ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಮುಷರಫ್‌ಗೆ ಬೆಂಬಲ: ಬೌಚರ್ ವಿರುದ್ಧ ಷರೀಫ್ ಟೀಕೆ
ಇಸ್ಲಾಮಾಬಾದ್, ಗುರುವಾರ, 3 ಜುಲೈ 2008   ( 13:38 IST )
ap
ಮುಷರಫ್ ವಿರುದ್ಧ ಕ್ರಮ ಕೈಗೊಳ್ಳುವಿಕೆ ಪಾಕಿಸ್ತಾನವನ್ನು ಬಾಧಿಸುತ್ತಿರುವ ಮುಖ್ಯ ವಿಷಯವಲ್ಲ ಎಂದು ಅಮೆರಿಕದ ವಿದೇಶಾಂಗ ಸಹಾಯಕ ಕಾರ್ಯದರ್ಶಿ ಬೌಚರ್ ಹೇಳಿಕೆಯನ್ನು ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ತೀವ್ರವಾಗಿ ಖಂಡಿಸಿದ್ದಾರೆ. ಪರ್ವೇಜ್ ಮುಷರಫ್ ಅವರನ್ನು ನಿಭಾಯಿಸುವ ಕುರಿತು ತಮಗೆ ವಿದೇಶಿ ಹಿತವಚನ ಅಗತ್ಯವಿಲ್ಲ ಎಂದೂ ಅವರು ನುಡಿದಿದ್ದಾರೆ.

"ಪಾಕಿಸ್ತಾನ ತನ್ನದೇ ಸ್ವಂತ ನಿರ್ಧಾರ ಕೈಗೊಳ್ಳುತ್ತದೆ. ಅಸಂವಿಧಾನಿಕ ಅಧ್ಯಕ್ಷರ ಬಗ್ಗೆ ಏನುಮಾಡಬೇಕೆನ್ನುವುದು ಪಾಕಿಸ್ತಾನದ ಆಂತರಿಕ ವಿಷಯ. ನಮಗೆ ಯಾವುದೇ ವಿದೇಶಿ ಸಲಹೆ ಬೇಕಾಗಿಲ್ಲ" ಎಂದು ಷರೀಫ್ ಇಸ್ಲಾಮಾಬಾದ್ ವಿಮಾನನಿಲ್ದಾಣದಲ್ಲಿ ವರದಿಗಾರರ ಜತೆ ಮಾತನಾಡುತ್ತಾ ತಿಳಿಸಿದರು.

ಪಾಕಿಸ್ತಾನವು ಮುಷರಫ್ ಭವಿಷ್ಯದ ಬಗ್ಗೆ ನಿರ್ಧರಿಸುವುದಕ್ಕಿಂತ ಭದ್ರತೆ, ಉಗ್ರವಾದ, ಏರುತ್ತಿರುವ ಬೆಲೆಗಳು ಮತ್ತು ವಿದ್ಯುತ್ ಕೊರತೆ ಮುಂತಾದ ಬಗ್ಗೆ ಹೆಚ್ಚು ಗಮನಹರಿಸಬೇಕೆಂದು ಬೌಚರ್ ಬುಧವಾರ ತಿಳಿಸಿದ್ದರು.ಸದ್ಯಕ್ಕೆ ಅಧ್ಯಕ್ಷ ಮುಷರಫ್ ಬಗ್ಗೆ ಕ್ರಮ ಒಂದು ವಿಷಯವಲ್ಲ. ಪಾಕಿಸ್ತಾನ ಎದುರಿಸುತ್ತಿರುವ ಸಮಸ್ಯೆ ಅದಲ್ಲ ಎಂದು ಬೌಚರ್ ಮುಷರಫ್ ಮತ್ತಿತರ ಪಾಕಿಸ್ತಾನಿ ನಾಯಕರನ್ನು ಭೇಟಿ ಮಾಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಿಲಿಟರಿ ಕಾರ್ಯಾಚರಣೆ: ಬೆಟಾನ್‌ಕೋರ್ಟ್ ಬಂಧಮುಕ್ತಿ
ಬುಲ್ಡೋಜರ್ ದಾಳಿಗೆ ಬಾನ್ ಖಂಡನೆ
ಇರಾನ್ ವಿರುದ್ಧ ಇಸ್ರೇಲ್ ದಾಳಿ ಅನಪೇಕ್ಷಿತ: ಪ್ರಣವ್
ಮುಷರಫ್ ಬಗ್ಗೆ ಮೃದು ಧೋರಣೆಗೆ ಅಮೆರಿಕ ಹಿತನುಡಿ
ದಲಿತ, ಅಲ್ಪಸಂಖ್ಯಾತರ ಅಂತಾರಾಷ್ಟ್ರೀಯ ಸಮಾವೇಶ
ಪಾಕ್ ಅಂತಾರಾಷ್ಟ್ರೀಯ ಭಯೋತ್ಪಾದನೆಯ ತಟ್ಟೆ
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. ಸ್ತ್ರೀಯರಿಗೆ ವಸ್ತ್ರಲಾಭ ಸಾಧ್ಯತೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮುಂಗಡಪತ್ರದಲ್ಲಿ ಹಾಲಿಗೆ 2ರೂ. ಸಹಾಯಧನ
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2ರೂ. ಸಹಾಯಧನ....
ದೆಹಲಿಗೆ ತೆರಳಿದ ಜೆಡಿಎಸ್ ನಿಯೋಗ
ಲಾರಿ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ
ಮನರಂಜನೆ
ಚಿತ್ರ ಸುದ್ದಿ - ಅದು ಕಾರಂಜಿಯ ಬಗ್ಗೆ ಮಾತನಾಡಲು ನಿರ್ಮಾಪಕ ಎಂ.ಎನ್. ಸುರೇಶ್ ಕರೆದಿದ್ದ ಪತ್ರಿಕಾಗೋಷ್ಠಿ. ಅಲ್ಲಿ ಅವರು ಒಂದಷ್ಟನ್ನು ಹರವಿಕೊಂಡರು. ತಮ್ಮ ಕನಸಿನ ಕಾರಂಜಿಯನ್ನು ಬಣ್ಣಿಸಿದರು. ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವುದು ನನ್ನ ಉದ್ದೇಶ. ಹಣ ಗಳಿಸುವುದು ಮುಂದಿನ
ಮುಂದೆ ಓದಿ|ಮತ್ತಷ್ಟು...