ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಲಂಕಾ ಘರ್ಷಣೆ: 25 ಉಗ್ರರ ಸಾವು
ಕೊಲೊಂಬೊ (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007   ( 20:16 IST )
ತಮಿಳು ಬಂಡುಕೋರರ ಹಿಡಿತದಲ್ಲಿದ್ದ ಮುಲೈತಿವುನಲ್ಲಿನ ಎಲ್‌ಟಿಟಿಇ ತರಬೇತಿ ಶಿಭಿರವೊಂದರ ಮೇಲೆ ಶ್ರೀಲಂಕಾ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಟ 25 ತಮಿಳು ಉಗ್ರರು ಹಾಗೂ ಇಬ್ಬರು ಸೈನಿಕರು ಸಾವಿಗೀಡಾದರು.

ಈ ಪ್ರದೇಶದಲ್ಲಿ ನಡೆದ ಭಯಂಕರ ಕಾಳಗದಲ್ಲಿ ಹಲವು ಸೇನಾ ಸಿಬ್ಬಂಧಿ ಮತ್ತು ಎಲ್‌ಟಿಟಿಇ ಉಗ್ರರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಭದ್ರತೆಗಾಗಿನ ಮಾಧ್ಯಮ ಕೇಂದ್ರ ತಿಳಿಸಿದೆ.

"ಶ್ರಿಲಂಕಾ ವಾಯು ಪಡೆ ಮುಲೈತೀವುನಲ್ಲಿ ನೆಲೆಗೊಂಡಿದ್ದ ಉಗ್ರರ ತರಬೇತಿ ಶಿಭಿರದ ಮೇಲೆ ಬಾಂಬ್ ದಾಳಿ ನಡೆಸಿತು. ಈ ಶಿಬಿರದಲ್ಲಿ ಎಲ್‌ಟಿಟಿಇ ಉಗ್ರರ ನೇಮಕಾತಿ ಹಾಗೂ ತರಬೇತಿ ನಡೆಸಲಾಗುತ್ತಿತ್ತು. ಗುರಿಯ ಮೇಲೆ ನಿಖರವಾಗಿ ದಾಳಿ ಮಾಡಲಾಯಿತು," ಎಂದು ತಿಳಿಸಿದೆ.

ಇದೇ ವೇಳೆ ಮತ್ತೊಂದು ಘಟನೆಯಲ್ಲಿ ಭದ್ರತಾ ಪಡೆಯನ್ನು ಕೊಂಡೊಯ್ಯುತ್ತಿದ್ದ ಬಸ್‌ಗಳನ್ನು ಗುರಿಯಾಗಿಸಿ ಎಲ್‌ಟಿಟಿಇ ಬಾಂಬ್ ಸ್ಫೋಟ ನಡೆಸಿತು. ಇದರ ಪರಿಣಾಮವಾಗಿ ಮೂವರು ನೌಕಾ ನಾವಿಕರು ಹಾಗೂ ಓರ್ವ ಸೈನಿಕ ಸಾವಿಗೀಡಾಗಿದ್ದಾರೆ.

ಶ್ರೀಲಂಕಾ ಉತ್ತರದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ಒಬ್ಬ ಎಲ್‌ಟಿಟಿಇ ಉಗ್ರನನ್ನು ಕೊಲ್ಲಲಾಗಿದ್ದರೆ, ಪೊಕ್ಕರವಾನಿಯಲ್ಲಿ 4 ಉಗ್ರರನ್ನು ಕೊಂದು ಹಾಕಲಾಯಿತು ಎಂದು ಭದ್ರತಾ ಸಚಿವಾಲಯ ತಿಳಿಸಿದೆ.

ವವುನಿಯದಲ್ಲಿನ ಉಮಯರತುವರನ್ಕುಲಂನಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ನಾಲ್ವರು ತಮಿಳು ಉಗ್ರರನ್ನು ಸೇನಾ ಪಡೆ ಹತ್ಯೆ ಮಾಡಿತು.

ಮನ್ನಾರ್‌ನಲ್ಲಿ ಸೇನೆ ಹಾಗೂ ಎಲ್‌ಟಿಟಿಇ ನಡುವೆ ಭಾರಿ ಘರ್ಷಣೆ ನಡೆದಿದ್ದು, ಇದರಲ್ಲಿ ಒಬ್ಬ ಸೈನಿಕ ಮರಣ ಹೊಂದಿದ್ದರೆ, ಇತರ ನಾಲ್ವರು ಗಾಯಗೊಂಡಿದ್ದಾರೆ.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮುಷ್‌ರಫ್‌ರ ವಿರುದ್ಧ ಕಿಡಿ ಕಾರಿದ ಶರೀಫ್
ಥೈಲ್ಯಾಂಡ್ ಬಾಂಬ್ ಸ್ಫೋಟ: 27 ಮಂದಿ ಸಾವು
ನೇಪಾಳ: ಮಾವೋವಾದಿ ಸಚಿವರ ಪ್ರಮಾಣವಚನ
ಪಾಕ್ ಚುನಾವಣೆ: ನಾಳೆ ನಿರ್ಧಾರ
ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಸಾವು?
ಪಾಕಿಸ್ತಾನ: ಸ್ಫರ್ಧೆಗೆ ಪಿಎಂಎಲ್-ಎನ್ ಸಿದ್ಧ
ಮನರಂಜನೆ
ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
PTI
 
ಅನಿಲ್ ಕುಂಬ್ಳೆ
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ...
ರಾಬಿನ್ ಉತ್ತಪ್ಪ
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಸಾಹಿತ್ಯ
ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
ಮುಂದೆ ಓದಿ|ಮತ್ತಷ್ಟು...
Marketplace