ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಅಫ್ಘನ್ ಜಲವಿದ್ಯುತ್ ಸ್ಥಾವರದಲ್ಲಿ ಸ್ಫೋಟ
ಕಂದಹಾರ್ (ಏಜೆನ್ಸಿ), ಶನಿವಾರ, 29 ಮಾರ್ಚ್ 2008   ( 12:52 IST )
ಶನಿವಾರದಂದು ಕಲಹಪೀಡಿತ ದಕ್ಷಿಣ ಅಫ್ಘಾನಿಸ್ತಾನ ಪ್ರಾಂತ್ಯದಲ್ಲಿನ ಸಣ್ಣ ಜಲವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದ್ದು, ಹಲವು ಮಂದಿ ಸಾವಿಗೀಡಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ ಎಂದು ಜಿಲ್ಲಾ ಮುಖ್ಯಸ್ಥರೊಬ್ಬರು ತಿಳಿಸಿದ್ದಾರೆ.

ಕಟ್ಟಡದಿಂದ ಗಾಯಗೊಂಡ ನಾಲ್ವರನ್ನು ಹೊರ ಕರೆತರಲಾಗಿದ್ದು, ಹೆಲ್ಮಂಡ್ ಪ್ರಾಂತ್ಯದ ಗೆರೆಶ್ಕ್ ಜಿಲ್ಲೆಯಲ್ಲಿನ ಸ್ಥಳೀಯ ಕ್ಲಿನಿಕ್‌ಗೆ ಸೇರಿಸಲಾಗಿದೆ ಎಂದು ಜಿಲ್ಲಾ ಮುಖ್ಯಸ್ಥ ಅಬ್ದುಲ್ ಮನಾಪ್ ತಿಳಿಸಿದ್ದಾರೆ. ಅನೇಕ ಮಂದಿ ಈಗಲೂ ಆ ಕಟ್ಟಡದ ಒಳಗಡೆ ಸಿಲುಕಿಕೊಂಡಿದ್ದಾರೆ ಎಂದು ನಂಬಲಾಗಿದೆ.

ಸ್ಥಾವರದಲ್ಲಿನ ಸ್ಫೋಟಕ್ಕೆ ಏನು ಕಾರಣ ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ಹೇಳಿದ ಮನಾಪ್, ಬಾಂಬ್ ಸ್ಫೋಟದ ಸಾಧ್ಯತೆಯ ಬಗ್ಗೆ ಅಲ್ಲಗಳೆದಿಲ್ಲ.

ತಾಲಿಬಾನ್ ಉಗ್ರರು ಹೆಲ್ಮಂಡ್‌ನಲ್ಲಿ ಸಕ್ರಿಯರಾಗಿದ್ದು, ನಿರಂತರ ಬಾಂಬ್ ಸ್ಫೋಟಗಳನ್ನು ನಡೆಸುತ್ತಿರುತ್ತಾರೆ. ಅಫ್ಘನ್ನಿನ ಅತಿದೊಡ್ಡ ಪ್ರಾಂತ್ಯವಾದ ಇಲ್ಲಿ ಅತಿ ಹೆಚ್ಚು ಕಾನೂನು ಬಾಹಿರ ಒಪಿಯಂ ಬೆಳೆ ಉತ್ಪಾದಿಸಲಾಗುತ್ತಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅಫ್ಘನ್ ಗಡಿ ನಿಯಂತ್ರಿಸಿ: ಆಸ್ಟ್ರೇಲಿಯಾ ಪಾಕ್‌ಗೆ ಕರೆ
ನೇಪಾಳ ಸುಗಮ ಚುನಾವಣೆ: ವಿಶ್ವಸಂಸ್ಥೆ ಪ್ರಯತ್ನ
ಇರಾಕ್: ಶಿಯಾ ಉಗ್ರರ ಮೇಲೆ ಅಮೆರಿಕ ವಾಯು ದಾಳಿ
ಹಿಂದಕ್ಕೆ ಸರಿಯುವ ಸಲಹೆಯನ್ನು ತಿರಸ್ಕರಿಸಿದ ಕ್ಲಿಂಟನ್
ಇಸ್ಲಾಮ್ ವಿರೋಧಿ ವೀಡಿಯೋವನ್ನು ಹಿಂತೆಗೆದ ವೆಬ್‌ಸೈಟ್
ಕನಿಷ್ಠ ವಿಶ್ವಸನೀಯ ಅಣ್ವಸ್ತ್ರ ತಡೆ: ಗಿಲಾನಿ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮಹಿಳಾ ಮಣಿಗಳಿಗೆ ಮಣೆ: ಯಡಿಯೂರಪ್ಪ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ ....
ಹಂಸಲೇಖರಿಂದ ನಾಳೆ ಇನ್ನೊಂದು ದೇಸಿ ಹಬ್ಬ
ಬಿಜೆಪಿ ಪ್ರಚಾರಕ್ಕೆ ತಾರೆಯರ ದಂಡು
ಮನರಂಜನೆ
ಚಿತ್ರ ಸುದ್ದಿ - ಮಿಲನ ಚಿತ್ರದ ಯಶಸ್ವಿ ಜೋಡಿಗಳಾದ ನಟ ಪುನೀತ್ ರಾಜ್‌ ಕುಮಾರ್ ಮತ್ತು ನಿರ್ದೇಶಕ ಪ್ರಕಾಶ್ ಮತ್ತೊಮ್ಮೆ ಜೊತೆಯಾಗಿದ್ದಾರೆ. ಹೋಂ ಪ್ರೊಡಕ್ಷನಿನಲ್ಲಿ ನಿರ್ಮಾಣವಾಗುತ್ತಿರುವ ವಂಶಿ ಚಿತ್ರದಲ್ಲಿ ಅವರು ಮತ್ತೊಮ್ಮೆ ಫ್ಯಾಮಿಲಿ ಹುಡುಗನಾಗಿ ಅಭಿನಯಿಸಲಿದ್ದಾರೆ.
ಮುಂದೆ ಓದಿ|ಮತ್ತಷ್ಟು...