|
| ಮಂಗೋಲಿಯದಲ್ಲಿ ಹಿಂಸೆ, ತುರ್ತುಪರಿಸ್ಥಿತಿ ಘೋಷಣೆ |
| ಉಲಾನ್‌ಬಾಟಾರ್, ಬುಧವಾರ, 2 ಜುಲೈ 2008 ( 13:14 IST ) | |
ಕಳೆದ ವಾರಾಂತ್ಯದಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಅಕ್ರಮ ನಡೆದಿದೆಯೆಂದು ಆರೋಪಿಸಿ ಪೊಲೀಸರ ಜತೆ ಪ್ರತಿಭಟನೆಕಾರರು ಘರ್ಷಣೆಗೆ ಇಳಿದು, ಆಡಳಿತಾರೂಢ ರಾಜಕೀಯ ಪಕ್ಷದ ಮುಖ್ಯಕಚೇರಿಗೆ ಮುತ್ತಿಗೆ ಹಾಕಿದ್ದರಿಂದ ಹಿಂಸಾಚಾರ ಭುಗಿಲೆದ್ದಿದ್ದು, ಮಂಗೋಲಿಯ ಅಧ್ಯಕ್ಷರು ನಾಲ್ಕು ದಿನಗಳ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಖಾಸಗಿ ಮತ್ತು ಸರ್ಕಾರಿ ಆಸ್ತಿಗಳನ್ನು ಲೂಟಿ ಮಾಡುತ್ತಿರುವ ಕ್ರಿಮಿನಲ್‌ಗಳ ವಿರುದ್ಧ ಕಾರ್ಯಾಚರಣೆಗೆ ಪೊಲೀಸರು ಅಗತ್ಯ ಪಡೆ ಬಳಸುತ್ತದೆ ಎಂದು ನ್ಯಾಯ ಮತ್ತು ಗೃಹವ್ಯವಹಾರಗಳ ಸಚಿವ ತಿಳಿಸಿದರು. ತುರ್ತುಪರಿಸ್ಥಿತಿ ಘೋಷಣೆಯಾದ ಬಳಿಕ ಗುಂಪು ಚದುರಿದ್ದರೂ, ಕೆಲವು ಪ್ರತಿಭಟನೆಕಾರರು ಕಲಾ ಗ್ಯಾಲರಿಯ ವರ್ಣಚಿತ್ರಗಳನ್ನು ಮತ್ತು ಸರ್ಕಾರಿ ಕಚೇರಿಗಳಿಂದ ಟೆಲಿವಿಷನ್ ಲೂಟಿ ಮಾಡುವುದನ್ನು ಮುಂದುವರಿಸಿದೆ.
ಮಂಗೋಲಿಯ ಜನತೆ ಪ್ರಜಾಪ್ರಭುತ್ವಕ್ಕಾಗಿ ಮತ ಹಾಕಿದ್ದಾರೆಯೇ ಹೊರತು ಪೀಪಲ್ಸ್ ರಿವೋಲ್ಯೂಷನರಿ ಪಕ್ಷಕ್ಕಲ್ಲ(ಎಂಪಿಆರ್‌ಪಿ) ಎಂದು ನಾಗರಿಕ ಆಂದೋಳನ ಪಕ್ಷದ ಉಪಾಧ್ಯಕ್ಷ ತಿಳಿಸಿದ್ದಾರೆ. ಆರಂಭಿಕ ಫಲಿತಾಂಶದ ಪ್ರಕಾರ, ಭಾನುವಾರ ನಡೆದ ಮತದಾನದಲ್ಲಿ ಎಂಪಿಆರ್‌ಪಿ 46 ಸೀಟು ಗೆದ್ದಿದೆ. ಮಂಗೋಲಿಯ ಡೆಮೋಕ್ರಾಟಿಕ್ ಪಕ್ಷ 26 ಸೀಟುಗಳನ್ನು ಗೆದ್ದಿದೆ.
ಪ್ರತಿಭಟನೆಕಾರರು ಚುನಾವಣೆ ಆಯೋಗದ ಕಚೇರಿಗಳಿಗೆ ಧಾವಿಸಿ, ಮತದಾನದಲ್ಲಿ ತೀವ್ರ ಅಕ್ರಮಗಳು ಮತ್ತು ವಂಚನೆ ನಡೆದಿರುವುದರಿಂದ ಅಧಿಕಾರಿಗಳ ರಾಜೀನಾಮೆಗೆ ಆಗ್ರಹಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟತೆಯನ್ನೇ ಮೆರೆದುಕೊಂಡು ಬಂದ ಜನ್ಮ ಚಿತ್ರ ಈಗ ಮತ್ತೆ ಕೆಲವು ವಿಶಿಷ್ಟತೆಗಳನ್ನು ಮಾಡಿದೆ. ಆದರೆ ಇದು ಮಾತ್ರ ಜನರಿಗಾಗಿಯಲ್ಲ. ನಿರ್ದೇಶಕರಿಗಾಗಿ. ಈಗ ಚಿತ್ರದ ನಾಯಕಿಯನ್ನು ಬದಲಿಸಲಾಗಿದೆ. ಚಿತ್ರದ ಆಹ್ವಾನ ಪತ್ರಿಕೆಯನ್ನು ವಿಶಿಷ್ಟವಾಗಿ ಮುದ್ರಿಸಿ ಎಲ್ಲರ ಗಮನವನ್ನು ನಿರ್ದೇಶಕರು ಸೆಳೆದಿದ್ದರು. |
| |
|
|
|
|
|
|
|