ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಬೀಜಿಂಗ್ ಒಲಿಂಪಿಕ್ಸ್‌ಗೆ ಅಡ್ಡಿಬೇಡ: ಚೀನಾ ಎಚ್ಚರಿಕೆ
ಬೀಜಿಂಗ್, ಸೋಮವಾರ, 7 ಜುಲೈ 2008   ( 17:51 IST )
ಟಿಬೆಟ್ ವಿಷಯದ ಬಗ್ಗೆ ಮಾತುಕತೆ ಯಾವುದೇ ಪ್ರಗತಿ ಸಾಧಿಸದಿರುವ ಹಿನ್ನೆಲೆಯಲ್ಲಿ ದಲೈಲಾಮಾ ಪ್ರತಿನಿಧಿಗಳ ಜತೆ ಮುಂದಿನ ಮಾತುಕತೆಯು ಬೀಜಿಂಗ್ ಒಲಿಂಪಿಕ್ಸ್‌ಗೆ ಅಡ್ಡಿಮಾಡಬಾರದೆಂಬ ತಮ್ಮ ಬೇಡಿಕೆಗೆ ದಲೈಲಾಮಾ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿದೆ ಎಂದು ಚೀನಾ ಘೋಷಿಸಿದೆ.

ಭಾರತ ಮ‌ೂಲದ ಟಿಬೆಟ್ ಯುವ ಕಾಂಗ್ರೆಸ್‌ನ ಭಯೋತ್ಪಾದಕ ಚಟುವಟಿಕೆಗಳ ನಿಗ್ರಹಕ್ಕೆ ದೃಢ ಕ್ರಮಗಳನ್ನು ಕೈಗೊಳ್ಳುವಂತೆ, ಹಿಂಸಾತ್ಮಕ ಚಟುವಟಿಕೆಗಳ ಸಂಚಿಗೆ ಬೆಂಬಲ ನೀಡದಂತೆ ಮತ್ತು ಟಿಬೆಟ್ ಸ್ವಾತಂತ್ರ್ಯಕ್ಕೆ ಒತ್ತಾಯಿಸುವ ಚಟುವಟಿಕೆಗೆ ಬೆಂಬಲಿಸದಂತೆ ಬೀಜಿಂಗ್‌ನಲ್ಲಿ ನಡೆದ ಗುಪ್ತ ಮಾತುಕತೆಯಲ್ಲಿ ಚೀನಾ ಒತ್ತಾಯಿಸಿದೆ.

ದಲೈಲಾಮಾ ಇಂತಹ ಸರಳ ಮತ್ತು ಯುಕ್ತ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಮುಂದಿನ ಸುತ್ತಿನ ಮಾತುಕತೆಗೆ ಅಗತ್ಯ ವಾತಾವರಣ ಮತ್ತು ಪರಿಸ್ಥಿತಿ ಅಸಾಧ್ಯವಾಗುತ್ತದೆ ಎಂದು ಚೀನಾ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ವಕ್ತಾರ ತಿಳಿಸಿದ್ದಾರೆ.ಚೀನಾದ ನಿಲುವನ್ನು ಪುನರುಚ್ಚರಿಸಿದ ಅವರು, ಮಾತುಕತೆಗೆ ಬಾಗಿಲು ಸದಾ ತೆರೆದಿದೆ ಎಂದು ಹೇಳಿದರು.

ದಲೈಲಾಮಾ ತನ್ನ ಮಾತಿನಂತೆ ನಡೆದುಕೊಂಡರೆ ಮತ್ತು ನಾಲ್ಕು ಷರತ್ತುಗಳನ್ನು ನಿಜವಾಗಿ ಆಚರಿಸಿದರೆ ಮಾತುಕತೆಯು ಸಕಾರಾತ್ಮಕವಾಗಿರುತ್ತದೆ ಎಂದು ಅವರು ನುಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಶ್ವಪರಂಪರೆ ಪಟ್ಟಿಗೆ ಮ‌ೂರು ಹೊಸ ಸ್ಥಳಗಳು
ರಾಯಭಾರ ಕಚೇರಿಯಲ್ಲಿ ಸ್ಫೋಟ: 41 ಜನರ ಸಾವು
ಶೋಭರಾಜ್‌ನನ್ನು ಸಮರ್ಥಿಸಿಕೊಂಡ ನಿಹಿತಾ
ಆತ್ಮಾಹುತಿ ಬಾಂಬ್ ಸ್ಫೋಟ: 18 ಪೊಲೀಸರು, ನಾಗರಿಕ ಬಲಿ
ಚುನಾವಣೆ ಅಕ್ರಮ ಸಾಬೀತು ಮಾಡಿದ ಚಲನಚಿತ್ರ
ಮಿಲಿಟರಿ ದಾಳಿಯಾದರೆ ತೈಲ ಬೆಲೆ ಗಗನಕ್ಕೆ: ಇರಾನ್
ಗ್ರಹ ಗತಿ
ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಮಲದಳಕ್ಕೆ ಸಿಂಧ್ಯಾ ಸೇರ್ಪಡೆ?
ಇತ್ತೀಚೆಗಷ್ಟೇ ಬಿಎಸ್ಪಿಯಿಂದ ಉಚ್ಛಾಟನೆಗೊಂಡಿರುವ ಹಿರಿಯ ಮುಖಂಡ ಪಿ.ಜಿ.ಆರ್. ಸಿಂಧ್ಯಾ ಅವರ ಮುಂದಿನ ರಾಜಕೀಯ..
ಚುನಾವಣೆಗೆ ಸಜ್ಜುಗೊಳ್ಳಲು ವೆಂಕಯ್ಯ ನಾಯ್ಡು ಕರೆ
ತನಿಖೆಯಾದರೆ ಗೌಡರ ಕುಟುಂಬ ಜೈಲಿಗೆ: ರೆಡ್ಡಿ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗದಲ್ಲಿ ಒಂದಲ್ಲ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಒಂದು ಗೊಂದಲ ಸೃಷ್ಟಿಯಾಗಿದೆ. ಅದು ಚಿತ್ರರಂಗದ ಮಂದಿಯದ್ದಲ್ಲ. ಬದಲಾಗಿ ಪ್ರೇಕ್ಷಕರ ನಡುವೆ. 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಹಾಡು ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ ಇದು ಯಾವ ಚಿತ್ರದ ಹಾಡು?
ಮುಂದೆ ಓದಿ|ಮತ್ತಷ್ಟು...