|
| ಮಿಲಿಟರಿ ಕಾರ್ಯಾಚರಣೆ: ಬೆಟಾನ್‌ಕೋರ್ಟ್ ಬಂಧಮುಕ್ತಿ |
| ಕೊಲಂಬಿಯ, 3 ಜುಲೈ 2008 ( 13:17 IST ) | |
ಫ್ರೆಂಚ್-ಕೊಲಂಬಿಯ ರಾಜಕಾರಣಿ ಇನ್‌ಗ್ರಿಡ್ ಬೆಟಾನ್‌ಕೋರ್ಟ್ ಮತ್ತು ಮೂವರು ಅಮೆರಿಕ ಪೌರರನ್ನು ದಿಟ್ಟ ಅರಣ್ಯ ಕಾರ್ಯಾಚರಣೆ ಮೂಲಕ ಮಾರ್ಕ್ಸ್‌ವಾದಿ ಫಾರ್ಕ್(ಎಫ್‌ಎಆರ್‌ಸಿ) ಬಂಡುಕೋರರ ಬಂಧನದಿಂದ ಪಾರುಮಾಡಲಾಗಿದೆ.
ಬೆಟಾನ್‌ಕೋರ್ಟ್ ಮತ್ತು ಮೂವರು ಅಮೆರಿಕನ್ನರನ್ನು 2002ರಲ್ಲಿ ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಹೆಲಿಕಾಪ್ಟರ್ ಬೆಂಬಲಿತ ಮಿಲಿಟರಿ ಕಾರ್ಯಾಚರಣೆ ಮೂಲಕ 11 ಕೊಲಂಬಿಯ ಸೈನಿಕರ ಸಮೇತ ಬೆಟಾನ್‌ಕೋರ್ಟ್ ಮತ್ತು ಮೂವರು ಅಮೆರಿಕನ್ನರನ್ನು ಬಂಧಮುಕ್ತಿಗೊಳಿಸಲಾಗಿದೆ ಎಂದು ರಕ್ಷಣಾ ಸಚಿವ ಜಾನ್ ಮ್ಯಾನ್ಯುಲ್ ಸಾಂಟೋಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು."ಫಾರ್ಕ್ ವಶದಲ್ಲಿದ್ದ 15 ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಪಾರುಮಾಡಲಾಗಿದೆ.
ಒತ್ತೆಯಾಳುಗಳಲ್ಲಿ ಬೆಟಾನ್‌ಕೋರ್ಟ್, ಮೂವರು ಅಮೆರಿಕ ಪೌರರು ಮತ್ತು ಸಶಸ್ತ್ರ ಪಡೆಗಳ 11 ಸದಸ್ಯರು ಸೇರಿದ್ದಾರೆ" ಎಂದು ಸಾಂಟೋಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 6 ವರ್ಷಗಳ ಕೆಳಗೆ ಕೊಲಂಬಿಯ ಅಧ್ಯಕ್ಷ ಸ್ಥಾನದ ಪ್ರಚಾರದಲ್ಲಿ ನಿರತವಾಗಿದ್ದ ಬೆಟಾನ್‌ಕೋರ್ಟ್ ಅವರು ಉಗ್ರರ ಕೈವಶವಾಗಿದ್ದರು. ಇತ್ತೀಚಿನ ವಿಡಿಯೋದಲ್ಲಿ ಅವರು ತೀರಾ ದುರ್ಬಲ ಮತ್ತು ಅಶಕ್ತರಾಗಿ ಕಂಡಿದ್ದರಿಂದ ಅವರ ಆರೋಗ್ಯದ ಬಗ್ಗೆ ಶಂಕೆ ಆವರಿಸಿತ್ತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. ಸ್ತ್ರೀಯರಿಗೆ ವಸ್ತ್ರಲಾಭ ಸಾಧ್ಯತೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಅದು ಕಾರಂಜಿಯ ಬಗ್ಗೆ ಮಾತನಾಡಲು ನಿರ್ಮಾಪಕ ಎಂ.ಎನ್. ಸುರೇಶ್ ಕರೆದಿದ್ದ ಪತ್ರಿಕಾಗೋಷ್ಠಿ. ಅಲ್ಲಿ ಅವರು ಒಂದಷ್ಟನ್ನು ಹರವಿಕೊಂಡರು. ತಮ್ಮ ಕನಸಿನ ಕಾರಂಜಿಯನ್ನು ಬಣ್ಣಿಸಿದರು. ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವುದು ನನ್ನ ಉದ್ದೇಶ. ಹಣ ಗಳಿಸುವುದು ಮುಂದಿನ |
| |
|
|
|
|
|
|
|