ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಮೇ 20ರಂದು ಹಿಲರಿ ವಿರುದ್ಧ ಜಯ ಸಾಧ್ಯ: ಒಬಾಮಾ
ನವದೆಹಲಿ(ಏಜೆನ್ಸಿ), ಶನಿವಾರ, 10 ಮೇ 2008   ( 15:01 IST )
file
ಹಿಲರಿ ಕ್ಲಿಂಟನ್ ವಿರುದ್ಧ ತಾವು ಮೇ 20ರಂದು ಜಯ ಘೋಷಿಸಲು ಸಾಧ್ಯವಾಗಬಹುದು ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಬಾರಕ್ ಒಬಾಮಾ ತಿಳಿಸಿದ್ದಾರೆ. ಮೇ 20ರಂದು ಕೆಂಟುಕಿ ಮತ್ತು ಒರೆಗಾನ್ ಪ್ರೈಮರಿಗಳು 103 ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದು, ಈ ಪ್ರೈಮರಿಗಳು ತಮ್ಮನ್ನು ಖಚಿತವಾಗಿ ಮೇಲ್ಮಟ್ಟದಲ್ಲಿ ಇರಿಸುತ್ತವೆಂದು ಆಶಾಭಾವನೆ ಹೊಂದಿರುವುದಾಗಿ ಅವರು ನುಡಿದರು.

ಪ್ರಚಾರ ವ್ಯವಸ್ಥಾಪಕರ ಪ್ರಕಾರ, ಡೆಮಾಕ್ರಟಿಕ್ ನಾಮಾಂಕಿತಕ್ಕೆ ಬಹುಮತ ಸಾಧಿಸಬೇಕಾದರೆ ಅವರಿಗೆ ಇನ್ನೂ 33 ಪ್ರತಿನಿಧಿಗಳ ಅಗತ್ಯವಿದೆ. ಕೆಂಟುಕಿ ಮತ್ತು ಒರೆಗಾನ್‌ನಲ್ಲಿ ಅವರು ಗೆದ್ದರೂ ಕೂಡ, ತಮ್ಮ ಪಕ್ಷಕ್ಕೆ ನಾಮಾಂಕಿತರಾಗಲು ಸೂಪರ್‌ಡೆಲಿಗೇಟ್ಸ್ ಬೆಂಬಲ ಅವರಿಗೆ ಅಗತ್ಯವಾಗಿ ಬೇಕಿದೆ. ಆದರೆ ಹಿಲರಿ ಅವರಿಗೆ ಅಧ್ಯಕ್ಷೀಯ ಸ್ಪರ್ಧೆಯನ್ನು ತ್ಯಜಿಸುವಂತೆ ಕರೆ ನೀಡಲು ಒಬಾಮಾ ನಿರಾಕರಿಸಿದ್ದಾರೆ.

ಏತನ್ಮಧ್ಯೆ,ಇಸ್ಲಾಮಿಕ್ ಭಯೋತ್ಪಾದಕ ಗುಂಪಾದ ಹಮಾಸ್ ಒಬಾಮಾ ಅಧ್ಯಕ್ಷರಾಗಲು ಬಯಸುತ್ತದೆಂದು ರಿಪಬ್ಲಿಕನ್ ಜಾನ್ ಮೆಕೈನ್ ಪುನಃ ಪುನಃ ವಾದ ಮಾಡುವ ಮೂಲಕ ಮೆಕೈನ್ ನಡವಳಿಕೆ ಕಳೆದುಕೊಂಡಿದ್ದಾರೆಂದು ಒಬಾಮಾ ಗುರುವಾರ ತಿಳಿಸಿದ್ದರು. ಇದಕ್ಕೆ ಮೆಕೈನ್ ಗುಂಪಿನಿಂದ ಕೋಪಾವೇಶದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೆಕೈನ್ ವಯಸ್ಸನ್ನು ದೊಡ್ಡ ವಿಷಯವಾಗಿ ಮಾಡಲು ಒಬಾಮಾ ಯತ್ನಿಸಿದ್ದಾರೆಂದು ಟೀಕಿಸಿದೆ.

ಮೆಕೈನ್‌ ಆಗಸ್ಟ್‌ಗೆ 72 ವರ್ಷ ಪೂರೈಸಲಿದ್ದು, ಆಯ್ಕೆಯಾದರೆ, ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಅತೀ ಹಿರಿಯ ವ್ಯಕ್ತಿಯೆನಿಸಲಿದ್ದು, ವಯಸ್ಸು ಅವರಿಗೆ ಅತೀಸೂಕ್ಷ್ಮ ವಿಷಯವಾಗಲಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪರಿಹಾರ ಸಾಮಗ್ರಿ ಪ್ರವೇಶಕ್ಕೆ ಜುಂಟಾ ಅವಕಾಶ ನಕಾರ
ಪ್ರಥಮ ಭಾರತೀಯ ಮಹಿಳಾ ಮೇಯರ್ ಮಂಜುಳಾ ಸೂದ್
ನಲ್ಲೂರಿಗೆ ಕೋರ್ಟ್ ಜಾಮೀನು ನಿರಾಕರಣೆ
ಭಾರತದ ಜತೆ ಪಾಕ್‌ಗೆ ಯುದ್ಧದ ಬಯಕೆಯಿಲ್ಲ
ಖಲೀದಾ ಜಿಯಾ ವಿರುದ್ಧ ಆರೋಪಪಟ್ಟಿಗೆ ಅಸ್ತು
36 ಗಂಟೆ ಮುನ್ನ ಮ್ಯಾನ್ಮಾರ್‌ಗೆ ಮುನ್ಸೂಚನೆ
ಗ್ರಹ ಗತಿ
ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಅಳಿವು ಉಳಿವಿನ ಹೋರಾಟಕ್ಕೆ ಸಜ್ಜು
ಕರ್ನಾಟಕ ರಾಜಕೀಯದಲ್ಲಿ ವಂಶಪಾರಂಪರ್ಯ ಆಡಳಿತಕ್ಕೆ ನಾಂದಿ ಹಾಡಿದ ದೇವೇಗೌಡರ ಕುಟುಂಬ...
ನಿರ್ಭೀತಿಯಿಂದ ಮತ ಚಲಾಯಿಸಲು ಸಲಹೆ
ದಕ್ಷಿಣ ಭೂಪಟದಲ್ಲಿ ಬಿಜೆಪಿ ಅಧಿಕಾರ: ಸುಷ್ಮಾ ಸ್ವರಾಜ್
ಮನರಂಜನೆ
ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ
ಮುಂದೆ ಓದಿ|ಮತ್ತಷ್ಟು...
Marketplace