|
| ದಲಿತ, ಅಲ್ಪಸಂಖ್ಯಾತರ ಅಂತಾರಾಷ್ಟ್ರೀಯ ಸಮಾವೇಶ |
| ನ್ಯೂಯಾರ್ಕ್, 2 ಜುಲೈ 2008 ( 17:35 IST ) | |
ಕಡೆಗಣಿಸಲ್ಪಟ್ಟ ವರ್ಗಗಳು ಎದುರಿಸುವ ಸಮಸ್ಯೆಗಳನ್ನು ಕುರಿತು ಚರ್ಚಿಸಲು ನ್ಯೂಯಾರ್ಕ್‌ನಲ್ಲಿ ದಲಿತರು, ಮುಸ್ಲಿಮರು ಮತ್ತು ಇತರೆ ಅಲ್ಪಸಂಖ್ಯಾತರ ವರ್ಗದ ಸುಮಾರು 100 ಮುಖ್ಯ ಪ್ರತಿನಿಧಿಗಳು ಸೇರಿದ್ದಾರೆ. ತಮ್ಮ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮತ್ತು ರಾಜಕೀಯ ಸಬಲೀಕರಣ ಕುರಿತು ಜಂಟಿ ಕಾರ್ಯತಂತ್ರ ರೂಪಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆ.
ಭಾರತೀಯ ದಲಿತರು ಮತ್ತು ಅಲ್ಪಸಂಖ್ಯಾತರ ಅಂತಾರಾಷ್ಟ್ರೀಯ ಸಮಾವೇಶದ ಅಡಿಯಲ್ಲಿ ಈ ಪ್ರತಿನಿಧಿಗಳು ಸೇರುತ್ತಿದ್ದು, ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ದಲಿತರು ಮತ್ತು ಅಲ್ಪಸಂಖ್ಯಾತರ ಎರಡು ಸಮುದಾಯಗಳ ನಡುವೆ ಮೈತ್ರಿ ಕುದುರಿಸಲು ಪಾಸ್ವಾನ್ ಅತ್ಯಂತ ಶ್ರಮವಹಿಸುತ್ತಿದ್ದು, ಭಾರತೀಯ ಮೂಲದ ಅಮೆರಿಕದ ಮುಸ್ಲಿಮರ ಒಕ್ಕೂಟದ ಪ್ರತಿನಿಧಿಗಳನ್ನು ಅವರು ಭೇಟಿ ಮಾಡಿದರು.
ಕಡೆಗಣಿಸಲ್ಪಟ್ಟ ವರ್ಗಗಳು ತಮ್ಮ ಸಮಸ್ಯೆಗಳಿಗೆ ರಾಜಕೀಯ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಹೇಳಿದ ಅವರು, 60 ವರ್ಷಗಳ ಬಳಿಕವೂ ಕಡೆಗಣಿಸಲ್ಪಟ್ಟ ವರ್ಗಗಳು ಆರ್ಥಿಕವಾಗಿ ಹಿಂದುಳಿದಿವೆ ಎಂದು ನುಡಿದರು. ದಮನಿತ ವರ್ಗಗಳಿಗೆ ಶೈಕ್ಷಣಿಕ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯ ಒದಗಿಸಲು ಮುಖ್ಯವಾಗಿ ಗಮನಹರಿಸಲಾಗುವುದು ಎಂದು ಅವರು ನುಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟತೆಯನ್ನೇ ಮೆರೆದುಕೊಂಡು ಬಂದ ಜನ್ಮ ಚಿತ್ರ ಈಗ ಮತ್ತೆ ಕೆಲವು ವಿಶಿಷ್ಟತೆಗಳನ್ನು ಮಾಡಿದೆ. ಆದರೆ ಇದು ಮಾತ್ರ ಜನರಿಗಾಗಿಯಲ್ಲ. ನಿರ್ದೇಶಕರಿಗಾಗಿ. ಈಗ ಚಿತ್ರದ ನಾಯಕಿಯನ್ನು ಬದಲಿಸಲಾಗಿದೆ. ಚಿತ್ರದ ಆಹ್ವಾನ ಪತ್ರಿಕೆಯನ್ನು ವಿಶಿಷ್ಟವಾಗಿ ಮುದ್ರಿಸಿ ಎಲ್ಲರ ಗಮನವನ್ನು ನಿರ್ದೇಶಕರು ಸೆಳೆದಿದ್ದರು. |
| |
|
|
|
|
|
|
|