|
| ಮ್ಯಾನ್ಮಾರ್ ಚಂಡಮಾರುತದಲ್ಲಿ 220,000 ಜನರು ನಾಪತ್ತೆ |
| ಬ್ಯಾಂಕಾಕ್(ಏಜೆನ್ಸಿ), 12 ಮೇ 2008 ( 11:50 IST ) | |
ಮ್ಯಾನ್ಮಾರ್‌ಗೆ ಅಪ್ಪಳಿಸಿದ ಭೀಕರ ಚಂಡಮಾರುತದಲ್ಲಿ ಸುಮಾರು 220,000 ಮಂದಿ ಕಾಣೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ಮಾನವೀಯ ನೆರವು ಏಜನ್ಸಿ ತಿಳಿಸಿದೆ. ಚಂಡಮಾರುತದ ಪ್ರಕೋಪದಿಂದ ಪರಿಸರ ಹಾನಿ, ಹಿಂಸಾಚಾರ ಮತ್ತು ಸಾಮೂಹಿಕ ವಲಸೆ ಸಂಭವಿಸಬಹುದೆಂದು ಅದು ಎಚ್ಚರಿಸಿದೆ.
ಇರವಡ್ಡಿ ಮುಖಜಭೂಮಿಯ 55 ನಗರಗಳು ಮತ್ತು ಇತರೆ ಹಾನಿಪೀಡಿತ ಪ್ರದೇಶಗಳಲ್ಲಿ ಸಾವುನೋವಿನ ಅಂದಾಜನ್ನು ವಿಶ್ವಸಂಸ್ಥೆ ಏಜೆನ್ಸಿ ಮಾಡಿದ್ದು, ಚಂಡಮಾರುತ ನರ್ಗಿಸ್‌ನಿಂದ 102,000 ಜನರು ಸತ್ತಿರಬಹುದೆಂದು ಅದು ಹೇಳಿದೆ.
ಆದರೆ ರಾಷ್ಟ್ರ ಸ್ವಾಮ್ಯದ ಟಿವಿ ವರದಿ ಭಿನ್ನತರವಾಗಿದ್ದು, ಸತ್ತವರ ಸಂಖ್ಯೆ 28,458, ನಾಪತ್ತೆಯಾದವರು 33,416 ಜನರು ಎಂದು ಹೇಳಿದೆ. ಚಂಡಮಾರುತವು ಮಾನವ ಜೀವ ಮತ್ತು ಆರೋಗ್ಯದ ಮೇಲೆ ತಕ್ಷಣದ ಹಾನಿಯುಂಟು ಮಾಡುವ ತೀವ್ರ ಪರಿಸರ ಸಮಸ್ಯೆಗಳಿಗೆ ದಾರಿಯಾಗಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.
ಆಗ್ನೇಯ ಏಷ್ಯದ ಬಡ ರಾಷ್ಟ್ರವಾದ ಮ್ಯಾನ್ಮಾರ್ 46 ವರ್ಷಗಳವರೆಗೆ ಮಿಲಿಟರಿ ಜುಂಟಾಗಳ ಬಿಗಿಮುಷ್ಠಿಯಲ್ಲಿದ್ದು, ವಲಸೆ ಮತ್ತು ಹಿಂಸಾಚಾರವು ಸಮಸ್ಯೆಗಳಾಗಿ ಹೊರಹೊಮ್ಮುತ್ತಿದೆ ಎಂದು ವರದಿ ತಿಳಿಸಿದೆ. ಆಹಾರ ಮತ್ತು ನೀರಿನ ಕೊರತೆ ಪರಿಸ್ಥಿತಿಯ ತೀವ್ರತೆಯಿಂದ ಸಂತ್ರಸ್ತ ಪ್ರದೇಶಗಳಲ್ಲಿ ಹಿಂಸಾಚಾರ ಸ್ಫೋಟಿಸಬಹುದೆಂದು ವರದಿ ಹೇಳಿದೆ.
ಸೇನಾಡಳಿತದ ಸರ್ಕಾರ ವಿಶ್ವಾದ್ಯಂತದಿಂದ ನೆರವನ್ನು ಸ್ವೀಕರಿಸಿದ್ದರೂ, ಪಾಶ್ಚಿಮಾತ್ಯ ನೆರವು ತಜ್ಞರಿಗೆ ಮಾತ್ರ ರಾಷ್ಟ್ರದೊಳಗೆ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಅವರಲ್ಲಿ ಅನೇಕ ಮಂದಿ ದಿನಗಟ್ಟಲೆ ಬ್ಯಾಂಕಾಕ್ ಮತ್ತಿತರ ನಗರಗಳಲ್ಲಿ ಅನುಮತಿಗಾಗಿ ಕಾದುಕೊಂಡಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮನೆಯ ವಾತಾವರಣವು ಹಿತಕರವಾಗಿರುತ್ತದೆ. ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಲು ಪ್ರಯತ್ನಿಸಿ.ಇಂದು ನೀವು ಉತ್ತಮ ಮನಸ್ಥಿತಿಯಲ್ಲಿರುವಂತೆ ಕಾಣುತ್ತದೆ. ನಿಮ್ಮ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವತ್ತ ದೃಢ ಹೆಜ್ಜೆಗಳನ್ನು ಇರಿಸಲಿದ್ದೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಿನಲ್ಲಿ ಗುಂಯ್‌ಗುಡುವ 'ಮಿಂಚಾಗಿ ನೀನು ಬರಲು.... ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ. |
| |
|
|
|
|
|
|
|