ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಆತ್ಮಾಹುತಿ ಬಾಂಬ್ ಸ್ಫೋಟ: 18 ಪೊಲೀಸರು, ನಾಗರಿಕ ಬಲಿ
ಇಸ್ಲಾಮಾಬಾದ್, ಸೋಮವಾರ, 7 ಜುಲೈ 2008   ( 13:49 IST )
ap
ಪಾಕಿಸ್ತಾನಿ ಕಮಾಂಡೊಗಳು ಲಾಲ್ ಮಸೀದಿಯನ್ನು ಸುತ್ತುವರಿದ ಪ್ರಥಮ ವಾರ್ಷಿಕದ ಅಂಗವಾಗಿ ಲಾಲ್ ಮಸೀದಿ ಬಳಿ ಭಾನುವಾರ ನಡೆದ ಬೃಹತ್ ರ‌್ಯಾಲಿಯಲ್ಲಿ ಆತ್ಮಾಹುತಿ ಬಾಂಬರ್‌ ಸ್ವತಃ ಸ್ಫೋಟಿಸಿಕೊಂಡಿದ್ದರಿಂದ 18 ಪೊಲೀಸರು ಮತ್ತು ನಾಗರಿಕ ಸತ್ತಿದ್ದಾರೆ. ಸ್ಥಳೀಯ ಕಾಲಮಾನ ಸಂಜೆ 7.50ಕ್ಕೆ ನಡೆದ ರ‌್ಯಾಲಿಯಲ್ಲಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ಸಾರ್ವಜನಿಕ ನೇಣು ಶಿಕ್ಷೆ ವಿಧಿಸಬೇಕೆಂದು ಸಾವಿರಾರು ಇಸ್ಲಾಮಿಕ್ ತೀವ್ರವಾದಿಗಳು ಒತ್ತಾಯಿಸಿ ಚದುರುತ್ತಿದ್ದಂತೆ, ಶಕ್ತಿಶಾಲಿ ಸ್ಫೋಟವು ಅಪ್ಪಳಿಸಿ ಅನೇಕ ಕಿಮೀ ದೂರದವರೆಗ ಕೇಳಿಸಿತು.

ಪ್ರಧಾನಮಂತ್ರಿಗಳಿಗೆ ಒಳಾಡಳಿತ ವ್ಯವಹಾರಗಳ ಸಲಹೆಗಾರ ರೆಹಮಾನ್ ಮಲಿಕ್ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿ, ಆತ್ಮಾಹುತಿ ಬಾಂಬರ್ ದಾಳಿ ನಡೆಸಿದ್ದಾನೆಂದು ವರದಿಗಾರರಿಗೆ ತಿಳಿಸಿದರು. 18 ಪೊಲೀಸರು ಮತ್ತು ನಾಗರಿಕನೊಬ್ಬ ದಾಳಿಯಲ್ಲಿ ಸತ್ತಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

ಸುಮಾರು 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರಲ್ಲಿ ಅನೇಕ ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ವಿವಿಧ ಆಸ್ಪತ್ರಗಳ ಅಧಿಕಾರಿಗಳು ತಿಳಿಸಿದರು.ಆಬ್‌ಪಾರಾ ಪೊಲೀಸ್ ಠಾಣೆ ಮತ್ತು ಮೆಲೋಡಿ ಮಾರುಕಟ್ಟೆಯ ವ್ಯಾಪ್ತಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅನೇಕ ದೇಹಗಳು ಸ್ಥಳದಲ್ಲಿ ಬಿದ್ದಿರುವ ಚಿತ್ರಗಳನ್ನು ಟಿವಿ ಚಾನೆಲ್‌ಗಳು ತೋರಿಸಿವೆ.

ಸುಮಾರು 30 ವರ್ಷ ವಯಸ್ಸಿನ ಆತ್ಮಾಹುತಿ ಬಾಂಬರ್ ಬಿಳಿಯ ಸಲ್ವಾರ್ ಕಮೀಜ್ ಧರಿಸಿದ್ದು, ಪೊಲೀಸ್ ಪಡೆಯ ಬಳಿ ಕಾಲ್ನಡಿಗೆಯಲ್ಲಿ ತಲುಪಿ ಸ್ವತಃ ಸ್ಫೋಟಿಸಿಕೊಂಡ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆತ್ಮಾಹುತಿ ಬಾಂಬರ್ ಶಿರವು ಪತ್ತೆಯಾಗಿದೆ ಎಂದು ಮಾಹಿತಿ ಸಚಿವ ಶೆರಿ ರೆಹಮಾನ್ ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಚುನಾವಣೆ ಅಕ್ರಮ ಸಾಬೀತು ಮಾಡಿದ ಚಲನಚಿತ್ರ
ಮಿಲಿಟರಿ ದಾಳಿಯಾದರೆ ತೈಲ ಬೆಲೆ ಗಗನಕ್ಕೆ: ಇರಾನ್
ಅಮೆರಿಕದ ವಾಯುದಾಳಿಗೆ 22 ನಾಗರಿಕರು ಬಲಿ
ತೆರೈಗೆ ಸ್ವಾಯತ್ತತೆ ನೀಡದ ಸರ್ಕಾರ: ಮಾದೇಶಿ ಅತೃಪ್ತಿ
ರೋಮ್ ನಗರ ಪಾಂಪೆಯಲ್ಲಿ ತುರ್ತುಸ್ಥಿತಿ
ಸಂಸತ್ ಸದಸ್ಯನ ಹತ್ಯೆ, 10 ತಾಲಿಬಾನಿಗಳ ಸಾವು
ಗ್ರಹ ಗತಿ
ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಮಲದಳಕ್ಕೆ ಸಿಂಧ್ಯಾ ಸೇರ್ಪಡೆ?
ಇತ್ತೀಚೆಗಷ್ಟೇ ಬಿಎಸ್ಪಿಯಿಂದ ಉಚ್ಛಾಟನೆಗೊಂಡಿರುವ ಹಿರಿಯ ಮುಖಂಡ ಪಿ.ಜಿ.ಆರ್. ಸಿಂಧ್ಯಾ ಅವರ ಮುಂದಿನ ರಾಜಕೀಯ..
ಚುನಾವಣೆಗೆ ಸಜ್ಜುಗೊಳ್ಳಲು ವೆಂಕಯ್ಯ ನಾಯ್ಡು ಕರೆ
ತನಿಖೆಯಾದರೆ ಗೌಡರ ಕುಟುಂಬ ಜೈಲಿಗೆ: ರೆಡ್ಡಿ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗದಲ್ಲಿ ಒಂದಲ್ಲ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಒಂದು ಗೊಂದಲ ಸೃಷ್ಟಿಯಾಗಿದೆ. ಅದು ಚಿತ್ರರಂಗದ ಮಂದಿಯದ್ದಲ್ಲ. ಬದಲಾಗಿ ಪ್ರೇಕ್ಷಕರ ನಡುವೆ. 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಹಾಡು ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ ಇದು ಯಾವ ಚಿತ್ರದ ಹಾಡು?
ಮುಂದೆ ಓದಿ|ಮತ್ತಷ್ಟು...