|
| ಇರಾನ್ ತೈಲೋತ್ಪನ್ನಕ್ಕೆ ಬದಲಿ ವ್ಯವಸ್ಥೆ ಕಷ್ಟ |
| ಮ್ಯಾಡ್ರಿಡ್, 3 ಜುಲೈ 2008 ( 16:48 IST ) | |
ಇರಾನ್ ಮೇಲೆ ದಾಳಿ ನಡೆದರೆ ಆ ರಾಷ್ಟ್ರದ ಕಚ್ಚಾ ತೈಲೋತ್ಪನ್ನಕ್ಕೆ ಪರ್ಯಾಯವನ್ನು ಹುಡುಕುವುದು ಕಷ್ಟ ಎಂದು ತೈಲ ರಫ್ತು ರಾಷ್ಟ್ರಗಳ ಗುಂಪಿನ ಒಪೆಕ್ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
ಇರಾನ್‌ಗೆ ಏನಾದರೂ ಸಂಭವಿಸಿದರೆ, ಇರಾನ್ ದಿನಕ್ಕೆ ಉತ್ಪಾದಿಸುವ 4.1ರಿಂದ 4.2 ದಶಲಕ್ಷ ಡಾಲರ್‌ಗೆ ಬದಲಿ ವ್ಯವಸ್ಥೆ ಮಾಡುವುದು ಕಷ್ಟ ಎಂದು ವಿಶ್ವ ಪೆಟ್ರೋಲಿಯಂ ಸಮಾವೇಶದ ದಿನಪತ್ರಿಕೆಗೆ ಇರಾನ್ ದಿನನಿತ್ಯದ ಉತ್ಪಾದನೆಯನ್ನು ಉಲ್ಲೇಖಿಸುತ್ತಾ ಅಬ್ದಲ್ಲಾ ಎಲ್ ಬದ್ರಿ ಹೇಳಿದರು.
ಇರಾನ್ ಮೇಲೆ ದಾಳಿನಡೆದರೆ ಅದು ಮಧ್ಯಪೂರ್ವದ ಶೇ.40ರಷ್ಟು ತೈಲ ಸಾಗಣೆಯ ನೌಕಾಮಾರ್ಗವಾದ ಮಾಹೋರ್ಮುಜ್ ಜಲಸಂಧಿಯನ್ನು ಮುಚ್ಚುವುದೆಂಬ ಶಂಕೆಗಳ ಬಗ್ಗೆ ಪ್ರಶ್ನಿಸಿದಾಗ, ನೀವು ಯುದ್ಧದಲ್ಲಿದ್ದಾಗ ಏನು ಬೇಕಾದರೂ ಮಾಡಬಹುದು ಎಂದು ನುಡಿದರು.ಇಸ್ರೇಲಿ ಯುದ್ಧವಿಮಾನಗಳು ಸಮರಾಭ್ಯಾಸ ನಡೆಸಿದ ಬಳಿಕ ಇರಾನ್ ಪರಮಾಣು ಕೇಂದ್ರಗಳ ಮೇಲೆ ಇಸ್ರೇಲ್ ದಾಳಿ ನಡೆಸುವುದೆಂಬ ಊಹಾಪೋಹ ದಟ್ಟವಾಗಿರುವ ನಡುವೆ ಬದ್ರಿ ಹೇಳಿಕೆ ಹೊರಬಿದ್ದಿದೆ.
ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಬಗ್ಗೆ 5 ವರ್ಷಗಳಿಂದ ವಿವಾದಕ್ಕೆ ಗುರಿಯಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಇರಾನ್ ಅಣ್ವಸ್ತ್ರ ತಯಾರಿಸಲು ಪರಮಾಣು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಶಂಕೆ ವ್ಯಕ್ತಪಡಿಸಿದ್ದರೆ, ವಿದ್ಯುತ್ ಉತ್ಪಾದನೆಗೆ ಮಾತ್ರ ಎಂದು ಇರಾನ್ ವಾದಿಸುತ್ತಿದೆ.
ದಾಳಿ ನಡೆದರೆ ಟೆಹರಾನ್ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ಇರಾನ್ ತೈಲ ಸಚಿವ ಗುಲಾಂ ಹುಸೇನ್ ನೊಜಾರಿ ಅವರನ್ನು ಪ್ರಶ್ನಿಸಿದಾಗ ಇಂತಹ ಚಟುವಟಿಕೆ ನಡೆದರೆ ಇರಾನ್ ಘೋರವಾಗಿ ಪ್ರತಿಕ್ರಿಯಿಸುವುದು ಎಂದು ಹೇಳಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. ಸ್ತ್ರೀಯರಿಗೆ ವಸ್ತ್ರಲಾಭ ಸಾಧ್ಯತೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಅದು ಕಾರಂಜಿಯ ಬಗ್ಗೆ ಮಾತನಾಡಲು ನಿರ್ಮಾಪಕ ಎಂ.ಎನ್. ಸುರೇಶ್ ಕರೆದಿದ್ದ ಪತ್ರಿಕಾಗೋಷ್ಠಿ. ಅಲ್ಲಿ ಅವರು ಒಂದಷ್ಟನ್ನು ಹರವಿಕೊಂಡರು. ತಮ್ಮ ಕನಸಿನ ಕಾರಂಜಿಯನ್ನು ಬಣ್ಣಿಸಿದರು. ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವುದು ನನ್ನ ಉದ್ದೇಶ. ಹಣ ಗಳಿಸುವುದು ಮುಂದಿನ |
| |
|
|
|
|
|
|
|