ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಚೀನಾದಲ್ಲಿ ಯಾಂಗ್ಝೆ ನದಿಗೆ ಕೇಬಲ್ ಸೇತುವೆ ಸಂಪರ್ಕ
ಶಾಂಘಾಯ್, ಮಂಗಳವಾರ, 1 ಜುಲೈ 2008   ( 14:12 IST )
ವಿಶ್ವದ ಅತೀ ಉದ್ದದ ಕೇಬಲ್ ಆಧಾರಿತ ಸೇತುವೆ ಯಾಂಗ್ಝೆ ನದಿಯ ಎರಡು ದಡಗಳಿಗೆ ಸಂಪರ್ಕ ಕಲ್ಪಿಸಿದ್ದು, ಪೂರ್ವ ಚೀನಾದಲ್ಲಿ ಅಧಿಕೃತ ಉದ್ಘಾಟನೆಯಾಗಿದೆ ಎಂದು ರಾಜ್ಯ ಮಾಧ್ಯಮ ಮಂಗಳವಾರ ತಿಳಿಸಿದೆ. ಚೀನಾದ ಅತೀ ಉದ್ದದ ಜಲಪ್ರದೇಶದಲ್ಲಿ 1088 ಮೀಟರ್(3570 ಅಡಿ)ಸೇತುವೆ ಸುಜೊ ಮತ್ತು ನಾಂಟಾಂಗ್ ನಗರಗಳಿಗೆ ಸಂಪರ್ಕ ಕಲ್ಪಿಸಿದ್ದು, ಒಂದು ತಿಂಗಳಾವಧಿಯ ತಾಲೀಮಿನ ಬಳಿಕ ಸೋಮವಾರ ಅಧಿಕೃತವಾಗಿ ಉದ್ಘಾಟನೆಯಾಯಿತು ಎಂದು ಶಾಂಘಾಯ್ ದಿನಪತ್ರಿಕೆ ವರದಿ ಮಾಡಿದೆ.

6 ಲೇನ್ ಸೇತುವೆ ಪ್ರದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿದ್ದು, ಶಾಂಘಾಯ್ ಮತ್ತು ನಾಂಟಾಂಗ್ ನಡುವೆ ಪ್ರಯಾಣದ ಅವಧಿಯನ್ನು ಮುಂಚಿನ ನಾಲ್ಕು ಗಂಟೆಗಳಿಂದ ಒಂದು ಗಂಟೆಗೆ ಕಡಿತ ಮಾಡಲಿದೆ ಎಂದು ವರದಿ ತಿಳಿಸಿದೆ. ತಾಲೀಮಿನ ವೇಳೆಯಲ್ಲಿ ಸುಮಾರು 30,000 ವಾಹನಗಳು ಸೇತುವೆಯನ್ನು ಹಾದುಹೋದವು ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

1.15 ಶತಕೋಟಿ ಡಾಲರ್ ವೆಚ್ಚದ ಸೇತುವೆ ಜಪಾನಿನ 890 ಮೀಟರ್ ಟಾಟಾರಾ ಸೇತುವೆಗಿಂತ ಉದ್ದವಿದ್ದು, ಚೀನಾದ ಆಧುನಿಕ ತಂತ್ರಜ್ಞಾನದ ಹಿರಿಮೆ ಎಂದು ಯೋಜನೆಯ ಮುಖ್ಯ ಇಂಜಿನಿಯರ್ ವು ಶೌಚಾಂಗ್ ತಿಳಿಸಿದರು.ವರ್ಷಗಳಲ್ಲಿ ಚೀನಾದ ಸೇತುವೆ ನಿರ್ಮಾಣದಲ್ಲಿ ವೈಜ್ಞಾನಿಕ ಸಾಧನೆಯ ಉತ್ತಮ ಪ್ರದರ್ಶನ ಎಂದು ಎಂದು ವು ಹೇಳಿದ್ದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.ಸೇತುವೆಗೆ 300 ಮೀಟರ್ ಎತ್ತರದ ಉಕ್ಕು ಮತ್ತು ಕಾಂಕ್ರೀಟ್ ಗೋಪುರಗಳು ಆಧಾರಸ್ತಂಭವಾಗಿ ನಿಂತಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆರ್ಕ್‌ಟಿಕ್‌ನಲ್ಲಿ 100 ಶತಕೋಟಿ ಬ್ಯಾರೆಲ್ ತೈಲ
ಚೀನಾದಲ್ಲಿ ದಲೈಲಾಮಾ ಪ್ರತಿನಿಧಿಗಳಿಂದ ಮಾತುಕತೆ
ನೇಪಾಳದ ಮಾಜಿ ರಾಜಕುಮಾರ ಸಿಂಗಪುರಕ್ಕೆ?
ಇರಾನ್ ಮೇಲೆ ಇಸ್ರೇಲ್ ದಾಳಿ: ಪೆಂಟಗನ್ ಶಂಕೆ
ಅಫ್ಘಾನಿಸ್ತಾನದಲ್ಲಿ 33 ತಾಲಿಬಾನಿಗಳ ಹತ್ಯೆ
ಬಾಂಗ್ಲಾ: ಚುನಾವಣೆ ಬಹಿಷ್ಕಾರಕ್ಕೆ ಜಿಯಾ ಮೈತ್ರಿ ನಿರ್ಧಾರ
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರೈತರಿಗೆ ಉಚಿತ ವಿದ್ಯುತ್ ಅಸಾಧ್ಯ: ಮುಖ್ಯಮಂತ್ರಿ
ರಾಜ್ಯದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡುತ್ತೇವೆ....
ಒತ್ತುವರಿದಾರರ ವಿರುದ್ಧ ಕ್ರಮ: ಕರುಣಾಕರ ರೆಡ್ಡಿ
ಕೈಕಟ್ಟಿ ಕೂರುವುದಿಲ್ಲ: ಈಶ್ವರಪ್ಪ ಪುನರುಚ್ಚಾರ
ಮನರಂಜನೆ
ಚಿತ್ರ ಸುದ್ದಿ - ಕಬಡ್ಡಿ ಈಗ ವಿವಾದದಲ್ಲಿದೆ. ಅದು ಹೊರಗಿನವರ ನಡುವೆ ವಿವಾದವಲ್ಲ. ಸ್ವತ: ಚಿತ್ರದ ನಿರ್ದೇಶಕ ನರೇಂದ್ರ ಬಾಬು ಹಾಗೂ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕಿಶೋರ್ ನಡುವೆ. ಇತ್ತೀಚೆಗೆ ಕಬ್ಬಡ್ಡಿ ಚಿತ್ರತಂಡ ಕರೆದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರಬಾಬು ನೇರವಾಗಿ ಕಿಶೋರ್‌ರನ್ನು ಟೀಕಿಸಿದರು.
ಮುಂದೆ ಓದಿ|ಮತ್ತಷ್ಟು...