|
| ನೇಪಾಳದ ಮಾಜಿ ರಾಜಕುಮಾರ ಸಿಂಗಪುರಕ್ಕೆ? |
| ಕಾಠ್ಮಂಡು, ಮಂಗಳವಾರ, 1 ಜುಲೈ 2008 ( 12:17 IST ) | |
ತನ್ನ ತಂದೆ ಮತ್ತು ರಾಷ್ಟ್ರ ನಡೆಸಿಕೊಂಡ ರೀತಿಯಿಂದ ಮನನೊಂದಿರುವ ನೇಪಾಳದ ಮಾಜಿ ರಾಜಕುಮಾರ ಪರಾಸ್ ನೇಪಾಳವನ್ನು ತ್ಯಜಿಸಲು ಯೋಜಿಸಿದ್ದಾರೆಂದು ವರದಿಯೊಂದು ಸೋಮವಾರ ತಿಳಿಸಿದೆ. ಪದಚ್ಯುತ ರಾಜ ಜ್ಞಾನೇಂದ್ರ ಅವರ ಉತ್ತರಾಧಿಕಾರಿ ಪರಾಸ್, ತನಗೆ ಉತ್ತರಾಧಿಕಾರ ಸಿಗದ ಬಗ್ಗೆ ಮನನೊಂದು ಮಂಗಳವಾರ ಸಿಂಗಪುರಕ್ಕೆ ತೆರಳಲು ನಿರ್ಧರಿಸಿದ್ದಾರೆ ಎಂದು ನೇಪಾಳಿ ನಿಯತಕಾಲಿಕ ನಯಾ ಪತ್ರಿಕಾ ತಿಳಿಸಿದೆ.
ಆದಾಗ್ಯೂ ಈ ಬಗ್ಗೆ ಅಧಿಕೃತವಾಗಿ ದೃಢೀಕರಣವಾಗಿಲ್ಲ. ತಿಂಗಳಾರಂಭದಲ್ಲಿ ಜ್ಞಾನೇಂದ್ರ ನಾರಾಯಣಹಿತಿ ಅರಮನೆಯನ್ನು ರಾತ್ರೋರಾತ್ರಿ ತೊರೆದರೆಂದು ರೋಚಕ ವರದಿಯನ್ನು ಈ ನಿಯತಕಾಲಿಕೆ ಪ್ರಕಟಿಸಿದ್ದು, ಬಳಿಕ ಆ ವರದಿ ಸುಳ್ಳೆಂದು ರುಜುವಾತಾಗಿತ್ತು.
ಸೇನೆಯ ನೆರವಿನೊಂದಿಗೆ ಅಧಿಕಾರವನ್ನು ಕೈವಶಮಾಡಿಕೊಳ್ಳುವ ತಂದೆಯ ಪ್ರಯತ್ನ ವಿಫಲವಾದ್ದರಿಂದ ದೊರೆಯಾಗುವ ಕನಸು ನಿಷ್ಫಲವಾದ ಬಳಿಕ, ನೇಪಾಳದ ಸಿಂಹಾಸನದ ಮಾಜಿ ರಾಜಕುಮಾರ ಸಿಲ್ಕ್ ಏರ್ ವಿಮಾನದಲ್ಲಿ ಸೀಟು ಕಾದಿರಿಸಿದ್ದಾರೆಂದು ದಿನಪತ್ರಿಕೆ ತಿಳಿಸಿದೆ. ಆದರೆ ಅವರ ಪತ್ನಿ ಹಿಮಾನಿ ಮತ್ತು ಮೂವರು ಮಕ್ಕಳು ತಕ್ಷಣಕ್ಕೆ ಅವರನ್ನು ಜತೆಗೂಡುವುದಿಲ್ಲ ಎಂದು ವರದಿ ತಿಳಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕಬಡ್ಡಿ ಈಗ ವಿವಾದದಲ್ಲಿದೆ. ಅದು ಹೊರಗಿನವರ ನಡುವೆ ವಿವಾದವಲ್ಲ. ಸ್ವತ: ಚಿತ್ರದ ನಿರ್ದೇಶಕ ನರೇಂದ್ರ ಬಾಬು ಹಾಗೂ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕಿಶೋರ್ ನಡುವೆ. ಇತ್ತೀಚೆಗೆ ಕಬ್ಬಡ್ಡಿ ಚಿತ್ರತಂಡ ಕರೆದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರಬಾಬು ನೇರವಾಗಿ ಕಿಶೋರ್‌ರನ್ನು ಟೀಕಿಸಿದರು. |
| |
|
|
|
|
|
|
|