|
| ಚೀನಾದಲ್ಲಿ ದಲೈಲಾಮಾ ಪ್ರತಿನಿಧಿಗಳಿಂದ ಮಾತುಕತೆ |
| ಬೀಜಿಂಗ್, ಮಂಗಳವಾರ, 1 ಜುಲೈ 2008 ( 13:19 IST ) | |
ಚೀನಾ ಮತ್ತು ದಲೈಲಾಮಾ ಪ್ರತಿನಿಧಿಗಳು ಎರಡು ತಿಂಗಳ ಹಿಂದೆ ನಡೆಸಿದ ಅಪೂರ್ಣ ಮಾತುಕತೆಗಳ ನಂತರ ಜಟಿಲವಾದ ಟಿಬೆಟ್ ವಿಷಯದ ಬಗ್ಗೆ ಮಂಗಳವಾರ ಪುನಃ ಮಾತುಕತೆ ನಡೆಸಲಿವೆ.
ಕಳೆದ ಮಾರ್ಚ್‌ನಲ್ಲಿ ಟಿಬೆಟ್ ಪ್ರತಿಭಟನೆಕಾರರ ಮೇಲೆ ವ್ಯಾಪಕ ದಾಳಿಯ ಬಳಿಕ ಮೇ 4ರಂದು ನಡೆದ ಸಂಧಾನ ಮಾತುಕತೆಯಲ್ಲಿ ಭಾಗವಹಿಸಿದ್ದ ಟಿಬೆಟ್ ಧರ್ಮಗುರುವಿನ ಇಬ್ಬರು ಪ್ರತಿನಿಧಿಗಳಾದ ಲೋದಿ ಗ್ಯಾಲ್ಟ್‌ಸೆನ್ ಗ್ಯಾರಿ ಮತ್ತು ಕೆಲ್ಸಾಂಗ್ ಗ್ಯಾಲ್ಟ್‌ಸನ್ ಚೀನಾದ ಅಧಿಕಾರಿಗಳ ಜತೆ ಎರಡು ದಿನಗಳ ಮಾತುಕತೆಗಾಗಿ ಬೀಜಿಂಗನ್ನು ತಲುಪಿದ್ದಾರೆ.
ಇಬ್ಬರು ಪ್ರತಿನಿಧಿಗಳ ಜತೆ ಇನ್ನೂ ಮೂವರು ಜತೆಗೂಡಲಿದ್ದಾರೆ ಎಂದು ದಲೈಲಾಮಾ ಕಾರ್ಯದರ್ಶಿ ತೆಂಜಿನ್ ಟಾಕ್ಲಾ ಧರ್ಮಶಾಲಾದಲ್ಲಿ ಸೋಮವಾರ ತಿಳಿಸಿದರು. ಚೀನಾ ಗಣರಾಜ್ಯದಲ್ಲಿ ಎಲ್ಲಾ ಪೌರರ ಸ್ಥಿರತೆ, ಐಕ್ಯತೆ ಮತ್ತು ಸಾಮರಸ್ಯದ ಹಿತಾಸಕ್ತಿ ದೃಷ್ಟಿಯಿಂದ ದೀರ್ಘಾವಧಿ ನೆನೆಗುದಿಗೆ ಬಿದ್ದ ವಿಷಯ ಇತ್ಯರ್ಥವಾಗುವುದೆಂದು ಆಶಿಸಿರುವ ದಲೈಲಾಮಾ ಮಾತುಕತೆಯನ್ನು ಆಹ್ವಾನಿಸಿದ್ದಾರೆ.
ಟಿಬೆಟಿಯನ್ನರಿಗೆ ಅವರ ತಾಯ್ನಾಡಿನಲ್ಲಿರುವ ಕಷ್ಟದ ಪರಿಸ್ಥಿತಿ ನಿವಾರಣೆಗೆ ಮಾತುಕತೆಯಲ್ಲಿ ಗಣನೀಯ ಪ್ರಗತಿ ಸಾಧನೆಗೆ ಎಲ್ಲ ಪ್ರಯತ್ನ ಮಾಡುವಂತೆ ದಲೈಲಾಮಾ ಪ್ರತಿನಿಧಿಗಳಿಗೆ ಸೂಚಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕಬಡ್ಡಿ ಈಗ ವಿವಾದದಲ್ಲಿದೆ. ಅದು ಹೊರಗಿನವರ ನಡುವೆ ವಿವಾದವಲ್ಲ. ಸ್ವತ: ಚಿತ್ರದ ನಿರ್ದೇಶಕ ನರೇಂದ್ರ ಬಾಬು ಹಾಗೂ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕಿಶೋರ್ ನಡುವೆ. ಇತ್ತೀಚೆಗೆ ಕಬ್ಬಡ್ಡಿ ಚಿತ್ರತಂಡ ಕರೆದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರಬಾಬು ನೇರವಾಗಿ ಕಿಶೋರ್‌ರನ್ನು ಟೀಕಿಸಿದರು. |
| |
|
|
|
|
|
|
|