ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಏಷ್ಯಾ ಮುಖಂಡರನ್ನು ಭೇಟಿ ಮಾಡಲಿರುವ ಬುಷ್
ವಾಷಿಂಗ್ಟನ್, ಬುಧವಾರ, 2 ಜುಲೈ 2008   ( 16:35 IST )
ap
ಮುಂದಿನ ವಾರ ಜಿ8 ಶೃಂಗಸಭೆಯ ನೇಪಥ್ಯದಲ್ಲಿ ಅಮೆರಿಕದ ಅಧ್ಯಕ್ಷ ಬುಷ್ ಅವರು ಜಪಾನ್, ಚೀನಾ ಮತ್ತು ದಕ್ಷಿಣ ಕೊರಿಯದ ನಾಯಕರನ್ನು ಭೇಟಿಮಾಡಿ, ಉತ್ತರಕೊರಿಯ ತನ್ನ ಅಣ್ವಸ್ತ್ರ ಕಾರ್ಯಕ್ರಮ ಕೈಬಿಡುವ ಯತ್ನಗಳನ್ನು ಕುರಿತು ಚರ್ಚಿಸಲಿದ್ದಾರೆ. ಜಪಾನ್‌ಗೆ ತಮ್ಮ ನಾಲ್ಕನೇ ಭೇಟಿ ನೀಡಿರುವ ಬುಷ್, ಜಪಾನ್ ಪ್ರಧಾನಮಂತ್ರಿ ಯಾಸುವೊ ಫುಕುಡಾ ಅವರನ್ನು ಭೇಟಿ ಮಾಡಲಿದ್ದಾರೆ.

ಉತ್ತರಕೊರಿಯ ಅಣ್ವಸ್ತ್ರ ಕಾರ್ಯಕ್ರಮ ಕೈಬಿಡುವುದರ ಖಾತರಿಗೆ 6 ಹಂತಗಳ ಮಾತುಕತೆಗೆ ಮುನ್ನಡೆಯುವುದು ಹೇಗೆಂದು ಅವರು ಚರ್ಚಿಸಲಿದ್ದಾರೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಏಷ್ಯಾ ವ್ಯವಹಾರಗಳ ಹಿರಿಯ ನಿರ್ದೇಶಕ ಡೆನ್ನಿಸ್ ವೈಲ್ಡರ್ ತಿಳಿಸಿದರು.ಉತ್ತರಕೊರಿಯ ಕಳೆದ ವಾರ ತನ್ನ ಪರಮಾಣು ಚಟುವಟಿಕೆಗಳ ಪಟ್ಟಿಯನ್ನು ಹಸ್ತಾಂತರಿಸಿದ್ದು, ಭಯೋತ್ಪಾದನೆ ಪ್ರಾಯೋಜಿತ ಪಟ್ಟಿಯಿಂದ ಉತ್ತರಕೊರಿಯವನ್ನು ತೆಗೆಯುವ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಅಮೆರಿಕ ತಿಳಿಸಿದೆ.

ನೆರವಿಗಾಗಿ ನಿಶ್ಯಸ್ತ್ರೀಕರಣ ಒಪ್ಪಂದದ ಅನ್ವಯ ಆ ಘೋಷಣೆ ಅಗತ್ಯವಾಗಿದೆ. ಆದರೆ ಈ ದಾಖಲೆಯು ಶಸ್ತ್ರಾಸ್ತ್ರ ದರ್ಜೆ ಪ್ಲುಟೋನಿಯಂ ಉತ್ಪಾದಿಸುವ ರೂಪುರೇಷೆ ಹೊಂದಿದ್ದು, ಉತ್ತರ ಕೊರಿಯದ ಯುರೇನಿಯಂ ಸಂಸ್ಕರಣೆ ಮತ್ತು ಪ್ರಸರಣದ ಬಗ್ಗೆ ಪ್ರಶ್ನೆಗಳನ್ನು ಹಾಗೆಯೇ ಉಳಿಸುತ್ತದೆಂದು ತಜ್ಞರು ವಾದಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಲಾಡೆನ್ ಮರಣಶಯ್ಯೆಯಲ್ಲಿ: ಸಿಐಎ ಹೇಳಿಕೆ
ಮಂಗೋಲಿಯದಲ್ಲಿ ಹಿಂಸೆ, ತುರ್ತುಪರಿಸ್ಥಿತಿ ಘೋಷಣೆ
ಚೀನಾದಲ್ಲಿ ಯಾಂಗ್ಝೆ ನದಿಗೆ ಕೇಬಲ್ ಸೇತುವೆ ಸಂಪರ್ಕ
ಆರ್ಕ್‌ಟಿಕ್‌ನಲ್ಲಿ 100 ಶತಕೋಟಿ ಬ್ಯಾರೆಲ್ ತೈಲನಿಕ್ಷೇಪ
ಚೀನಾದಲ್ಲಿ ದಲೈಲಾಮಾ ಪ್ರತಿನಿಧಿಗಳಿಂದ ಮಾತುಕತೆ
ನೇಪಾಳದ ಮಾಜಿ ರಾಜಕುಮಾರ ಸಿಂಗಪುರಕ್ಕೆ?
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಇಂದಿನಿಂದ ರಾಜ್ಯದಲ್ಲೂ ಲಾರಿ ಮುಷ್ಕರ
ಕೇಂದ್ರ ಸರ್ಕಾರದ ತೆರಿಗೆ ನೀತಿ ವಿರೋಧಿಸಿ ಮಂಗಳವಾರ ಮಧ್ಯರಾತ್ರಿಯಿಂದ ದೇಶಾದ್ಯಂತ ಲಾರಿ....
ಸಿರಿಯಾಕ್ ಜೋಸೆಫ್‌ಗೆ ಬಿಳ್ಕೊಡುಗೆ
ಆಸ್ತಿ ವಿವರ ಸಲ್ಲಿಸದ 40 ಶಾಸಕರಿಗೆ ನೋಟಿಸ್
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟತೆಯನ್ನೇ ಮೆರೆದುಕೊಂಡು ಬಂದ ಜನ್ಮ ಚಿತ್ರ ಈಗ ಮತ್ತೆ ಕೆಲವು ವಿಶಿಷ್ಟತೆಗಳನ್ನು ಮಾಡಿದೆ. ಆದರೆ ಇದು ಮಾತ್ರ ಜನರಿಗಾಗಿಯಲ್ಲ. ನಿರ್ದೇಶಕರಿಗಾಗಿ. ಈಗ ಚಿತ್ರದ ನಾಯಕಿಯನ್ನು ಬದಲಿಸಲಾಗಿದೆ. ಚಿತ್ರದ ಆಹ್ವಾನ ಪತ್ರಿಕೆಯನ್ನು ವಿಶಿಷ್ಟವಾಗಿ ಮುದ್ರಿಸಿ ಎಲ್ಲರ ಗಮನವನ್ನು ನಿರ್ದೇಶಕರು ಸೆಳೆದಿದ್ದರು.
ಮುಂದೆ ಓದಿ|ಮತ್ತಷ್ಟು...