ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಪಾಕ್ ಅಂತಾರಾಷ್ಟ್ರೀಯ ಭಯೋತ್ಪಾದನೆಯ ತಟ್ಟೆ
ರೋಮ್, ಬುಧವಾರ, 2 ಜುಲೈ 2008   ( 17:00 IST )
ಪಾಕಿಸ್ತಾನವು ಅಂತಾರಾಷ್ಟ್ರೀಯ ಭಯೋತ್ಪಾದನೆಯ ತಟ್ಟೆಯಾಗಿದೆ ಎಂದು ಆಡಳಿತಾರೂಢ ಪಿಪಿಪಿ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ತಿಳಿಸಿದ್ದಾರೆ. ತನ್ನ ಅಲ್ಪಾವಧಿಯ ರಾಜಕೀಯ ಹಿತಕ್ಕಾಗಿ ಪಾಕ್ ಜನತೆಯ ಅಭಿವೃದ್ಧಿಗೆ ಬಂಡವಾಳ ಹೂಡಿಕೆ ಬದಲಿಗೆ ಮಿಲಿಟರಿಯಲ್ಲಿ ಹೆಚ್ಚು ಬಂಡವಾಳ ಹೂಡುವ ಮ‌ೂಲಕ ನಮ್ಮ ರಾಷ್ಟ್ರವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ದುರ್ಬಳಕೆ ಮಾಡಿಕೊಂಡವು ಎಂದು ಅವರು ಆರೋಪಿಸಿದರು.

ಇದು ವಿಫಲವಾದ ಅಂತಾರಾಷ್ಟ್ರೀಯ ರಾಜಕೀಯದ ಉತ್ಪನ್ನವಾಗಿದ್ದು, ನಮ್ಮ ಸೃಷ್ಟಿಯಲ್ಲ ಎಂದು ಜರ್ದಾರಿ ಹೇಳಿದರು. ಗ್ರೀಸ್‌ನ ಅಥೆನ್ಸ್‌ನಲ್ಲಿ ಅಂತಾರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪಾಕಿಸ್ತಾನದಲ್ಲಿ ಬೇರುಬಿಟ್ಟಿರುವ ಭಯೋತ್ಪಾದನೆಯನ್ನು ಮಟ್ಟಹಾಕುವುದಾಗ ಅವರು ಪ್ರತಿಜ್ಞೆ ಮಾಡಿ,, ರಾಷ್ಟ್ರೀಯ ಪಠ್ಯಕ್ರಮ ಅನುಸರಿಸದ ಮದ್ರಸಾಗಳನ್ನು ಮುಚ್ಚುವುದಾಗಿ ನುಡಿದರು.

ವಿಶ್ವಸಮುದಾಯ ತನ್ನ ಅಲ್ಪಕಾಲೀನ ರಾಜಕೀಯ ಉದ್ದೇಶಗಳಿಗಾಗಿ ಪಾಕಿಸ್ತಾನವನ್ನು ಬಳಸಿಕೊಂಡಿದ್ದಕ್ಕಾಗಿ ಭಾರೀ ಬೆಲೆ ತೆತ್ತಿದೆ ಎಂದು ಹೇಳಿದ ಜರ್ದಾರಿ, ಭಯೋತ್ಪಾದನೆ ನಿರ್ಮ‌ೂಲನೆಗೆ, ಪಾಕ್ ಆರ್ಥಿಕತೆ ಮತ್ತು ಮ‌ೂಲಸೌಲಭ್ಯ ಮರುನಿರ್ಮಾಣದ ಸಲುವಾಗಿ ಅಂತಾರಾಷ್ಟ್ರೀಯ ಪ್ರಯತ್ನಕ್ಕೆ ಕರೆ ನೀಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಏಷ್ಯಾ ಮುಖಂಡರನ್ನು ಭೇಟಿ ಮಾಡಲಿರುವ ಬುಷ್
ಲಾಡೆನ್ ಮರಣಶಯ್ಯೆಯಲ್ಲಿ: ಸಿಐಎ ಹೇಳಿಕೆ
ಮಂಗೋಲಿಯದಲ್ಲಿ ಹಿಂಸೆ, ತುರ್ತುಪರಿಸ್ಥಿತಿ ಘೋಷಣೆ
ಚೀನಾದಲ್ಲಿ ಯಾಂಗ್ಝೆ ನದಿಗೆ ಕೇಬಲ್ ಸೇತುವೆ ಸಂಪರ್ಕ
ಆರ್ಕ್‌ಟಿಕ್‌ನಲ್ಲಿ 100 ಶತಕೋಟಿ ಬ್ಯಾರೆಲ್ ತೈಲನಿಕ್ಷೇಪ
ಚೀನಾದಲ್ಲಿ ದಲೈಲಾಮಾ ಪ್ರತಿನಿಧಿಗಳಿಂದ ಮಾತುಕತೆ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಇಂದಿನಿಂದ ರಾಜ್ಯದಲ್ಲೂ ಲಾರಿ ಮುಷ್ಕರ
ಕೇಂದ್ರ ಸರ್ಕಾರದ ತೆರಿಗೆ ನೀತಿ ವಿರೋಧಿಸಿ ಮಂಗಳವಾರ ಮಧ್ಯರಾತ್ರಿಯಿಂದ ದೇಶಾದ್ಯಂತ ಲಾರಿ....
ಸಿರಿಯಾಕ್ ಜೋಸೆಫ್‌ಗೆ ಬಿಳ್ಕೊಡುಗೆ
ಆಸ್ತಿ ವಿವರ ಸಲ್ಲಿಸದ 40 ಶಾಸಕರಿಗೆ ನೋಟಿಸ್
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟತೆಯನ್ನೇ ಮೆರೆದುಕೊಂಡು ಬಂದ ಜನ್ಮ ಚಿತ್ರ ಈಗ ಮತ್ತೆ ಕೆಲವು ವಿಶಿಷ್ಟತೆಗಳನ್ನು ಮಾಡಿದೆ. ಆದರೆ ಇದು ಮಾತ್ರ ಜನರಿಗಾಗಿಯಲ್ಲ. ನಿರ್ದೇಶಕರಿಗಾಗಿ. ಈಗ ಚಿತ್ರದ ನಾಯಕಿಯನ್ನು ಬದಲಿಸಲಾಗಿದೆ. ಚಿತ್ರದ ಆಹ್ವಾನ ಪತ್ರಿಕೆಯನ್ನು ವಿಶಿಷ್ಟವಾಗಿ ಮುದ್ರಿಸಿ ಎಲ್ಲರ ಗಮನವನ್ನು ನಿರ್ದೇಶಕರು ಸೆಳೆದಿದ್ದರು.
ಮುಂದೆ ಓದಿ|ಮತ್ತಷ್ಟು...