|
| ಇನ್ನೂ 50 ದಶಲಕ್ಷ ಜನರು ಹಸಿವಿನಿಂದ ತತ್ತರ |
| ಬ್ರಸೆಲ್ಸ್, 4 ಜುಲೈ 2008 ( 16:23 IST ) | |
ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಹೆಚ್ಚುವರಿ 50 ದಶಲಕ್ಷ ಜನರು ವಿಶ್ವಾದ್ಯಂತ ಹಸಿವಿನಿಂದ ತಲ್ಲಣಿಸಬೇಕಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದ್ದು, ಬಡರಾಷ್ಟ್ರಗಳಲ್ಲಿ ಆಹಾರ ಭದ್ರತೆ ಚೇತರಿಕೆಗೆ ಜಾಗತಿಕ ಸಹಕಾರ ಹೆಚ್ಚಿಸುವಂತೆ ಅದು ಕರೆ ನೀಡಿದೆ.
ದಾನಿರಾಷ್ಟ್ರಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು, ಅಭಿವೃದ್ಧಿಶೀಲ ರಾಷ್ಟ್ರಗಳ ಸರ್ಕಾರಗಳು, ನಾಗರಿಕ ಸಮಾಜ ಮತ್ತು ಖಾಸಗಿ ಕ್ಷೇತ್ರಗಳಿಗೆ ಹಸಿವಿನಿ ವಿರುದ್ಧ ಜಾಗತಿಕ ಹೋರಾಟ ಮಾಡುವ ಮಹತ್ವದ ಪಾತ್ರವನ್ನು ವಹಿಸಬೇಕು ಎಂದು ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ನಿರ್ದೇಶಕ ಜಾಕ್ವೆಸ್ ಡಿಯೋಫ್ ಬ್ರಸೆಲ್ಸ್ ಯೂರೋಪಿಯನ್ ಸಂಸತ್ತಿಗೆ ತಿಳಿಸಿದರು.
ಜೈವಿಕ ಅನಿಲಗಳ ಬಳಕೆ ಹೆಚ್ಚಳ, ಜನಸಂಖ್ಯೆ ಮತ್ತು ಆರ್ಥಿಕ ಬೆಳವಣಿಗೆಯಿಂದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಏರಿಕೆ ಮುಂತಾದ ಕಾರಣಗಳಿಂದ ಪ್ರಸಕ್ತ ಬಿಕ್ಕಟ್ಟು ಉದ್ಭವಿಸಿದೆ ಎಂದು ಅವರು ನುಡಿದರು.
ಕೆಲವು ರಫ್ತು ರಾಷ್ಟ್ರಗಳು ಕೈಗೊಂಡ ಸಟ್ಟಾವ್ಯಾಪಾರ ಮತ್ತು ರಸಗೊಬ್ಬರ ಬೆಲೆಗಳ ತೀವ್ರ ಏರಿಕೆಯಿಂದ ಈ ಸಮಸ್ಯೆಗಳನ್ನು ತೀವ್ರಗೊಳಿಸಿದೆ ಎಂದು ಅವರು ನುಡಿದರು.ಹವಾಮಾನ ಬದಲಾವಣೆ ಕೂಡ ಗಣನೀಯ ಪಾತ್ರವಹಿಸಿದ್ದು, ಬರಡು ಭೂಮಿಯಿಂದಾಗಿ ವಿಶ್ವ ಪ್ರತಿವರ್ಷ 5ರಿಂದ 10 ದಶಲಕ್ಷ ಹೆಕ್ಟೇರ್ ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಿದೆ ಎಂದು ಅವರು ನುಡಿದರು.
ಜಾಗತಿಕ ತಾಪಮಾನದಲ್ಲಿ ಶೇ.3 ಡಿಗ್ರಿಗಿಂತ ಹೆಚ್ಚಳದ ಪರಿಣಾಮವು ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ಕೆಲವು ಭಾಗಗಳಲ್ಲಿ ಬೆಳೆಯ ಇಳುವರಿ ಶೇ.20ರಿಂದ 40ರಷ್ಟು ಕುಸಿತಕ್ಕೆ ಕಾರಣವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ದೀರ್ಘಾವಧಿವರೆಗೆ ಅಂತಾರಾಷ್ಟ್ರೀಯ ಸಮುದಾಯ ಕೃಷಿಯನ್ನು ಉಪೇಕ್ಷೆ ಮಾಡಿದ ಪ್ರತಿಫಲವಾಗಿ ಪ್ರಸಕ್ತ ಪರಿಸ್ಥಿತಿ ಉದ್ಭವಿಸಿದೆ ಎಂದು ಡಿಯೋಫ್ ಗುರುವಾರ ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ. |
| |
|
|
|
|
|
|
|