ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಮಿನಿ ವ್ಯಾನ್ ಡಿಕ್ಕಿ: 6 ಭಾರತೀಯರ ಸಾವು
ವೆಸ್ಟ್ ಸ್ಪ್ರಿಂಗ್‌ಫೀಲ್ಡ್, ಸೋಮವಾರ, 12 ಮೇ 2008   ( 11:22 IST )
ನಯಾಗರ ಜಲಪಾತಕ್ಕೆ ಪ್ರವಾಸ ಹೊರಟಿದ್ದ ಮಿನಿ ವ್ಯಾನೊಂದು ನಿಯಂತ್ರಣ ತಪ್ಪಿ ಪೆನ್ಸಿಲ್ವೇನಿಯ ಹೆದ್ದಾರಿಯಲ್ಲಿ ಕಾರೊಂದಕ್ಕೆ ಮುಖಾಮುಖಿ ಡಿಕ್ಕಿ ಹೊಡೆದು ವ್ಯಾನಿನಲ್ಲಿದ್ದ 6 ಮಂದಿ ಭಾರತೀಯ ಪೌರರು ಅಸುನೀಗಿದ ಘಟನೆ ಭಾನುವಾರ ಸಂಭವಿಸಿದೆ.

ಸತ್ತವರಲ್ಲಿ ನಾಲ್ಕು ಮಂದಿ ಮಿಚಿಗನ್ ಮೂಲದ ಮಾಹಿತಿ ತಂತ್ರಜ್ಞಾನ ಕಂಪೆನಿ ಸಿಂಟೆಲ್ ಇಂಕ್‌.ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಉಳಿದ ಇಬ್ಬರು ನೌಕರರ ಬಂಧುಗಳಾಗಿದ್ದರು ಎಂದು ಕಂಪೆನಿ ವಕ್ತಾರ ಜೊನಾಥನ್ ಜೇಮ್ಸ್ ತಿಳಿಸಿದರು.ಪೆನ್ಸಿಲ್ವೇನಿಯ-ಒಹಿಯೊ ಗಡಿಯನ್ನು ಭಾನುವಾರ ಮಧ್ಯಾಹ್ನ ದಾಟಿದ ಮಿನಿವ್ಯಾನು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಮಧ್ಯಗೆರೆಯನ್ನು ದಾಟಿ ತಲೆಕೆಳಗಾಗಿ ಉರುಳಿ ನಿಂತಿದ್ದಾಗ, ಪಶ್ಚಿಮಮುಖಿಯಾಗಿ ಬರುತ್ತಿದ್ದ ಕಾರು ಡಿಕ್ಕಿಹೊಡೆಯಿತೆಂದು ಪೊಲೀಸರು ತಿಳಿಸಿದ್ದಾರೆ.

ಮಿನಿವ್ಯಾನ್ ಚಾಲಕ ಕೌಶಿಕ್ ದೇವ್ ಅಪಘಾತದಲ್ಲಿ ಸತ್ತಿದ್ದಾರೆ. ಮನೋಜ್ ಝಾರಿಯ(35), ಮಿಲಿ ಝಾರಿಯ(28), ನಿತಿನ್ ಅಗರವಾಲ್(29), ಸ್ವಾತಿ ಅಗರವಾಲ್(25) ಮತ್ತು ಶುಭಂ ಚೌಧರಿ(24) ಅಪಘಾತದಲ್ಲಿ ಅಸುನೀಗಿದ ಪ್ರಯಾಣಿಕರು.

ಮಿನಿವ್ಯಾನಿನಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ನಿತಿನ್ ಗುಪ್ತಾ(28) ಪ್ರಯಾಣಿಕರ ಸೀಟಿನ ಮುಂಭಾಗದಲ್ಲಿ ಕುಳಿತಿದ್ದರು. ಅವರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದಿಲ್ಲವೆಂದು ಪೊಲೀಸರು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದಾರ್ಫುರ್: ರಾಜತಾಂತ್ರಿಕ ಸಂಬಂಧ ಕಡಿತ
ಸರಬ್ಜಿತ್‌ಗೆ ಕ್ಷಮೆ ಬಗ್ಗೆ ಪರಿಗಣನೆ: ಗಿಲಾನಿ ಸುಳಿವು
ಚಂಡಮಾರುತದ ಹಾವಳಿ ಮಧ್ಯೆ ಜನಮತಸಂಗ್ರಹ
ರೈಸ್, ಬುಷ್ ಹೇಳಿಕೆ: ಮೆಕರ್ಮಾಕ್ ಸಮರ್ಥನೆ
ಶ್ರೀಲಂಕಾ ನೌಕೆಯನ್ನು ಮುಳುಗಿಸಿದ ಎಲ್‌ಟಿಟಿಇ ಪಡೆ
ಮೇ 20ರಂದು ಹಿಲರಿ ವಿರುದ್ಧ ಜಯ ಸಾಧ್ಯ: ಒಬಾಮಾ
ಗ್ರಹ ಗತಿ
ದೈನಿಕ - ಮನೆಯ ವಾತಾವರಣವು ಹಿತಕರವಾಗಿರುತ್ತದೆ. ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಲು ಪ್ರಯತ್ನಿಸಿ.ಇಂದು ನೀವು ಉತ್ತಮ ಮನಸ್ಥಿತಿಯಲ್ಲಿರುವಂತೆ ಕಾಣುತ್ತದೆ. ನಿಮ್ಮ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವತ್ತ ದೃಢ ಹೆಜ್ಜೆಗಳನ್ನು ಇರಿಸಲಿದ್ದೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಈ ಬಾರಿಯೂ ನಾನೇ ಕಿಂಗ್: ಕುಮಾರಸ್ವಾಮಿ
ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ಸಿಗುವುದರ ಜೊತೆಗೆ ಜೆಡಿಎಸ್ ಗದ್ದುಗೆ ಏರಲಿದೆ ...
ಮತದಾನದದ ಜೊತೆ ಅಕ್ರಮ, ಆಮಿಷಗಳ ಆರಂಭ
ಮತದಾರರ ಪಟ್ಟಿಯಲ್ಲಿ ಶಿವಣ್ಣನ ಹೆಸರೇ ಇಲ್ಲ!!
ಮನರಂಜನೆ
ಚಿತ್ರ ಸುದ್ದಿ - ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಿನಲ್ಲಿ ಗುಂಯ್‌ಗುಡುವ 'ಮಿಂಚಾಗಿ ನೀನು ಬರಲು.... ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ.
ಮುಂದೆ ಓದಿ|ಮತ್ತಷ್ಟು...
Marketplace