನ್ನತ ಮಟ್ಟದ ತಂಡವು ಕಾಬುಲ್‌ಗೆ ತೆರಳುತ್ತಿದೆ.ಸ್ಫೋಟದ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ರಕ್ಷಣಾ ಸಚಿವರ ಜತೆ ತುರ್ತು ಸಭೆ ಕರೆದಿದ್ದಾರೆಂದು ರಕ್ಷಣಾ ಕಾರ್ಯದರ್ಶಿ ಮತ್ತು ಎಂಇಎ ಅಧಿಕಾರಿಗಳು ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಚಿತ್ರರಂಗದಲ್ಲಿ ಒಂದಲ್ಲ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಒಂದು ಗೊಂದಲ ಸೃಷ್ಟಿಯಾಗಿದೆ. ಅದು ಚಿತ್ರರಂಗದ ಮಂದಿಯದ್ದಲ್ಲ. ಬದಲಾಗಿ ಪ್ರೇಕ್ಷಕರ ನಡುವೆ. 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಹಾಡು ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ ಇದು ಯಾವ ಚಿತ್ರದ ಹಾಡು? |
| |
|
|
|
|
|
|
|