ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ನೈರುತ್ಯ ಚೀನಾದಲ್ಲಿ ಅಪ್ಪಳಿಸಿದ ಭೂಕಂಪ
ಚೀನಾ(ಏಜೆನ್ಸಿ), 12 ಮೇ 2008   ( 15:53 IST )
ap
ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಶಕ್ತಿಶಾಲಿ ಭೂಕಂಪ ಸೋಮವಾರ ಅಪ್ಪಳಿಸಿದ್ದು, 5 ಜನರು ಸತ್ತಿರುವ ಬಗ್ಗೆ ವರದಿಯಾಗಿದೆ. ಬೀಜಿಂಗ್ ಮತ್ತು ಶಾಂಘಾಯ್‌ನಲ್ಲಿ ಮತ್ತು ರಾಷ್ಟ್ರದ ಇತರೆ ನಗರಗಳಲ್ಲಿ ಕಂಪನಗಳ ಅನುಭವ ಉಂಟಾಗಿದೆ ಎಂದು ಅಧಿಕೃತ ಸುದ್ದಿಸಂಸ್ಥೆ ತಿಳಿಸಿದೆ.

ಸಿಚುವಾನ್ ಪ್ರಾಂತೀಯ ರಾಜಧಾನಿ ಚೆಂಗ್ಡುವಿಗೆ 146 ಕಿಮೀ ವಾಯವ್ಯದಲ್ಲಿ ವೆಂಚುಯಾನ್ ಕೌಂಟಿಯಲ್ಲಿ ಈ ಭೂಕಂಪ ಅಪ್ಪಳಿಸಿದೆ ಎಂದು ಭೂಕಂಪ ಮಾಪನ ಬ್ಯೂರೋ ತಿಳಿಸಿದೆ. ಪೂರ್ವ ಬೀಜಿಂಗನ್ನು ಕೂಡ ಶೇ.3.9ರಷ್ಟು ಕಡಿಮೆ ತೀವ್ರತೆಯ ಭೂಕಂಪ ಅಪ್ಪಳಿಸಿದೆ ಎಂದು ಚೀನಾ ಭೂಕಂಪ ಮುನ್ಸೂಚನೆ ಜಾಲ ತಿಳಿಸಿದೆ.

ಭೂಕಂಪ ಅಪ್ಪಳಿಸುತ್ತಿದ್ದಂತೆ ಕಟ್ಟಡಗಳು ಅದುರಿದವು. ಜನರು ಭಯಭೀತಿಯಿಂದ ರಸ್ತೆಗಳಿಗೆ ಓಡಿದರು. ಚೆಂಗ್ಡುವಿನ ಕೆಲವು ವಸತಿ ಕಟ್ಟಡಗಳ ಗೋಡೆಗಳಲ್ಲಿ ಬಿರುಕುಬಿಟ್ಟಿದೆ.
ಚೆಂಗ್ಡು, ಚಾಂಗ್‌ಕಿಂಗ್ ನಗರಗಳ ದೂರಸಂಪರ್ಕ ಜಾಲಗಳ ಸಂಪರ್ಕ ಕಡಿದಿವೆ. ಚೀನಾದ ಆರ್ಥಿಕ ನಗರ ಶಾಂಘಾಯ್‌ನಲ್ಲಿ ಹಾಂಕಿಯಾವೊ ಮತ್ತು ನಾಂಜಿಂಗ್ ಕಚೇರಿ ಕಟ್ಟಡಗಳಿಂದ ಜನರು ಹೊರಗೋಡಿದರು ಎಂದು ಏಜೆನ್ಸಿ ತಿಳಿಸಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಚೀನಾ ಭೂಕಂಪದಲ್ಲಿ ಸಾವಿರಾರು ಜನರ ಜೀವಂತ ಸಮಾಧಿ
ನ್ಯಾಯಾಧೀಶರ ಮರುನೇಮಕಕ್ಕೆ ಕವಿದ ಕಾರ್ಮೋಡ
ಸರ್ಜನ್, ನರ್ಸ್, ಪೈಲಟ್ ಅಪಘಾತದಲ್ಲಿ ಸಾವು
ಮ್ಯಾನ್ಮಾರ್ ಚಂಡಮಾರುತದಲ್ಲಿ 220,000 ಜನರು ನಾಪತ್ತೆ
ಮಿನಿ ವ್ಯಾನ್ ಡಿಕ್ಕಿ: 6 ಭಾರತೀಯರ ಸಾವು
ದಾರ್ಫುರ್: ರಾಜತಾಂತ್ರಿಕ ಸಂಬಂಧ ಕಡಿತ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಬಿಜೆಪಿಯ ಹಗಲು ಕನಸು:ಸಿದ್ದು ಲೇವಡಿ
ಚುನಾವಣೆಯಲ್ಲಿ 114 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಹಗಲು ಕನಸು ಕಾಣುತ್ತಿದೆ ಎಂದು....
ಮೊದಲ ಹಂತದ ಚುನಾವಣೆಯಲ್ಲಿ ಶೇ.66 ಮತದಾನ
ಹುಟ್ಟುವ ಮೊದಲೇ ಕುಲಾವಿ ಹೊಲಿಸಿದ ಬೆಂಕಿ
ಮನರಂಜನೆ
ಚಿತ್ರ ಸುದ್ದಿ - ನಾಟಕರಂಗದಲ್ಲಿ ಹೆಸರು ಗಳಿಸಿದ ಸರದೇಶ್‌ಪಾಂಡೆ ಈಗ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಹುಡುಕಲು ಬಂದಿದ್ದಾರೆ. 'ಐಡಿಯಾ ಮಾಡ್ಯಾರ' ಎಂಬ ಚಿತ್ರವನ್ನು ಇವರು ನಿರ್ದೇಶಿಸುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಚಿತ್ರ ಮುಹೂರ್ತ ಕಾಣಲಿದೆ.
ಮುಂದೆ ಓದಿ|ಮತ್ತಷ್ಟು...
Marketplace