ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ನ್ಯಾಯಾಧೀಶರ ಮರುನೇಮಕಕ್ಕೆ ಕವಿದ ಕಾರ್ಮೋಡ
ಇಸ್ಲಾಮಾಬಾದ್(ಏಜೆನ್ಸಿ), ಸೋಮವಾರ, 12 ಮೇ 2008   ( 13:37 IST )
ap
ಪಾಕಿಸ್ತಾನದಲ್ಲಿ ನೂತನವಾಗಿ ರಚನೆಯಾದ ಪ್ರಜಾಪ್ರಭುತ್ವ ಸರ್ಕಾರದ ಬುಡ ಅಲ್ಲಾಡುತ್ತಿದ್ದು, ನವಾಜ್ ಷರೀಫ್‌ ಪಕ್ಷವಾದ ಪಿಎಂಎಲ್-ಎನ್ ಬೆಂಬಲ ವಾಪಸು ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದೆ.

ಅಧ್ಯಕ್ಷ ಮುಷರಫ್ ಅವರು ವಜಾ ಮಾಡಿದ ನ್ಯಾಯಾಧೀಶರ ಮರುನೇಮಕದ ವಿಷಯದಲ್ಲಿ ಒಪ್ಪಂದಕ್ಕೆ ಬರಲು ಪಾಕಿಸ್ತಾನದ ಮುಖಂಡರು ವಿಫಲವಾಗಿದ್ದರಿಂದ ಪಾಕ್ ಸಮ್ಮಿಶ್ರ ಸರ್ಕಾರ ಅಧಿಕಾರದ ಗದ್ದುಗೆ ಏರಿದ 6 ವಾರಗಳಲ್ಲೇ ನುಚ್ಚುನೂರಾಗಿ ರಾಷ್ಟ್ರವನ್ನು ಪುನಃ ರಾಜಕೀಯ ಕ್ಷೋಭೆಗೆ ದೂಡಬಹುದೆಂದು ಭಾವಿಸಲಾಗಿದೆ.

ವಾರಾಂತ್ಯವಿಡೀ ಎರಡು ಪ್ರಮುಖ ಪಕ್ಷಗಳ ಸಂಧಾನಕಾರರು ಲಂಡನ್‌ನಲ್ಲಿ ನ್ಯಾಯಾಧೀಶರ ಮರುನೇಮಕಾತಿ ಕುರಿತಂತೆ ಬಿರುಸಿನ ಮಾತುಕತೆ ನಡೆಸಿದರು. ಬಿಕ್ಕಟ್ಟನ್ನು ಬಗೆಹರಿಸಲು ಸೋಮವಾರದ ಸ್ವಯಂಘೋಷಿತ ಗಡುವನ್ನು ಅವರು ವಿಧಿಸಿದ್ದರು. ಆದರೆ ಮಾತುಕತೆ ಫಲಪ್ರದವಾಗದೇ ತಾವು ಪಾಕಿಸ್ತಾನಕ್ಕೆ ಹಿಂತಿರುಗುತ್ತಿರುವುದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದರು.

ನವಾಜ್ ಷರೀಫ್ ಪಕ್ಷದ ಪ್ರತಿನಿಧಿಗಳು ಸೋಮವಾರ ಭೇಟಿ ನೀಡಿ, ಸಮ್ಮಿಶ್ರ ಸರ್ಕಾರದಲ್ಲಿ ಉಳಿಯುವ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಸಚಿವಸಂಪುಟವನ್ನು ತ್ಯಜಿಸುವುದಾಗಿ ಪಕ್ಷವು ಈಗಾಗಲೇ ಬೆದರಿಕೆ ಹಾಕಿದೆ.

ಈ ವಿಷಯಕ್ಕೆ ತೃಪ್ತಿಕರ ಅಂತ್ಯವನ್ನು ಹುಡುಕಲು ನಾವಿನ್ನೂ ಯತ್ನಿಸುತ್ತಿದ್ದೇವೆ ಎಂದು ಪಿಪಿಪಿಯ ಬೇನಜೀರ್ ಭುಟ್ಟೊ ಪತಿ ಅಸೀಫ್ ಅಲಿ ಜರ್ದಾರಿ ಪರ ಸಂಧಾನಕಾರರಾದ ಹುಸೇನ್ ಹಕ್ಕಾನಿ ತಿಳಿಸಿದ್ದಾರೆ. ನವಾಜ್ ಸೋದರ ಶಾಬಾಜ್ ಕೂಡ ಮಾತುಕತೆಯಲ್ಲಿ ಪಾಲ್ಗೊಂಡಿದ್ದು, ಒಪ್ಪಂದ ಕುದುರಿಸಲು ಎರಡೂ ಕಡೆಯವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸರ್ಜನ್, ನರ್ಸ್, ಪೈಲಟ್ ಅಪಘಾತದಲ್ಲಿ ಸಾವು
ಮ್ಯಾನ್ಮಾರ್ ಚಂಡಮಾರುತದಲ್ಲಿ 220,000 ಜನರು ನಾಪತ್ತೆ
ಮಿನಿ ವ್ಯಾನ್ ಡಿಕ್ಕಿ: 6 ಭಾರತೀಯರ ಸಾವು
ದಾರ್ಫುರ್: ರಾಜತಾಂತ್ರಿಕ ಸಂಬಂಧ ಕಡಿತ
ಸರಬ್ಜಿತ್‌ಗೆ ಕ್ಷಮೆ ಬಗ್ಗೆ ಪರಿಗಣನೆ: ಗಿಲಾನಿ ಸುಳಿವು
ಚಂಡಮಾರುತದ ಹಾವಳಿ ಮಧ್ಯೆ ಜನಮತಸಂಗ್ರಹ
ಗ್ರಹ ಗತಿ
ದೈನಿಕ - ಮನೆಯ ವಾತಾವರಣವು ಹಿತಕರವಾಗಿರುತ್ತದೆ. ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಲು ಪ್ರಯತ್ನಿಸಿ.ಇಂದು ನೀವು ಉತ್ತಮ ಮನಸ್ಥಿತಿಯಲ್ಲಿರುವಂತೆ ಕಾಣುತ್ತದೆ. ನಿಮ್ಮ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವತ್ತ ದೃಢ ಹೆಜ್ಜೆಗಳನ್ನು ಇರಿಸಲಿದ್ದೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಈ ಬಾರಿಯೂ ನಾನೇ ಕಿಂಗ್: ಕುಮಾರಸ್ವಾಮಿ
ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ಸಿಗುವುದರ ಜೊತೆಗೆ ಜೆಡಿಎಸ್ ಗದ್ದುಗೆ ಏರಲಿದೆ ...
ಮತದಾನದದ ಜೊತೆ ಅಕ್ರಮ, ಆಮಿಷಗಳ ಆರಂಭ
ಮತದಾರರ ಪಟ್ಟಿಯಲ್ಲಿ ಶಿವಣ್ಣನ ಹೆಸರೇ ಇಲ್ಲ!!
ಮನರಂಜನೆ
ಚಿತ್ರ ಸುದ್ದಿ - ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಿನಲ್ಲಿ ಗುಂಯ್‌ಗುಡುವ 'ಮಿಂಚಾಗಿ ನೀನು ಬರಲು.... ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ.
ಮುಂದೆ ಓದಿ|ಮತ್ತಷ್ಟು...
Marketplace