ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಭುಟ್ಟೋ ಸಾವಿನ ಕಾರಣ: ಕ್ಷಮೆ ಯಾಚಿಸಿದ ಪಾಕ್ ಸರ್ಕಾರ
ಇಸ್ಲಾಮಾಬಾದ್ (ಏಜೆನ್ಸಿ), ಮಂಗಳವಾರ, 1 ಜನವರಿ 2008   ( 14:13 IST )
ನಾಟಕೀಯ ತಿರುವೊಂದರಲ್ಲಿ ಪಾಕಿಸ್ತಾನ ಸರ್ಕಾರವು, ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಸಾವಿಗೆ ಆತ್ಮಾಹುತಿ ದಾಳಿ ವೇಳೆಗೆ, ಅವರ ತಲೆಗೆ ಕಾರಿನ ಬಿಸಿಲು ತಡೆ ಲೋಹದ ಏಟು ತಗುಲಿರುವುದು ಕಾರಣ ಎಂದು ನೀಡಿದ್ದ ಹೇಳಿಕೆಗೆ ಮಂಗಳವಾರ ಕ್ಷಮೆ ಯಾಚಿಸಿದೆ.

ಉಸ್ತುವಾರಿ ಆಂತರಿಕ ಸಚಿವ ಹಮೀದ್ ನವಾಜ್ ಖಾನ್ ಅವರು ಮಾಧ್ಯಮ ಮತ್ತು ಜನತೆಯ ಕ್ಷಮೆ ಕೋರಿದ್ದು, ತನ್ನ ಸಚಿವಾಲಯದ ವಕ್ತಾರ ಜಾವೆದ್ ಚೀಮ ನೀಡಿರುವ ಹೇಳಿಕೆಯನ್ನು ಮರೆತುಬಿಡುವಂತೆ ಹೇಳಿದ್ದಾರೆ. ಚೀಮ ಹೇಳಿಕೆಯನ್ನು ಭುಟ್ಟೋ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯು ಸುಳ್ಳಿನ ಕಂತೆ ಎಂದು ಕರೆದಿತ್ತಲ್ಲದೆ, ಈ ಹೇಳಿಕೆ ಪಾಕ್ ಹಾಗೂ ವಿದೇಶಗಳಲ್ಲಿ ಕೋಲಾಹಲ ಸೃಷ್ಟಿಸಿತ್ತು.

ಏತನ್ಮಧ್ಯೆ, ಪಂಜಾಬ್ ಪ್ರಾಂತ್ಯವು ಮಂಗಳವಾರ ಪತ್ರಿಕೆಗಳಲ್ಲಿ ಮುಖ ಪುಟ ಜಾಹೀರಾತು ನೀಡಿ, ಭುಟ್ಟೋ ಮೇಲೆ ಗುಂಡೆಸೆದ ದುಷ್ಕರ್ಮಿ ಮತ್ತು ಶಂಕಿತ ಆತ್ಮಾಹುತಿ ಬಾಂಬರ್ ಕುರಿತ ಮಾಹಿತಿ ನೀಡಿರುವವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.

ಚೀಮ ಅವರ ಹೇಳಿಕೆ ರಾವಲ್ಪಿಂಡಿಯ ಲಿಯಾಕತ್ ಬಾಗ್‌ನಲ್ಲಿ ಭುಟ್ಟೋ ಹತ್ಯೆಯಾದ ಮರುದಿನದಂದು ಹೊರಬಿದ್ದಿತ್ತು. ದೂರದರ್ಶನ ವಾಹಿನಿಗಳು ಮತ್ತು ಖಾಸಗಿಯಾಗಿ ತೆಗೆದಿದ್ದ ಪೋಟೋಗಳು ಹಾಗೂ ವಿಡಿಯೋ ಚಿತ್ರಣಗಳು ಭುಟ್ಟೋ ಅವರಿಗೆ ದುಷ್ಕರ್ಮಿ ಗುಂಡೆಸೆಯುವ ಸ್ಪಷ್ಟ ಚಿತ್ರಗಳನ್ನು ಬಿತ್ತರಿಸಿದ್ದವು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಭಯೋತ್ಪಾದನೆ ವಿರುದ್ಧ ಹೋರಾಟ ಸಂಕಲ್ಪ
ಲಂಕಾ ಘರ್ಷಣೆ: 25 ಉಗ್ರರ ಸಾವು
ಮುಷ್‌ರಫ್‌ರ ವಿರುದ್ಧ ಕಿಡಿ ಕಾರಿದ ಶರೀಫ್
ಥೈಲ್ಯಾಂಡ್ ಬಾಂಬ್ ಸ್ಫೋಟ: 27 ಮಂದಿ ಸಾವು
ನೇಪಾಳ: ಮಾವೋವಾದಿ ಸಚಿವರ ಪ್ರಮಾಣವಚನ
ಪಾಕ್ ಚುನಾವಣೆ: ನಾಳೆ ನಿರ್ಧಾರ
ಮನರಂಜನೆ
ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
PTI
 
ಅನಿಲ್ ಕುಂಬ್ಳೆ
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ...
ರಾಬಿನ್ ಉತ್ತಪ್ಪ
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಸಾಹಿತ್ಯ
ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
ಮುಂದೆ ಓದಿ|ಮತ್ತಷ್ಟು...
Marketplace