|
| ಚಂಡಮಾರುತದ ಹಾವಳಿ ಮಧ್ಯೆ ಜನಮತಸಂಗ್ರಹ |
| ಮ್ಯಾನ್ಮಾರ್(ಏಜೆನ್ಸಿ), ಶನಿವಾರ, 10 ಮೇ 2008 ( 18:32 IST ) | |
ಕಳೆದ ವಾರ ಮ್ಯಾನ್ಮಾರ್‌ನಲ್ಲಿ ವಿನಾಶಕಾರಿ ನರ್ಗಿಸ್ ಚಂಡಮಾರುತ ಅಪ್ಪಳಿಸಿದ ಬಳಿಕ ಶನಿವಾರ ಸಂವಿಧಾನಿಕ ಜನಮತ ಸಂಗ್ರಹವನ್ನು ಬರ್ಮಾದಲ್ಲಿ ನಡೆಸಲಾಗಿದೆ. ಚಂಡಮಾರುತದ ಬಿಕ್ಕಟ್ಟನ್ನು ನಿಭಾಯಿಸಿದ ರೀತಿಯ ಬಗ್ಗೆ ಮ್ಯಾನ್ಮಾರ್ ಸೇನಾಧಿಕಾರಿಗಳು ಅಂತಾರಾಷ್ಟ್ರೀಯ ಟೀಕಾಪ್ರವಾಹಕ್ಕೆ ಒಳಗಾದ ಮಧ್ಯೆ, ಈ ಜನಮತಸಂಗ್ರಹ ನಡೆಯಿತು.
ಮ್ಯಾನ್ಮಾರ್ ಸರ್ಕಾರ ತಾನು ವಿದೇಶಿ ನೆರವನ್ನು ಸ್ವಾಗತಿಸಿದರೂ, ಪರಿಹಾರ ಕಾರ್ಯಕರ್ತರಿಗೆ ಪ್ರವೇಶಾವಕಾಶ ನೀಡುವುದಿಲ್ಲ ಎಂದು ಹೇಳುತ್ತಿದೆ. ವಿಶ್ವಸಂಸ್ಥೆಯ ಪ್ರಥಮ ಪರಿಹಾರ ಸಾಮಗ್ರಿಯನ್ನು ಹೊತ್ತ ವಿಮಾನವು ಬರ್ಮಾಗೆ ಆಗಮಿಸಿದ್ದು, ಇನ್ನಷ್ಟು ಆಹಾರ ಸಾಮಗ್ರಿಗಳನ್ನು ನಿರೀಕ್ಷಿಸಲಾಗಿದೆ.
ಶನಿವಾರದ ಜನಮತಸಂಗ್ರಹವು ರಾಷ್ಟ್ರದ ಮೂರನೇ ಎರಡು ಭಾಗದಲ್ಲಿ ನಡೆದಿದ್ದು, ಇರವಡ್ಡಿ ಮುಖಜಭೂಮಿ ಮತ್ತು ರಂಗೂನ್ ಸೇರಿದಂತೆ ತೀವ್ರ ಪೀಡಿತ ಪ್ರದೇಶಗಳಲ್ಲಿ 2 ವಾರಗಳ ತನಕ ಮುಂದೂಡಲಾಗಿದೆ.
ರಾಷ್ಟ್ರದ ಆಡಳಿತಾರೂಢ ಜನರಲ್‌ಗಳು ಈ ಜನಮತಗಣನೆಯು 2010ರಲ್ಲಿ ಪ್ರಜಾಪ್ರಭುತ್ವ ಚುನಾವಣೆಗೆ ದಾರಿ ಕಲ್ಪಿಸುತ್ತದೆ ಎಂದು ಹೇಳಿದರೆ, ಇದು ಸೇನಾಡಳಿತ ಬೇರುಬಿಡುವ ತಂತ್ರ ಎಂದು ಪ್ರತಿಪಕ್ಷ ಹೇಳುತ್ತಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ |
| |
|
|
|
|
|
|
|