ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಚೀನಾ ಭೂಕಂಪದಲ್ಲಿ ಸಾವಿರಾರು ಜನರ ಜೀವಂತ ಸಮಾಧಿ
ಬೀಜಿಂಗ್(ಏಜೆನ್ಸಿ), 12 ಮೇ 2008   ( 18:02 IST )
ap
ನೈರುತ್ಯ ಚೀನಾದಲ್ಲಿ ಸೋಮವಾರ ರಿಕ್ಟರ್‌ಮಾಪಕದಲ್ಲಿ 7.8 ತೀವ್ರತೆಯ ಭೀಕರ ಭೂಕಂಪ ಅಪ್ಪಳಿಸಿ, ಸುಮಾರು 5000 ಜನರು ಸತ್ತಿದ್ದಾರೆ ಮತ್ತು 10,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನೂರಾರು ಕಟ್ಟಡಗಳು ಭೂಕಂಪದಿಂದ ನೆಲಕ್ಕುರುಳಿದ್ದು, ಕಟ್ಟಡಗಳ ಅವಶೇಷಗಳಡಿ ಸಿಕ್ಕಿಬಿದ್ದವರನ್ನು ರಕ್ಷಿಸುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ. ಕುಸಿದುಬಿದ್ದ ಕನಿಷ್ಠ 8 ಕಟ್ಟಡಗಳಡಿ ನೂರಾರು ಶಾಲಾಮಕ್ಕಳು ಸಿಕ್ಕಿಬಿದ್ದಿದ್ದು, ನೆರವಿಗಾಗಿ ಮಕ್ಕಳ ಆರ್ತನಾದ ಕರುಣಾಜನಕವಾಗಿವೆ ಎಂದು ಮಾಧ್ಯಮಗಳು ವರದಿಮಾಡಿವೆ.

ಪರ್ವತಮಯ ಸಿಚುಯನ್ ಪ್ರಾಂತ್ಯದ ಬೈಚುವಾನ್ ಕೌಂಟಿಯಲ್ಲಿ ಅಂದಾಜು 3000ದಿಂದ 5000 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಸರ್ಕಾರದ ವರದಿಯನ್ನು ಉದಾಹರಿಸಿ ಕ್ಸಿನುವಾ ಸುದ್ದಿಸಂಸ್ಥೆ ತಿಳಿಸಿದೆ. ಬೈಚುವಾನ್ ಕೌಂಟಿಯ ಶೇ.80ರಷ್ಟು ಕಟ್ಟಡಗಳು ನೆಲಸಮವಾಗಿವೆ ಎಂದು ವರದಿ ತಿಳಿಸಿದೆ.

ತೀವ್ರ ಹಾನಿಪೀಡಿತ ಸಿಚುವಾನ್ ಪ್ರದೇಶದ ಜತೆ ರಕ್ಷಣಾ ತಂಡಗಳು ಮತ್ತು ಅಧಿಕಾರಿಗಳು ಸಂಪರ್ಕವಿರಿಸಿಕೊಂಡಿದ್ದು, ಸತ್ತವರ ಸಂಖ್ಯೆ ಮತ್ತಷ್ಟು ಏರುವ ಸಂಭವವಿದೆ. ಭೂಕಂಪದಿಂದ ಕನಿಷ್ಠ 8 ಶಾಲಾಕಟ್ಟಡಗಳು ನೆಲಸಮವಾಗಿದ್ದು, ನೂರಾರು ಶಾಲಾಮಕ್ಕಳು ಮತ್ತು ಶಿಕ್ಷಕರು ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಮಾಧ್ಯಮ ತಿಳಿಸಿದೆ.

ವೆನ್‌ಚುವನ್ ಕೌಂಟಿಯ ಕೇಂದ್ರಬಿಂದುವಿಂದ 100 ಕಿಮೀ ದೂರದ ಡುಜಿಯಾಂಗಾನ್ ನಗರದಲ್ಲಿ ಸಂಭವಿಸಿದ ಶಾಲಾ ಕಟ್ಟಡದ ಕುಸಿತದ ಸ್ಥಳದಲ್ಲಿ ಆಘಾತಕಾರಿ ವರದಿಗಳು ಕೇಳಿಬಂದಿವೆ.

ಮೂರು ಮಹಡಿಗಳ ಕಟ್ಟಡದ ಅವಶೇಷದಡಿ ಸಿಕ್ಕಿಬಿದ್ದ ಮಕ್ಕಳು ಹೊರಗೆ ಬರಲು ಪ್ರಯತ್ನಿಸುವ ದೃಶ್ಯ ಕರುಣಾಜನಕವಾಗಿತ್ತು. ಇನ್ನುಳಿದವರು ನೆರವಿಗಾಗಿ ಯಾಚಿಸುವ ದೃಶ್ಯ ಹೃದಯವಿದ್ರಾವಕವಾಗಿತ್ತು ಎಂದು ಸುದ್ದಿ ಸಂಸ್ಥೆ ಕ್ಸಿನುವಾ ತಿಳಿಸಿದೆ.

ಕ್ರೇನುಗಳು ಅವಶೇಷಗಳನ್ನು ತೆರವು ಮಾಡಲು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ ಮಕ್ಕಳ ಪೋಷಕರು ಆತಂಕದಿಂದ ವೀಕ್ಷಿಸುತ್ತಿದ್ದರು. ಗ್ರಾಮಸ್ಥರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾದರು, ತಾವು ವೇಗವಾಗಿ ಓಡಿದ್ದರಿಂದ ಕಟ್ಟಡಕುಸಿತದಿಂದ ಪಾರಾಗಿದ್ದಾಗಿ ಇಬ್ಬರು ಬಾಲಕಿಯರು ಹೇಳಿದ್ದಾರೆ.

ಸಿಚುವಾನ್ ರಾಜಧಾನಿ ಚೆಂಗ್ಡುವಿನಲ್ಲಿ ನಿವಾಸಿಗಳು ಗುಂಪು ಗುಂಪಾಗಿ ರಸ್ತೆಗಳಲ್ಲಿ ನಿಂತಿರುವ ಟೆಲಿವಿಷನ್ ದೃಶ್ಯಗಳನ್ನು ತೋರಿಸಲಾಗಿದೆ. ಭೂಕಂಪದ ಕೇಂದ್ರಬಿದ್ದುವಿದ್ದ ವೆಂಚುವಾನ್ ಕೌಂಟಿಯಲ್ಲಿ ಫೋನ್ ಮಾರ್ಗಗಳ ಸಂಪರ್ಕ ಸಂಪೂರ್ಣ ಕಡಿದಿದ್ದು, ನೆರೆಯ ಕೌಂಟಿಗಳಲ್ಲಿ ಕೂಡ ಕಟ್ಟಡಗಳಿಗೆ ಹಾನಿಯಾದ ಬಗ್ಗೆ ವರದಿಗಳು ಬರುತ್ತಿವೆ.

ಭೂಕಂಪದಿಂದ ಅವಶೇಷಗಳಲ್ಲಿ ಸಿಕ್ಕಿಬಿದ್ದ ಎಲ್ಲರನ್ನೂ ರಕ್ಷಿಸಲು ಪ್ರಯತ್ನಿಸುವುದಾಗಿ ಅಧ್ಯಕ್ಷ ಹು ಜಿಂಟಾವೊ ಹೇಳಿದ್ದಾರೆ. ಭೂಕಂಪನದ ಅನುಭವ ನೈರುತ್ಯ ದಿಕ್ಕಿನಲ್ಲಿ ಸುಮಾರು 3300 ಕಿಮೀ ದೂರದಲ್ಲಿರುವ ಬ್ಯಾಂಕಾಕ್‌ನಲ್ಲಿ ಕೂಡ ಉಂಟಾಗಿದ್ದು, ಅಲ್ಲಿನ ಕಚೇರಿ ಕಟ್ಟಡಗಳು ಅದುರಿದ ಅನುಭವವಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಈಶಾನ್ಯ ಚೀನಾದಲ್ಲಿ ಅಪ್ಪಳಿಸಿದ ಭೂಕಂಪ
ನ್ಯಾಯಾಧೀಶರ ಮರುನೇಮಕಕ್ಕೆ ಕವಿದ ಕಾರ್ಮೋಡ
ಸರ್ಜನ್, ನರ್ಸ್, ಪೈಲಟ್ ಅಪಘಾತದಲ್ಲಿ ಸಾವು
ಮ್ಯಾನ್ಮಾರ್ ಚಂಡಮಾರುತದಲ್ಲಿ 220,000 ಜನರು ನಾಪತ್ತೆ
ಮಿನಿ ವ್ಯಾನ್ ಡಿಕ್ಕಿ: 6 ಭಾರತೀಯರ ಸಾವು
ದಾರ್ಫುರ್: ರಾಜತಾಂತ್ರಿಕ ಸಂಬಂಧ ಕಡಿತ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಬಿಜೆಪಿಯ ಹಗಲು ಕನಸು:ಸಿದ್ದು ಲೇವಡಿ
ಚುನಾವಣೆಯಲ್ಲಿ 114 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಹಗಲು ಕನಸು ಕಾಣುತ್ತಿದೆ ಎಂದು....
ಮೊದಲ ಹಂತದ ಚುನಾವಣೆಯಲ್ಲಿ ಶೇ.66 ಮತದಾನ
ಹುಟ್ಟುವ ಮೊದಲೇ ಕುಲಾವಿ ಹೊಲಿಸಿದ ಬೆಂಕಿ
ಮನರಂಜನೆ
ಚಿತ್ರ ಸುದ್ದಿ - ನಾಟಕರಂಗದಲ್ಲಿ ಹೆಸರು ಗಳಿಸಿದ ಸರದೇಶ್‌ಪಾಂಡೆ ಈಗ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಹುಡುಕಲು ಬಂದಿದ್ದಾರೆ. 'ಐಡಿಯಾ ಮಾಡ್ಯಾರ' ಎಂಬ ಚಿತ್ರವನ್ನು ಇವರು ನಿರ್ದೇಶಿಸುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಚಿತ್ರ ಮುಹೂರ್ತ ಕಾಣಲಿದೆ.
ಮುಂದೆ ಓದಿ|ಮತ್ತಷ್ಟು...
Marketplace