|
| ಭಯೋತ್ಪಾದನೆ ವಿರುದ್ಧ ಹೋರಾಟ ಸಂಕಲ್ಪ |
| ವಾಶಿಂಗ್ಟನ್ (ಏಜೆನ್ಸಿ), ಮಂಗಳವಾರ, 1 ಜನವರಿ 2008 ( 13:50 IST ) | |
ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ತನ್ನ ಹೊಸ ವರ್ಷದ ಸಂದೇಶದಲ್ಲಿ ವಾಷಿಂಗ್ಟನ್-ಭಯೋತ್ಪಾದಕರ ವಿರುದ್ಧ ಒತ್ತಡವ ಹೇರಿ ಸ್ವಾತಂತ್ರ್ಯದ ಶತ್ರುಗಳ ವಿರುದ್ಧ ಆಕ್ರಮಣಕಾರಿ ನಿಲುವನ್ನು ಅನುಸರಿಸುವುದಾಗಿ ಅಮೆರಿಕ ಮತ್ತು ಜಗತ್ತಿನ ಜನರಿಗೆ ಸಾರಿದ್ದಾರೆ.
"ಭಯೋತ್ಪಾದಕರು ಮತ್ತು ತೀವ್ರವಾದಿಗಳನ್ನು ಸೋಲಿಸಲು ಅಮೆರಿಕ ದೃಢಸಂಕಲ್ಪ ಮಾಡಿದೆ. 2008ರಲ್ಲಿ ನಾವು ಅಂತಾರಾಷ್ಟ್ರೀಯ ಸಮುದಾಯದಲ್ಲಿ ನಮ್ಮ ಸಹಭಾಗಿಗಳ ಜತೆ ನಿಂತು ನಮ್ಮ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಶಾಂತಿಯ ಅಡಿಪಾಯವನ್ನು ಹಾಕುತ್ತೇವೆ" ಎಂದು ಬುಷ್ ಟೆಕ್ಸಾಸ್‌ನಲ್ಲಿರುವ ತಮ್ಮ ರಾಂಚ್‌ನಿಂದ ನೀಡಿರುವ ಹೊಸ ವರ್ಷದ ಸಂದೇಶದಲ್ಲಿ ತಿಳಿಸಿದ್ದಾರೆ.
ರಾಂಚ್‌ನಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಜತೆ ಕ್ರಿಸ್‌ಮಸ್ ಉತ್ಸವದಲ್ಲಿ ಪಾಲ್ಗೊಳ್ಳಲು ಅವರು ತೆರಳಿದ್ದಾರೆ.
"ದೃಢ ಆರ್ಥಿಕತೆಯಿಂದ ಅವಕಾಶ ಮತ್ತು ಆಶಯದ ಭವಿಷ್ಯ ಆರಂಭಗೊಳ್ಳುತ್ತದೆ. ನಮ್ಮ ಆರ್ಥಿಕತೆ ಕಳೆದ ವರ್ಷ ಉತ್ತಮ ಬೆಳವಣಿಗೆ ಕಂಡಿತು. ತೆರಿಗೆಯನ್ನು ತಗ್ಗಿಸುವ ಮೂಲಕ ಮತ್ತು ಹಣಕಾಸು ನಿರ್ಬಂಧಗಳ ಮೂಲಕ ಉದ್ಯೋಗಾವಕಾಶಗಳು ಹೆಚ್ಚಿದವು" ಎಂದು ಬುಷ್ ಹೇಳಿದರು. ಸ್ವದೇಶ ಹಾಗೂ ವಿಶ್ವಾದ್ಯಂತ ಶಾಂತಿ ಮತ್ತು ಸ್ವಾತಂತ್ರ್ಯ ವಿಸ್ತರಣೆ ಕಾರ್ಯವನ್ನು ಅಮೆರಿಕ ಮುಂದುವರಿಸಿದೆ ಎಂದು ಬುಷ್ ಹೇಳಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|