ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಶೋಭರಾಜ್‌ಗೆ ಬೇಸ್ತುಬಿದ್ದ 20ರ ಪ್ರಾಯದ ಬಾಲೆ
ಕಾಠ್ಮಂಡು, ಶುಕ್ರವಾರ, 4 ಜುಲೈ 2008   ( 11:52 IST )
ಬಿಕಿನಿ ಹಂತಕ ಎಂದೇ ಕುಖ್ಯಾತನಾದ ನೇಪಾಳದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಚಾರ್ಲ್ಸ್ ಶೋಭರಾಜ್ 64ರ ಇಳಿವಯಸ್ಸಿನ ಪ್ರಾಯದಲ್ಲಿ 20 ವರ್ಷದ ಬಾಲೆಯೊಬ್ಬಳ ಜತೆ ಪ್ರಣಯದಲ್ಲಿದ್ದಾನೆ. ಶಾಲಾಶಿಕ್ಷಣವನ್ನು ಈಗತಾನೇ ಮುಗಿಸಿ ರಾಜಕೀಯ ಪತ್ರಿಕೋದ್ಯಮದಲ್ಲಿ ವೃತ್ತಿಜೀವನ ಅಪೇಕ್ಷಿಸಿರುವ ಬಾಲಕಿ ಶೋಭರಾಜ್‌ಗೆ ಮನಸೋತು ಅವನನ್ನು ಜೀವನಸಂಗಾತಿಯಾಗಿ ಮಾಡಿಕೊಳ್ಳಲು ನಿಶ್ಚಯಿಸಿದ್ದಾಳೆ.

ಶೋಭರಾಜ್ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾಠ್ಮಂಡು ಸೆಂಟ್ರಲ್ ಜೈಲಿನಲ್ಲಿ ಮ‌ೂರು ತಿಂಗಳ ಹಿಂದೆ ಇಬ್ಬರೂ ಭೇಟಿಯಾದ ಬಳಿಕ ಪರಸ್ಪರ ಆಕರ್ಷಿತರಾಗಿದ್ದರು. ಶೋಭರಾಜ್ ಫ್ರೆಂಚ್ ವಕೀಲ ಇಸಾಬೆಲ್ಲೆ ಪ್ಯಾರಿಸ್‌ನಿಂದ ಆಗಮಿಸಿ ಜೀವಾವಧಿ ಶಿಕ್ಷೆಯ ವಿರುದ್ಧ ಶೋಭರಾಜ್ ಮೇಲ್ಮನವಿಯ ಸ್ಥಿತಿಗತಿ ಪರಿಶೀಲನೆ ನಡೆಸಲಿರುವ ಸಂದರ್ಭದಲ್ಲಿ ತಮ್ಮ ಮಾರ್ಗದರ್ಶಿ ಮತ್ತು ದುಬಾಷಿಯಾಗಿ ಬುದ್ಧಿವಂತ ಮತ್ತು ನಂಬಿಕಸ್ಥರಿಗಾಗಿ ಶೋಭರಾಜ್ ಹುಡುಕುತ್ತಿದ್ದನು.

ಶೋಭರಾಜ್‌ಗೆ ನಿಹಿತಾ ಪರಿಚಯಿಸಿಕೊಂಡಾಗ ಅದು ಪ್ರಥಮ ನೋಟದಲ್ಲೇ ಪ್ರೇಮಾಂಕುರದ ಪ್ರಕರಣವಾಗಿ ಪರಿಣಮಿಸಿತು.ಶೋಭರಾಜ್‌ಗೆ ದುಬಾಷಿಯ ಅಗತ್ಯಬಳಿಕ ಕಂಡುಬರದಿದ್ದರೂ ಆಕೆಗೆ ಕೆಲಸ ನೀಡಿ ಕೆಲವು ವಸ್ತುಗಳನ್ನು ಖರೀದಿಸುವಂತೆ ಪಟ್ಟಿ ನೀಡಿದ ಎಂದು ನಿಹಿತಾ ನಗುತ್ತಾ ಹೇಳಿದಳು. ಅವರಿಬ್ಬರ ನಡುವೆ ಪ್ರೇಮಾಂಕುರವಾದ ಬಳಿಕ ನಿಹಿತಾ ನಿಯಮಿತವಾಗಿ ಜೈಲಿಗೆ ಭೇಟಿ ನೀಡಿ ಅವನ ಜತೆ ಭೋಜನ ಹಂಚಿಕೊಳ್ಳುತ್ತಿದ್ದಳೆಂದು ತಿಳಿದುಬಂದಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕೊಕೇನ್, ಗಾಂಜಾ ಬಳಕೆಯಲ್ಲಿ ಅಮೆರಿಕ ಅಗ್ರಸ್ಥಾನ
ಇರಾನ್ ತೈಲೋತ್ಪನ್ನಕ್ಕೆ ಬದಲಿ ವ್ಯವಸ್ಥೆ ಕಷ್ಟ
ಮುಷರಫ್‌ಗೆ ಬೆಂಬಲ: ಬೌಚರ್ ವಿರುದ್ಧ ಷರೀಫ್ ಟೀಕೆ
ಮಿಲಿಟರಿ ಕಾರ್ಯಾಚರಣೆ: ಬೆಟಾನ್‌ಕೋರ್ಟ್ ಬಂಧಮುಕ್ತಿ
ಬುಲ್ಡೋಜರ್ ದಾಳಿಗೆ ಬಾನ್ ಖಂಡನೆ
ಇರಾನ್ ವಿರುದ್ಧ ಇಸ್ರೇಲ್ ದಾಳಿ ಅನಪೇಕ್ಷಿತ: ಪ್ರಣವ್
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಲಾರಿ ಮುಷ್ಕರ, ಬಂದ್‌ನಿಂದ ಕಂಗೆಟ್ಟ ಶ್ರೀಸಾಮಾನ್ಯ
ಒಂದು ಕಡೆ ಲಾರೀ ಮುಷ್ಕರ ಇನ್ನೊಂದೆಡೆ ವಿಶ್ವಹಿಂದೂ ಪರಿಷತ್ ಕರೆಕೊಟ್ಟಿರುವ ಬಂದ್‌ನಿಂದಾಗಿ ....
ಸುಪ್ರಿಂಕೋರ್ಟ್ ಮೊರೆಗೆ ಕರವೇ ನಿರ್ಧಾರ
ಜೆಡಿಎಸ್ ಮುಗಿಸಲು ಷಡ್ಯಂತ್ರ: ರೇವಣ್ಣ ಆರೋಪ
ಮನರಂಜನೆ
ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ.
ಮುಂದೆ ಓದಿ|ಮತ್ತಷ್ಟು...