ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ರಾಯಭಾರ ಕಚೇರಿಯಲ್ಲಿ ಸ್ಫೋಟ: 41 ಜನರ ಸಾವು
ಕಾಬೂಲ್, 7 ಜುಲೈ 2008   ( 13:49 IST )
ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಗೇಟಿಗೆ ಸ್ಫೋಟಕ ತುಂಬಿದ ಕಾರನ್ನು ಆತ್ಮಾಹುತಿ ಬಾಂಬರ್‌ ಡಿಕ್ಕಿ ಹೊಡೆಸಿದ್ದರಿಂದ ನಾಲ್ವರು ಭಾರತೀಯರು ಸೇರಿದಂತೆ 41 ಜನರು ಸತ್ತಿದ್ದು, 141 ಮಂದಿ ಗಾಯಗೊಂಡ ಭೀಕರ ಘಟನೆ ಸೋಮವಾರ ಸಂಭವಿಸಿದೆ.

ಬ್ರಿಗೇಡಿಯರ್ ದರ್ಜೆಯ ರಕ್ಷಣಾಅಧಿಕಾರಿ, ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿ ಮತ್ತು ರಾಯಭಾರ ಕಚೇರಿಯಲ್ಲಿ ಕಾವಲಿದ್ದ ಇಬ್ಬರು ಪ್ಯಾರಾಮಿಲಿಟರಿ ಟ್ರೂಪರ್‌ಗಳು ಸೇರಿದಂತೆ ನಾಲ್ವರು ಭಾರತೀಯ ಪೌರರು ಸ್ಫೋಟದಲ್ಲಿ ಅಸುನೀಗಿದ್ದಾರೆ. ಭಾರತೀಯ ರಾಯಭಾರಿ ಮತ್ತಿತರ ಹಿರಿಯ ಅಧಿಕಾರಿಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟಿರುವವರಲ್ಲಿ ಬಹುತೇಕ ಮಂದಿ ವೀಸಾಗಳನ್ನು ಸ್ವೀಕರಿಸಲು ಕಾಯುತ್ತಿದ್ದ ಅಫ್ಘನ್ ಪೌರರು ಎಂದು ತಿಳಿದುಬಂದಿದೆ.

ಬಾಂಬರ್ ರಾಯಭಾರ ಕಚೇರಿಯ ಗೇಟ್‌ಗೆ ಕಾರನ್ನು ನುಗ್ಗಿಸಿದ್ದರಿಂದ ರಾಯಭಾರ ಕಚೇರಿಗೆ ಹಾನಿಯಾಗಿದೆ. ಸ್ಫೋಟದಿಂದ ಕಂದುಬಣ್ಣದ ದಟ್ಟವಾದ ಹೊಗೆ ಆವರಿಸಿದ್ದು, ನಗರದಾದ್ಯಂತ ಸ್ಫೋಟದ ಸದ್ದು ಕೇಳಿಬಂತು.ಅಫ್ಘಾನಿಸ್ತಾನಕ್ಕೆ ಭಾರತದ ರಾಯಭಾರಿ ಜಯನ್ ಪ್ರಸಾದ್ ದಾಳಿಯಲ್ಲಿ ನಾಲ್ವರು ಭಾರತೀಯರು ಸತ್ತಿರುವುದನ್ನು ಖಚಿತಪಡಿಸಿದ್ದಾರೆ.

ಇಂಡೊ-ಟಿಬೆಟನ್ ಗಡಿ ಪೊಲೀಸ್‌ನ ಇಬ್ಬರು ಸಿಬ್ಬಂದಿ ಸತ್ತವರಲ್ಲಿ ಸೇರಿದ್ದಾರೆಂದು ಅಧಿಕಾರಿ ಹೇಳಿದರು.ಹೊರಗೆ ನಿಲ್ಲಿಸಿದ್ದ ನಾಲ್ಕು ಕಾರುಗಳು ನಾಶವಾಗಿವೆ. ರಕ್ತಸಿಕ್ತ ಮಾಂಸದ ಚೂರುಗಳು ,ಛಿದ್ರ ಛಿದ್ರವಾದ ಶವಗಳು ಮತ್ತು ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಅವಯವಗಳ ದೃಶ್ಯ ಭೀಕರವಾಗಿತ್ತು ಎಂದು ಅಫ್ಘನ್ ಪ್ರತ್ಯಕ್ಷದರ್ಶಿ ತಿಳಿಸಿದ್ದಾನೆ.

ಕಾಬುಲ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿ ನಡೆದ ಬಗ್ಗೆ ನವದೆಹಲಿಯಲ್ಲಿ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ. ಮುಖರ್ಜಿ ರಕ್ಷಣಾ ಸಚಿವ ಆಂಟೋನಿ ಮತ್ತು ಹಿರಿಯ ಅಧಿಕಾರಿಗಳ ಜತೆ ಪರಿಸ್ಥಿತಿ ಕುರಿತು ಚರ್ಚಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಶ್ವಪರಂಪರೆ ಪಟ್ಟಿಗೆ ಮ‌ೂರು ಹೊಸ ಸ್ಥಳಗಳು
ಶೋಭರಾಜ್‌ನನ್ನು ಸಮರ್ಥಿಸಿಕೊಂಡ ನಿಹಿತಾ
ಆತ್ಮಾಹುತಿ ಬಾಂಬ್ ಸ್ಫೋಟ: 18 ಪೊಲೀಸರು, ನಾಗರಿಕ ಬಲಿ
ಚುನಾವಣೆ ಅಕ್ರಮ ಸಾಬೀತು ಮಾಡಿದ ಚಲನಚಿತ್ರ
ಮಿಲಿಟರಿ ದಾಳಿಯಾದರೆ ತೈಲ ಬೆಲೆ ಗಗನಕ್ಕೆ: ಇರಾನ್
ಅಮೆರಿಕದ ವಾಯುದಾಳಿಗೆ 22 ನಾಗರಿಕರು ಬಲಿ
ಗ್ರಹ ಗತಿ
ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಮಲದಳಕ್ಕೆ ಸಿಂಧ್ಯಾ ಸೇರ್ಪಡೆ?
ಇತ್ತೀಚೆಗಷ್ಟೇ ಬಿಎಸ್ಪಿಯಿಂದ ಉಚ್ಛಾಟನೆಗೊಂಡಿರುವ ಹಿರಿಯ ಮುಖಂಡ ಪಿ.ಜಿ.ಆರ್. ಸಿಂಧ್ಯಾ ಅವರ ಮುಂದಿನ ರಾಜಕೀಯ..
ಚುನಾವಣೆಗೆ ಸಜ್ಜುಗೊಳ್ಳಲು ವೆಂಕಯ್ಯ ನಾಯ್ಡು ಕರೆ
ತನಿಖೆಯಾದರೆ ಗೌಡರ ಕುಟುಂಬ ಜೈಲಿಗೆ: ರೆಡ್ಡಿ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗದಲ್ಲಿ ಒಂದಲ್ಲ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಒಂದು ಗೊಂದಲ ಸೃಷ್ಟಿಯಾಗಿದೆ. ಅದು ಚಿತ್ರರಂಗದ ಮಂದಿಯದ್ದಲ್ಲ. ಬದಲಾಗಿ ಪ್ರೇಕ್ಷಕರ ನಡುವೆ. 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಹಾಡು ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ ಇದು ಯಾವ ಚಿತ್ರದ ಹಾಡು?
ಮುಂದೆ ಓದಿ|ಮತ್ತಷ್ಟು...