|
| ಒಬಾಮಾಗೆ ನಿಧಿ ಸಂಗ್ರಹಕ್ಕೆ ಚಟ್ವಾಲ್ ನಿರ್ಧಾರ |
| ನ್ಯೂಯಾರ್ಕ್, ಶುಕ್ರವಾರ, 4 ಜುಲೈ 2008 ( 13:53 IST ) | |
ಅಧ್ಯಕ್ಷೀಯ ಪ್ರೈಮರಿ ಚುನಾವಣೆಯಲ್ಲಿ ಸೆನೇಟರ್ ಹಿಲರಿ ಕ್ಲಿಂಟನ್ ಪರವಾಗಿ 10 ದಶಲಕ್ಷ ಡಾಲರ್ ನಿಧಿ ಸಂಗ್ರಹಿಸಿದ್ದ ಹೊಟೆಲ್ ಮಾಲೀಕ ಸಂತ್ ಸಿಂಗ್ ಚಟ್ವಾಲ್, ಹಿಲರಿ ಕ್ಲಿಂಟನ್ ಅವರು ಬಾರಕ್ ಒಬಾಮಾರಿಗೆ ಬೆಂಬಲ ಘೋಷಿಸಿದ ಬಳಿಕ ಒಬಾಮಾ ಪ್ರಚಾರಕ್ಕೆ ಕೂಡ ದೊಡ್ಡ ಮೊತ್ತವನ್ನು ಸಂಗ್ರಹಿಸಿಕೊಡುವ ಬದ್ಧತೆ ವ್ಯಕ್ತಪಡಿಸಿದ್ದಾರೆ.
ಒಬಾಮಾ ಮತ್ತು ಡೆಮಾಕ್ರಟಿಕ್ ರಾಷ್ಟ್ರೀಯ ಸಮತಿಗೆ 10 ದಶಲಕ್ಷ ಡಾಲರ್ ಸಂಗ್ರಹಿಸುವ ಗುರಿಯನ್ನು ಅವರು ಹೊಂದಿದ್ದಾರೆ.ಈಗ ವ್ಯಕ್ತಿಯೊಬ್ಬ ಡೆಮಾಕ್ರಟಿಕ್ ಪಕ್ಷಕ್ಕೆ ಗರಿಷ್ಠ 28,500 ಡಾಲರ್ ನೆರವು ನೀಡಬಹುದಾಗಿದ್ದು, 10 ದಶಲಕ್ಷ ಡಾಲರ್ ಅಂತಹ ಅಪಾರ ಮೊತ್ತವೇನೂ ಅಲ್ಲ ಎಂದು ಸಂತ್ ಚಟ್ವಾಲ್ ತಿಳಿಸಿದರು.
ಒಬಾಮಾ ಪ್ರಚಾರಸಮಿತಿಯು ಕಳೆದ 2007ರಲ್ಲಿ ಟಿಪ್ಪಣಿಯೊಂದನ್ನು ಬಿಡುಗಡೆ ಮಾಡಿ ಹಿಲರಿ ಕ್ಲಿಂಟನ್ ಅವರು ಸಮುದಾಯದಿಂದ ಹಣ ಸ್ವೀಕರಿಸುವ ಬಗ್ಗೆ ಟೀಕಿಸಿತ್ತು. ಅದರಲ್ಲಿ ಚಟ್ವಾಲ್ ಹೆಸರನ್ನು ಕೂಡ ಪ್ರಸ್ತಾಪಿಸಿದ್ದು ಪರಿಸ್ಥಿತಿಯ ವ್ಯಂಗ್ಯವೆನಿಸಿದೆ.ಸಂಟ್ ಚಟ್ವಾಲ್ ಬಹುಶಃ ಡೆಮಾಕ್ರಾಟ್ ಪರ ಪ್ರಚಾರಕ್ಕೆ ನಿಧಿ ಸಂಗ್ರಹದಲ್ಲಿ ಭಾರತೀಯ-ಅಮೆರಿಕನ್ ಸಮುದಾಯದಲ್ಲಿ ಅತ್ಯಂತ ಪರಿಣಾಮಕಾರಿ ಎನ್ನಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ. |
| |
|
|
|
|
|
|
|