ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಶೋಭರಾಜ್‌ನನ್ನು ಸಮರ್ಥಿಸಿಕೊಂಡ ನಿಹಿತಾ
ಕಾಠ್ಮಂಡು, ಸೋಮವಾರ, 7 ಜುಲೈ 2008   ( 13:22 IST )
20 ವರ್ಷ ವಯಸ್ಸಿನ ನೇಪಾಳಿ ಯುವತಿ ನಿಹಿತಾ ಬಿಸ್ವಾಸ್ ಕ್ರಿಮಿನಲ್ ಸೂತ್ರಧಾರ ಚಾರ್ಲ್ಸ್ ಶೋಭರಾಜ್ ಜತೆ ನಿಶ್ಚಿತಾರ್ಥ ಮಾಡಿಕೊಂಡ ಸುದ್ದಿ ಬಳಿಕ ವಿಶ್ವಾದ್ಯಂತ ಮುಖಪುಟಗಳಲ್ಲಿ ರಾರಾಜಿಸಿದ್ದಾರೆ. ಬಿಗಿ ಭದ್ರತೆಯ ಕಾಠ್ಮಂಡು ಜೈಲಿನಲ್ಲಿ ಪ್ರಸಕ್ತ ಶಿಕ್ಷೆ ಅನುಭವಿಸುತ್ತಿರುವ ಶೋಭರಾಜ್‌ನನ್ನು ನಿಹಿತಾ ಸಮರ್ಥಿಸಿಕೊಂಡಿದ್ದಾರೆ.

ತಮ್ಮ ಬಗ್ಗೆ ಮಾಧ್ಯಮದಲ್ಲಿ ಬರುತ್ತಿರುವ ವರದಿಗಳು ಸತ್ಯವಲ್ಲ ಮತ್ತು ಅವಹೇಳನಾಕಾರಿ ಎಂದು ನಿಹಿತಾ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ. ಕಂದು ಬಣ್ಣದ ಉಡುಪಿನಲ್ಲಿ ನೇಪಾಳದ ಕಾಂತಿಪುರದ ದೊಡ್ಡ ಖಾಸಗಿ ಟೆಲಿವಿಷನ್ ಕೇಂದ್ರದಲ್ಲಿ ಶನಿವಾರ ಸಂಜೆಯ ಸುದ್ದಿಬುಲೆಟಿನ್‌ನಲ್ಲಿ ಮೊದಲಿಗೆ ಪ್ರತ್ಯಕ್ಷಳಾದ ನಿಹಿತಾ, ಅಮೆರಿಕದ ಪ್ರವಾಸಿಯೊಬ್ಬನನ್ನು 40 ವರ್ಷಗಳ ಕೆಳಗೆ ಹತ್ಯೆ ಮಾಡಿದ ಆರೋಪದ ಮೇಲೆ, 20 ವರ್ಷಗಳ ಜೈಲುಶಿಕ್ಷೆಗೆ ಗುರಿಯಾದ ಶೋಭರಾಜ್ ವದಂತಿಗಳಿಗೆ ಬಲಿಪಶು ಎಂದು ಆಕೆ ಹೇಳಿದ್ದಾಳೆ

.ಶೋಭರಾಜ್‌ರನ್ನು ಅಕ್ರಮವಾಗಿ ಬಂಧಿಸಿ ಸುಮಾರು 11 ಪುಟಗಳನ್ನು ಬರೆಯುವಂತೆ ಬಲವಂತ ಮಾಡಿದರು ಎಂದು ನಿಹಿತಾ ಆರೋಪಿಸಿದ್ದಾಳೆ. ಶೋಭರಾಜ್ ಕೈಬರಹ ಮತ್ತು ಸಹಿಯ ಮಾದರಿಗಳನ್ನು ಬಳಸಿಕೊಂಡು ನಕಲಿ ದಾಖಲೆ ತಯಾರಿಸಿದ ಪೊಲೀಸರು ಶೋಭರಾಜ್ 1975ರಲ್ಲಿ ನೇಪಾಳಕ್ಕೆ ಭೇಟಿ ನೀಡಿದ್ದಾಗ ಹೊಟೆಲ್ ಅತಿಥಿ ರಿಜಿಸ್ಟರ್‌ನಲ್ಲಿ ಸಹಿ ಮಾಡಿದ್ದನೆಂದು ಹೇಳಿದ್ದಾರೆಂದು ನಿಹಿತಾ ತಿಳಿಸಿದಳು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಚುನಾವಣೆ ಅಕ್ರಮ ಸಾಬೀತು ಮಾಡಿದ ಚಲನಚಿತ್ರ
ಮಿಲಿಟರಿ ದಾಳಿಯಾದರೆ ತೈಲ ಬೆಲೆ ಗಗನಕ್ಕೆ: ಇರಾನ್
ಅಮೆರಿಕದ ವಾಯುದಾಳಿಗೆ 22 ನಾಗರಿಕರು ಬಲಿ
ತೆರೈಗೆ ಸ್ವಾಯತ್ತತೆ ನೀಡದ ಸರ್ಕಾರ: ಮಾದೇಶಿ ಅತೃಪ್ತಿ
ರೋಮ್ ನಗರ ಪಾಂಪೆಯಲ್ಲಿ ತುರ್ತುಸ್ಥಿತಿ
ಸಂಸತ್ ಸದಸ್ಯನ ಹತ್ಯೆ, 10 ತಾಲಿಬಾನಿಗಳ ಸಾವು
ಗ್ರಹ ಗತಿ
ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಮಲದಳಕ್ಕೆ ಸಿಂಧ್ಯಾ ಸೇರ್ಪಡೆ?
ಇತ್ತೀಚೆಗಷ್ಟೇ ಬಿಎಸ್ಪಿಯಿಂದ ಉಚ್ಛಾಟನೆಗೊಂಡಿರುವ ಹಿರಿಯ ಮುಖಂಡ ಪಿ.ಜಿ.ಆರ್. ಸಿಂಧ್ಯಾ ಅವರ ಮುಂದಿನ ರಾಜಕೀಯ..
ಚುನಾವಣೆಗೆ ಸಜ್ಜುಗೊಳ್ಳಲು ವೆಂಕಯ್ಯ ನಾಯ್ಡು ಕರೆ
ತನಿಖೆಯಾದರೆ ಗೌಡರ ಕುಟುಂಬ ಜೈಲಿಗೆ: ರೆಡ್ಡಿ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗದಲ್ಲಿ ಒಂದಲ್ಲ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಒಂದು ಗೊಂದಲ ಸೃಷ್ಟಿಯಾಗಿದೆ. ಅದು ಚಿತ್ರರಂಗದ ಮಂದಿಯದ್ದಲ್ಲ. ಬದಲಾಗಿ ಪ್ರೇಕ್ಷಕರ ನಡುವೆ. 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಹಾಡು ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ ಇದು ಯಾವ ಚಿತ್ರದ ಹಾಡು?
ಮುಂದೆ ಓದಿ|ಮತ್ತಷ್ಟು...