|
| ಶ್ರೀಲಂಕಾ ನೌಕೆಯನ್ನು ಮುಳುಗಿಸಿದ ಎಲ್‌ಟಿಟಿಇ ಪಡೆ |
| ಕೊಲಂಬೊ(ಏಜೆನ್ಸಿ), ಶನಿವಾರ, 10 ಮೇ 2008 ( 16:42 IST ) | |
ಎಲ್‌ಟಿಟಿಇ ಶನಿವಾರ ಶ್ರೀಲಂಕಾ ನೌಕಾಪಡೆಗೆ ಸೇರಿದ ನೌಕೆಯನ್ನು ಟ್ರಿಂಕಾಮಲಿ ಬಂದರಿನಲ್ಲಿ ಮುಳುಗಿಸಿದೆ. ಈ ಕೃತ್ಯವು ಕಾಂಗ್‌ಕಾಯ್ ಅಮರನ್ ವಿಭಾಗದ ಕಮಾಂಡೊಗಳ ಕೈವಾಡ ಎಂದು ವ್ಯಾಘ್ರ ಬಂಡುಕೋರರು ಹೇಳಿಕೊಂಡಿದ್ದಾರೆ. ಜಲಗರ್ಭದಲ್ಲಿ ಸ್ಫೋಟದಿಂದ ಟ್ರಿಂಕಾಮಲಿ ಬಂದರಿನ ಅಶ್ರಾಫ್ ಜೆಟ್ಟಿಯಲ್ಲಿದ್ದ ಯುದ್ಧ ನೌಕೆ ಎ-520 ಮಧ್ಯಾಹ್ನ 2.15ಕ್ಕೆ ಮುಳುಗಿತು ಎಂದು ಶ್ರೀಲಂಕಾ ನೌಕಾ ಪಡೆಯ ಹೇಳಿಕೆ ತಿಳಿಸಿದೆ.
ಸ್ಫೋಟದಿಂದ ಯಾವುದೇ ಜೀವಹಾನಿಯಾಗಿಲ್ಲ ಎಂದೂ ಅದು ತಿಳಿಸಿದೆ. 1970ರಲ್ಲಿ ನಿರ್ಮಿಸಿದ್ದ ವ್ಯಾಪಾರಿ ನೌಕೆಯಾಗಿದ್ದ ಎ-520 ನೌಕೆ ಕೋರ್ಟ್ ಆದೇಶದ ಬಳಿಕ ಶ್ರೀಲಂಕಾದ ನೌಕಾಪಡೆಗೆ ಹಸ್ತಾಂತರಿಸಲಾಗಿತ್ತು. 2003ರಲ್ಲಿ ತಂಗಾಲಿಯ 254 ಮಂದಿ ಅಕ್ರಮ ವಲಸೆಗಾರರನ್ನು ಸಾಗಣೆ ಮಾಡಿದ ಬಳಿಕ ನೌಕೆಯನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ನೌಕೆಯು ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ನಿರತವಾಗಿದೆ ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿತ್ತು. ಜಾಫ್ನಾದ ಕೆಕೆಎಸ್ ಬಂದರಿಗೆ ಸಾಗಿಸಲು ಸ್ಫೋಟಕಗಳನ್ನು ತುಂಬಿದ ನೌಕೆಯನ್ನು ಕಪ್ಪು ವ್ಯಾಘ್ರಗಳು ಜಲಗರ್ಭದ ದಾಳಿಯ ಮೂಲಕ ಸ್ಫೋಟಿಸಿದರು ಎಂದು ಏತನ್ಮಧ್ಯೆ ಎಲ್‌ಟಿಟಿಇ ಹೇಳಿಕೊಂಡಿದೆ. ದಾಳಿ ಆರಂಭವಾದ 13 ನಿಮಿಷಗಳಲ್ಲೇ ಹಡಗು ಮುಳುಗಿತು ಎಂದೂ ತಮಿಳು ವ್ಯಾಘ್ರಗಳು ಹೇಳಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ |
| |
|
|
|
|
|
|
|